IPL 2022 Auction: ಮುಂಬೈ ಇಂಡಿಯನ್ಸ್​ ಪಾಲಾದ RCB ಫ್ಯಾನ್..!

Dewald Brevis: ಅಂಡರ್​ 19 ವಿಶ್ವಕಪ್​ನಲ್ಲಿ 506 ರನ್​ ಬಾರಿಸುವ ಮೂಲಕ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನೂ ಕೂಡ ಬ್ರೆವಿಸ್ ಬರೆದಿದ್ದರು. 18ರ ಹರೆಯದ ಬೇಬಿ ಎಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೀಡಿದ್ದ ವೇಳೆ, ಆರ್​ಸಿಬಿ ತಂಡದ ಪರ ಆಡುವ ಕನಸು ಹೊಂದಿದ್ದೇನೆ ಎಂದು ತಿಳಸಿದ್ದರು.

IPL 2022 Auction: ಮುಂಬೈ ಇಂಡಿಯನ್ಸ್​ ಪಾಲಾದ RCB ಫ್ಯಾನ್..!
Dewald Brevis
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 12, 2022 | 7:35 PM

ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್​ಸಿಬಿ ಪರ ಆಡಬೇಕೆಂದು ಕನಸು ಕಂಡಿದ್ದ ಬೇಬಿ ಎಬಿ ಖ್ಯಾತಿಯ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್​ಮನ್ ಡೆವಾಲ್ಡ್ ಬ್ರೆವಿಸ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಬ್ರೆವಿಸ್ ಅವರನ್ನು 3 ಕೋಟಿ ರೂ. ನೀಡಿ ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಡೆವಾಲ್ಡ್ ಬ್ರೆವಿಸ್ (Dewald Brevis) ಅಂಡರ್ 19 ವಿಶ್ವಕಪ್​ ಮೂಲಕ ಇದೀಗ ಬೇಬಿ ಎಬಿ ಎಂದೇ ಫೇಮಸ್ ಆಗಿದ್ದರು. ಟೀಮ್ ಇಂಡಿಯಾ ಅಂಡರ್ 19 ತಂಡದ ವಿರುದ್ದದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ ಎಬಿಡಿ ಶೈಲಿಯಲ್ಲಿ ಬೀಸಿ ಎಲ್ಲರ ಗಮನ ಸೆಳೆದಿದ್ದರು.

3ನೇ ಕ್ರಮಾಂಕಕ್ಕೆ ಕಣಕ್ಕಿಳಿದ ಬ್ರೆವಿಸ್ ಭಾರತದ ವಿರುದ್ಧ 65 ರನ್ ಬಾರಿಸಿದ್ದರು. ಈ ವೇಳೆ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್​ ವೇಳೆ ಸ್ಟೇಟ್ ಡ್ರೈವ್‌ಗಳು, ರಿವರ್ಸ್ ಸ್ವೀಪ್‌ಗಳು ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್​ ಅನ್ನು ಹೋಲುತ್ತಿತ್ತು. ಇದರ ಬೆನ್ನಲ್ಲೇ ತಂಡದ ಸಹ ಆಟಗಾರರು ಕೂಡ ಬೇಬಿ ಎಬಿ ಎಂಬ ಪೋಸ್ಟರ್​ಗಳನ್ನು ಪ್ರದರ್ಶಿಸಿ ಬ್ರೆವಿಸ್ ಅವರನ್ನು ಹುರಿದುಂಬಿಸಿದರು. ಇದರೊಂದಿಗೆ ಈತ ಎಬಿಡಿಯಂತೆ ಬ್ಯಾಟ್ ಬೀಸುತ್ತಿರುವುದು ಕನ್ಫರ್ಮ್ ಆಗಿತ್ತು.

ಅಷ್ಟೇ ಅಲ್ಲದೆ ಅಂಡರ್​ 19 ವಿಶ್ವಕಪ್​ನಲ್ಲಿ 506 ರನ್​ ಬಾರಿಸುವ ಮೂಲಕ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನೂ ಕೂಡ ಬ್ರೆವಿಸ್ ಬರೆದಿದ್ದರು. 18ರ ಹರೆಯದ ಬೇಬಿ ಎಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೀಡಿದ್ದ ವೇಳೆ, ಆರ್​ಸಿಬಿ ತಂಡದ ಪರ ಆಡುವ ಕನಸು ಹೊಂದಿದ್ದೇನೆ ಎಂದು ತಿಳಸಿದ್ದರು. ಆರ್​ಸಿಬಿ ತಂಡದ ಅಭಿಮಾನಿಯಾಗಿದ್ದ ಬೇಬಿ ಎಬಿ, ಡಿವಿಲಿಯರ್ಸ್​ರಂತೆ ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ನನ್ನ ನೆಚ್ಚಿನ ಆಟಗಾರರು ಆಡಿದ ಐಪಿಎಲ್ ತಂಡದ ಪರ ಆಡಬೇಕೆಂಬ ಕನಸು ಹೊಂದಿರುವುದಾಗಿ ಬೇಬಿ ಎಬಿ ತಿಳಿಸಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಕಾಶ ಸಿಗದಿದ್ದರೂ ಬೇಬಿ ಎಬಿ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಐಪಿಎಲ್​ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

(IPL 2022 Auction: Dewald Brevis goes to Mumbai Indians for Rs 3 crore)

Published On - 7:34 pm, Sat, 12 February 22

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!