AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ- ಗುಜರಾತ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ?

RCB vs GT Qualifier 1 IPL 2026: ಇಂದು ನಡೆಯಲಿರುವ ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಸೆಣಸಲಿವೆ. ವಿಜೇತರು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಸೋತವರು ಕ್ವಾಲಿಫೈಯರ್ 2 ಗೆ ಹೋಗುತ್ತಾರೆ. ಈ ಲೇಖನವು ಉಭಯ ತಂಡಗಳ ಮುಖಾಮುಖಿ ದಾಖಲೆಗಳು, ಕ್ವಾಲಿಫೈಯರ್ ಪಂದ್ಯಗಳ ಇತಿಹಾಸ ಮತ್ತು ಧರ್ಮಶಾಲಾ ಕ್ರೀಡಾಂಗಣದ ಅನುಭವವನ್ನು ವಿಶ್ಲೇಷಿಸುತ್ತದೆ. ಆರ್‌ಸಿಬಿಗೆ ಮೈದಾನದ ಪರಿಚಯವಿದ್ದರೆ, ಜಿಟಿಗೆ ಇದು ಹೊಸದು.

IPL 2026: ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ- ಗುಜರಾತ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ?
Rcb Vs GtImage Credit source: IPL X
ಪೃಥ್ವಿಶಂಕರ
|

Updated on:May 26, 2026 | 3:21 PM

Share

ಐಪಿಎಲ್ 2026 ರ ಕ್ವಾಲಿಫೈಯರ್ 1 (Qualifier 1 IPL 2026) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಮೇ 26 ರಂದು ಅಂದರೆ ಇಂದು ನಡೆಯುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಸೋತ ತಂಡ ಮತ್ತೊಂದು ಅವಕಾಶವೆಂಬಂತೆ ಕ್ವಾಲಿಫೈಯರ್ 2 ಆಡಲಿದೆ. ಇನ್ನು ಕ್ವಾಲಿಫೈಯರ್ 1 ರಲ್ಲಿ ಮುಖಾಮುಖಿಯಾಗಲಿರುವ ಆರ್‌ಸಿಬಿ ಮತ್ತು ಗುಜರಾತ್ ಎರಡೂ ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಆದ್ದರಿಂದ ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಎರಡೂ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

ಐಪಿಎಲ್‌ನಲ್ಲಿ ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಒಟ್ಟು ಎಂಟು ಬಾರಿ ಮುಖಾಮುಖಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಪೈಕಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇತ್ತ ಗುಜರಾತ್ ಟೈಟಾನ್ಸ್ ನಾಲ್ಕರಲ್ಲಿ ಗೆದ್ದಿದೆ. ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಜಿಟಿ ವಿರುದ್ಧ ಐದು ವಿಕೆಟ್‌ಗಳಿಂದ ಜಯಗಳಿಸಿತ್ತು. ಆದಾಗ್ಯೂ, ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಕ್ವಾಲಿಫೈಯರ್​ನಲ್ಲಿ ಉಭಯ ತಂಡಗಳ ದಾಖಲೆ

ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ತಂಡವು ಈ ಹಿಂದೆ ಮೂರು ಬಾರಿ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಿದ್ದು, ಎರಡು ಬಾರಿ ಗೆದ್ದು ಒಮ್ಮೆ ಸೋತಿದೆ. ಐಪಿಎಲ್ 2025 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್‌ಗೇರಿತ್ತು. ಹಾಗೆಉಏ 2016 ರಲ್ಲಿ, ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ್ದರೆ, 2011 ರಲ್ಲಿ, ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು.

ಇತ್ತ ಗುಜರಾತ್ ಟೈಟಾನ್ಸ್ ಮೊದಲ ಕ್ವಾಲಿಫೈಯರ್‌ನಲ್ಲಿ ಮಿಶ್ರ ದಾಖಲೆಯನ್ನು ಹೊಂದಿದೆ. ಗುಜರಾತ್ ಇದುವರೆಗೆ ಎರಡು ಬಾರಿ ಮೊದಲ ಕ್ವಾಲಿಫೈಯರ್‌ ಆಡಿದೆ. ಇದರಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದೆ. 2022 ರಲ್ಲಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಜಿಟಿ ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆದರೆ 2023 ರಲ್ಲಿ, ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿತ್ತು.

IPL 2026: ಕಳೆದ 5 ಆವೃತ್ತಿಗಳ ಫಲಿತಾಂಶ; ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್

ಧರ್ಮಶಾಲಾದಲ್ಲಿ ಜಿಟಿ ಆಡಿಲ್ಲ

ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಕೊಂಚ ಮೇಲುಗೈ ಸಾಧಿಸಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಈ ಮೈದಾನದ ಪರಿಚಯವಿಲ್ಲ. 2022 ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಪಂದ್ಯ ಆಡುತ್ತಿರುವುದು ಇದೇ ಮೊದಲು. ಏತನ್ಮಧ್ಯೆ, ಆರ್‌ಸಿಬಿ ಈಗಾಗಲೇ ಐಪಿಎಲ್ 2026 ರಲ್ಲಿ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಅದನ್ನು ಗೆದ್ದಿದೆ. ಆ ಪಂದ್ಯದಲ್ಲಿ, ಆರ್‌ಸಿಬಿ 222 ರನ್ ಗಳಿಸಿ ಪಂಜಾಬ್ ಕಿಂಗ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Tue, 26 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್
ಜಮೀರ್ ಸಿಎಂ ಆಗಲಿ ಎಂದ ಸ್ವಾಮೀಜಿಯ ವಿಡಿಯೋ ವೈರಲ್!
ಜಮೀರ್ ಸಿಎಂ ಆಗಲಿ ಎಂದ ಸ್ವಾಮೀಜಿಯ ವಿಡಿಯೋ ವೈರಲ್!
ಫ್ರಾನ್ಸ್​ನಲ್ಲಿ ಬಿಸಿಲ ತಾಪ ಹೆಚ್ಚಳ, ರೈಲಿನಲ್ಲಿ ಕೂರಲಾರದೆ ಹೊರ ಬಂದ ಜನ
ಫ್ರಾನ್ಸ್​ನಲ್ಲಿ ಬಿಸಿಲ ತಾಪ ಹೆಚ್ಚಳ, ರೈಲಿನಲ್ಲಿ ಕೂರಲಾರದೆ ಹೊರ ಬಂದ ಜನ
ಪರೀಕ್ಷೆಯಲ್ಲಿ ಮೊಬೈಲ್​, ಬುಕ್​​ ಇಟ್ಕೊಂಡು ನಕಲು ಮಾಡ್ತಿರೋ ವಿಡಿಯೋ ವೈರಲ್!
ಪರೀಕ್ಷೆಯಲ್ಲಿ ಮೊಬೈಲ್​, ಬುಕ್​​ ಇಟ್ಕೊಂಡು ನಕಲು ಮಾಡ್ತಿರೋ ವಿಡಿಯೋ ವೈರಲ್!