
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಮೊದಲು ದಿನದಂದು ಟಾಸ್ ಗೆದ್ದ ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ತಂಡದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡುವ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಸ್ವತಃ ನಾಯಕ ಇಶಾನ್ ಕಿಶನ್ ಅವರೇ ಅಜೇಯ ಶತಕ ಬಾರಿಸುವ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸುವ ಮೂಲಕ ತಂಡವನ್ನು 400 ರನ್‌ಗಳ ಸಮೀಪಕ್ಕೆ ತಂದಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಪೂರ್ವ ವಲಯ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 385 ರನ್ ಕಲೆಹಾಕಿದೆ.
ದಿನದಾಟದಂತ್ಯದ ಕೊನೆಯ ಸೆಷನ್ನಲ್ಲಿ ನಾಯಕ ಇಶಾನ್ ಇಶಾನ್ ಕಿಶನ್ ತಮ್ಮ ಶತಕವನ್ನು ಪೂರೈಸಿದರು. ಹಾಗೆಯೇ ಕುಮಾರ್ ಕುಶಾಗ್ರ ಅವರೊಂದಿಗೆ ಜೊತೆಗೂಡಿ 5ನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನಿರ್ಮಿಸಿದ್ದಾರೆ. ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ನಾಯಕ ಇಶಾನ್ ಕಿಶನ್ 135 ಎಸೆತಗಳಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 111 ರನ್ ಬಾರಿಸಿದ್ದರೆ, ಕುಮಾರ್ ಕುಶಾಗ್ರ 75 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ ಬಾರಿಸಿ 63 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಪೂರ್ವ ವಲಯ ತಂಡಕ್ಕೆ ಅಭಿಮನ್ಯು ಈಶ್ವರನ್ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್‌ಗೆ 100 ರನ್ ಸೇರಿಸುವ ಮೂಲಕ ಉತ್ತಮ ಆರಂಭ ನೀಡಿದರು. ಈ ಪಾಲುದಾರಿಕೆಯನ್ನು ಮುರಿದ ಚಾಮ ಮಿಲಿಂದ್, ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿದರು. ವೈಭವ್ 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 44 ರನ್ ಬಾರಿಸಿ ಔಟಾದರು. ಇತ್ತ ಈಶ್ವರನ್ 86 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿ ರನ್ ಔಟ್ ಆದರು.
ದುಲೀಪ್ ಟ್ರೋಫಿ ಫೈನಲ್; ಸ್ಫೋಟಕ ಶತಕ ಬಾರಿಸಿದ ಇಶಾನ್ ಕಿಶನ್
ಸುದೀಪ್ ಕುಮಾರ್ ಕೇವಲ 6 ರನ್ಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ಶಿಖರ್ ಮೋಹನ್ ನಾಯಕ ಇಶಾನ್ ಅವರೊಂದಿಗೆ 94 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಶಿಖರ್ 120 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 85 ರನ್ ಬಾರಿಸಿ ಔಟಾದರು. ಇದರ ನಂತರ, ಇಶಾನ್ ಮತ್ತು ಕುಶಾಗ್ರ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಯಾವುದೇ ವಿಕೆಟ್ ಬೀಳದಂತೆ ನೋಡಿಕೊಂಡರು. ಇಬ್ಬರೂ ಈಗ ಐದನೇ ವಿಕೆಟ್‌ಗೆ 144 ರನ್‌ಗಳನ್ನು ಸೇರಿಸಿದ್ದಾರೆ. ಇಶಾನ್ ಶತಕ ಗಳಿಸಿದ್ದರೆ, ಕುಶಾಗ್ರ ಅರ್ಧಶತಕದೊಂದಿಗೆ ಅಜೇಯರಾಗಿ ಉಳಿದಿದ್ದಾರೆ.
Published On - 5:59 pm, Sun, 6 September 26