Moeen Ali: ಆ್ಯಶಸ್ ಪಂದ್ಯದ ಮಧ್ಯೆ ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್​ ಅಲಿ: ಐಸಿಸಿಯಿಂದ ಕಠಿಣ ಕ್ರಮ

Ashes, ENG vs AUS: ಮೂರನೇ ದಿನದಾಟ ಕೆಲಹೊತ್ತು ಮಾತ್ರ ನಡೆಯಿತು. ಇದರ ನಡುವೆ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿಗೆ ಐಸಿಸಿ ದಂಡ ವಿಧಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಮೊಯಿನ್ ಅಲಿ ತಾವು ಬೌಲಿಂಗ್ ಮಾಡುವ ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದಾರೆ.

Moeen Ali: ಆ್ಯಶಸ್ ಪಂದ್ಯದ ಮಧ್ಯೆ ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್​ ಅಲಿ: ಐಸಿಸಿಯಿಂದ ಕಠಿಣ ಕ್ರಮ
Moeen Ali
Follow us
Vinay Bhat
|

Updated on: Jun 19, 2023 | 7:51 AM

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ (Ashes) ಟೆಸ್ಟ್‌ ಸರಣಿ ಕುತೂಹಲ ಮೂಡಿಸಿದೆ. ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಉಸ್ಮಾನ್ ಖ್ವಾಜಾ (Usman Khawaja) ಅವರ ಅಜೇಯ ಶತಕದ ನೆರವಿನಿಂದ 386 ರನ್ ಗಳಿಸಿತು. ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್​ಗೆ ಮಳೆ ಅಡ್ಡಿ ಪಡಿಸಿತು. ಮೂರನೇ ದಿನದಾಟ ಕೆಲಹೊತ್ತು ಮಾತ್ರ ನಡೆಯಿತು. ಇದರ ನಡುವೆ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿಗೆ (Moeen Ali) ಐಸಿಸಿ ದಂಡ ವಿಧಿಸಿದೆ.

ಈ ಟೆಸ್ಟ್ ಪಂದ್ಯದಲ್ಲಿ ಮೊಯಿನ್ ಅಲಿ ತಾವು ಬೌಲಿಂಗ್ ಮಾಡುವ ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದಾರೆ. ಇನಿಂಗ್ಸ್‌ನ 89ನೇ ಓವರ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲಿ ಈ ದ್ರಾವಣವನ್ನು ತಮ್ಮ ಕೈಬೆರಳುಗೆ ಸಿಂಪಡಿಸಿಕೊಂಡಿದ್ದು ಟಿವಿಯಲ್ಲಿ ಪ್ರಸಾರವಾಗಿತ್ತು. ಸಿಂಪಡಿಸಿಕೊಂಡ ನಂತರ ಅವರು ಬೌಲಿಂಗ್ ಮಾಡಿದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘನೆಯಾಗಿದ್ದು, ಅಲಿ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.

ಪೂರ್ವಾನುಮತಿ ಇಲ್ಲದೇ ಈ ರೀತಿಯ ದ್ರಾವಣಗಳನ್ನು ಬಳಸುವಂತಿಲ್ಲ. ಮೊಯಿನ್​ ಅಲಿ ಅವರ ಶಿಸ್ತಿನ ಅಂಶಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಅಲಿ ಮಾಡಿದ ಮೊದಲ ಅಪರಾಧ ಇದಾಗಿದೆ. ಅಲಿ ಅಪರಾಧವನ್ನು ಒಪ್ಪಿಕೊಂಡಿದ್ದು, ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ದಂಡವನ್ನು ಅಲಿ ಒಪ್ಪಿಕೊಂಡಿದ್ದರಿಂದ ಔಪಚಾರಿಕ ವಿಚಾರಣೆಯ ನಡೆಸುವ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ
Image
Ashes 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್..! ವಿಶೇಷ ದಾಖಲೆ ಬರೆದ ಜೇಮ್ಸ್ ಆಂಡರ್ಸನ್
Image
Ashes 2023: 3ನೇ ದಿನದಾಟ ಮಳೆಗೆ ಆಹುತಿ: ಇಂಗ್ಲೆಂಡ್ ತಂಡಕ್ಕೆ ಅಲ್ಪ ಮುನ್ನಡೆ
Image
ಒಂದೇ ದಿನದಲ್ಲಿ 510 ರನ್​ ಕಲೆಹಾಕಿದ ಇಂಗ್ಲೆಂಡ್..!
Image
KL Rahul: ಕೆಎಲ್ ರಾಹುಲ್ ಕಂಬ್ಯಾಕ್ ಯಾವಾಗ? ಇಲ್ಲಿದೆ ಉತ್ತರ

Cricket Records: ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದು ಯಾರು ಗೊತ್ತಾ?

ಅಲಿ ಅವರು ಸ್ಪ್ರೇ ಅನ್ನು ಚೆಂಡಿನ ಮೇಲೆ ಬಳಸಿಲ್ಲ, ಕೇವಲ ಕೈಗಳಿಗೆ ಹಾಕಿಕೊಂಡಿದ್ದಾರೆ. ಅವರು ಬಾಲ್​ಗೆ ಸ್ಪ್ರೇ ಬಳಸಿದ್ದಲ್ಲಿ ಇದು ಐಸಿಸಿ ಆಟದ ಷರತ್ತುಗಳ ಅನ್ವಯ 41.3 ಅನ್ನು ಉಲ್ಲಂಘಿಸಿದಂತಾಗುತ್ತಿತ್ತು. ಪಂದ್ಯದ ಬಾಲ್​ನ ಸ್ಥಿತಿ ಬದಲಾವಣೆಗೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಲ್ಲಿ ಅಲಿ ಕೇವಲ ಕೈಗಳಿಗೆ ಮಾತ್ರ ಸ್ಪ್ರೇ ಬಳಸಿದ್ದಾರೆ ಎಂಬುದನ್ನು ಅಂಪೈರ್​ಗಳು ದೃಢಪಡಿಸಿದ್ದಾರೆ.

ಇಂಗ್ಲೆಂಡ್​​ಗೆ 35 ರನ್​ಗಳ ಮುನ್ನಡೆ:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಜಾಕ್ ಕ್ರಾವ್ಲಿ (61) ಹಾಗೂ ಒಲಿ ಪೋಪ್ (31) 70 ರನ್​ಗಳ ಜೊತೆಯಾಟ ಆಡಿದರು. ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭರ್ಜರಿ ಬ್ಯಾಟ್​ ಬೀಸಿದರು. ಜಾನಿ ಬೇರ್​ಸ್ಟೋವ್​ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್​ಗಳ ಜತೆಯಾಟ ನೀಡಿದರು. ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 118 ರನ್ ಚಚ್ಚಿದರು.

ತನ್ನ ಪ್ರಥಮ ಇನಿಂಗ್ಸ್​​​ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಉಸ್ಮಾನ್ ಖ್ವಾಜಾ 321 ಎಸೆತಗಳಲ್ಲಿ 141 ರನ್ ಗಳಿಸಿದರೆ, ಟ್ರೇವಿಸ್​ ಹೆಡ್ (50), ಕ್ಯಾಮರೂನ್​ ಗ್ರೀನ್​ 38 ರನ್​, ಅಲೆಕ್ಸ್​ ಕ್ಯಾರಿ 66, ಪ್ಯಾಟ್ ಕಮಿನ್ಸ್ 38 ರನ್​ಗಳ ಕೊಡುಗೆ ನೀಡಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 28 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದು 35 ರನ್​ಗಳ ಮುನ್ನಡೆಯಲ್ಲಿದೆ. ಒಲಿ ಪೋಪ್ ಹಾಗೂ ಜೋ ರೂಟ್ ಖಾತೆ ತೆರೆಯದೆ ಕ್ರೀಸ್​ನಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ