ಕೊನೆಯ ದಿನದಾಟದ ರೋಚಕತೆ: ರನ್​ ಚೇಸ್ ಮಾಡಿ ಗೆಲ್ಲುತ್ತಾ ಆಸ್ಟ್ರೇಲಿಯಾ!

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಅಂತಿಮ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಮೊದಲ ಇನಿಂಗ್ಸ್​ನಲ್ಲಿ 329 ರನ್ ಪೇರಿಸಿದರೆ, ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 429 ರನ್ ಕಲೆಹಾಕಿತು. ಇದೀಗ ದ್ವಿತೀಯ ಇನಿಂಗ್ಸ್​​ನಲ್ಲಿ ಸೌತ್ ಆಫ್ರಿಕಾ 387 ರನ್​​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾಗೆ ಕೊನೆಯ ಇನಿಂಗ್ಸ್​ನಲ್ಲಿ 288 ರನ್​​​ಗಳ ಗುರಿ ನೀಡಿದೆ.

ಕೊನೆಯ ದಿನದಾಟದ ರೋಚಕತೆ: ರನ್​ ಚೇಸ್ ಮಾಡಿ ಗೆಲ್ಲುತ್ತಾ ಆಸ್ಟ್ರೇಲಿಯಾ!
Australia
Image Credit source: GettyImages

Updated on: Oct 31, 2026 | 12:41 PM

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸರಣಿಯ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯವು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಐದನೇ ಹಾಗೂ ಅಂತಿಮ ದಿನದ ಆಟ ಆರಂಭವಾಗಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈ ಪಂದ್ಯದ ಮೇಲಿದೆ. ಸರಣಿ ಕೈವಶ ಮಾಡಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 288 ರನ್‌ಗಳ ಗುರಿ ನೀಡಲಾಗಿದೆ.

ಒಂದು ವೇಳೆ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಪಡೆ ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರೆ, ಅದು ಕಳೆದ 18 ವರ್ಷಗಳಲ್ಲೇ (2008 ರ ಬಳಿಕ) ಆಸ್ಟ್ರೇಲಿಯಾ ತಂಡದ ಅತಿ ದೊಡ್ಡ ಮತ್ತು ಕೇಪ್ ಟೌನ್ ಮೈದಾನದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ರನ್ ಚೇಸ್ ಸಾಧನೆ ಎನಿಸಿಕೊಳ್ಳಲಿದೆ!

ಆದರೆ, ಐದನೇ ದಿನದ ಪಿಚ್ ಸಂಪೂರ್ಣವಾಗಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡಲಿದ್ದು, ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಸೈಮನ್ ಹಾರ್ಮರ್ ಅವರ ಸ್ಪಿನ್ ಜಾಲವನ್ನು ಭೇದಿಸಿ ಈ 288 ರನ್‌ಗಳನ್ನು ಗಳಿಸುವುದು ಆಸೀಸ್ ಪಡೆಗೆ ಅಷ್ಟು ಸುಲಭವಾಗಿಲ್ಲ. ಹೀಗಾಗಿಯೇ, ಕ್ರಿಕೆಟ್ ಜಗತ್ತಿನ ಎರಡು ಬಲಿಷ್ಠ ತಂಡಗಳ ನಡುವಣ ಈ ಬಿಗ್ ಫೈಟ್‌ನಲ್ಲಿ ಅಂತಿಮವಾಗಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಗೆದ್ದು ಬೀಗಿದ ಇತಿಹಾಸ:

ಇಂಟ್ರೆಸ್ಟಿಂಗ್ ವಿಷಯವೆಂದರೆ, ಇದೇ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಈ ಹಿಂದೆ 331 ರನ್‌ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಸೌತ್ ಆಫ್ರಿಕಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ದಾಖಲೆ ಹೊಂದಿದ. ಇದೀಗ ಅದೇ ಮೈದಾನದಲ್ಲಿ ಮತ್ತೊಮ್ಮೆ ಕಂಗಾರೂ ಪಡೆಗೆ 288 ರನ್‌ಗಳ ಸವಾಲಿನ ಗುರಿ ಎದುರಾಗಿದೆ. ಆದರೆ ಈ ಬಾರಿ ಕೊನೆಯ ಇನ್ನಿಂಗ್ಸ್‌ನ ಅಂತಿಮ ದಿನದಾಟದಲ್ಲಿ ಪಂದ್ಯ ಸಾಗುತ್ತಿರುವುದರಿಂದ, ಉಭಯ ತಂಡಗಳಿಂದ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.

ಆಸ್ಟ್ರೇಲಿಯಾ ತಂಡದ ಯಶಸ್ವಿ ಟೆಸ್ಟ್ ರನ್ ಚೇಸಿಂಗ್:

ಗುರಿ ಸ್ಕೋರ್ ಎದುರಾಳಿ ಮೈದಾನ ವರ್ಷ
404 404/3 ಇಂಗ್ಲೆಂಡ್ ಹೆಡಿಂಗ್ಲೆ, ಲೀಡ್ಸ್ 1948
369 369/6 ಪಾಕಿಸ್ತಾನ ಹೋಬಾರ್ಟ್ 1999
359 362/7 ವೆಸ್ಟ್ ಇಂಡೀಸ್ ಜಾರ್ಜ್‌ಟೌನ್ 1978
336 336/5 ಸೌತ್ ಆಫ್ರಿಕಾ ಡರ್ಬನ್ 1950
331 334/6 ಸೌತ್ ಆಫ್ರಿಕಾ ಕೇಪ್ ಟೌನ್ 2002

ಬದಲಾದ ಆಸೀಸ್ ಶೈಲಿ:

ಒಂದು ಕಾಲದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ರನ್ ಬೆನ್ನಟ್ಟುವುದು ಆಸ್ಟ್ರೇಲಿಯಾ ತಂಡಕ್ಕೆ ದೌರ್ಬಲ್ಯವಾಗಿತ್ತು. ಆದರೆ ಪ್ಯಾಟ್ ಕಮಿನ್ಸ್ ನಾಯಕತ್ವ ವಹಿಸಿಕೊಂಡ ನಂತರ ಈ ಟ್ರೆಂಡ್ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ 282 ರನ್ ಹಾಗೂ ನ್ಯೂಝಿಲೆಂಡ್ ವಿರುದ್ಧ 279 ರನ್‌ಗಳ ಕಠಿಣ ಗುರಿಯನ್ನು ಈ ಆಸೀಸ್ ಪಡೆ ಯಶಸ್ವಿಯಾಗಿ ಚೇಸ್ ಮಾಡಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಕನ್ನಡಿಗ ಔಟ್, ಕಾಶ್ಮೀರಿ ವೇಗಿ ಇನ್!

ಆದರೆ ನ್ಯೂಲ್ಯಾಂಡ್ಸ್‌ನ ಐದನೇ ದಿನದ ಕಠಿಣ ಪಿಚ್‌ನಲ್ಲಿ ಆಸ್ಟ್ರೇಲಿಯಾ ಮತ್ತೊಂದು ಐತಿಹಾಸಿಕ ಜಯ ದಾಖಲಿಸುತ್ತಾ ಅಥವಾ ಆಫ್ರಿಕನ್ ಪಡೆ ತವರು ನೆಲದಲ್ಲಿ ಮೇಲುಗೈ ಸಾಧಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us