India vs England: ಟೀಮ್ ಇಂಡಿಯಾ ಸೋಲಿಗೆ ಇದುವೇ ಕಾರಣ..!

India vs England 5th Test: ಈ ಪಂದ್ಯದ ಕೊನೆಯ ದಿನದಂದು ಇಂಗ್ಲೆಂಡ್ ಗೆಲುವಿಗೆ 119 ರನ್ ಅಗತ್ಯವಿತ್ತು. ಇತ್ತ ಭಾರತಕ್ಕೆ 7 ವಿಕೆಟ್​ಗಳ ಅವಶ್ಯಕತೆಯಿತ್ತು.

India vs England: ಟೀಮ್ ಇಂಡಿಯಾ ಸೋಲಿಗೆ ಇದುವೇ ಕಾರಣ..!
India vs England
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 05, 2022 | 5:52 PM

India vs England 5th Test: 15 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ಕಮರಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ. ಈ ಪಂದ್ಯದ ಐದನೇ ಹಾಗೂ ಕೊನೆಯ ದಿನದಂದು ಇಂಗ್ಲೆಂಡ್ ಗೆಲುವಿಗೆ 119 ರನ್ ಅಗತ್ಯವಿತ್ತು. ಇತ್ತ ಭಾರತಕ್ಕೆ 7 ವಿಕೆಟ್​ಗಳ ಅವಶ್ಯಕತೆಯಿತ್ತು. ಆದರೆ, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಜೋಡಿ ಭಾರತದ ಭರವಸೆಯನ್ನು ಹುಸಿಗೊಳಿಸಿದರು. ನಾಲ್ಕನೇ ದಿನ ಗೆಲುವಿನ ಬುನಾದಿ ಹಾಕಿದ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು​ ಕೊನೆಯ ದಿನ ಭರ್ಜರಿ ಜಯ ಸಾಧಿಸಿದರು. ಜೋ ರೂಟ್ ಹಾಗೂ ಜಾನಿ ಬೈರ್​ಸ್ಟೋವ್ 269 ರನ್​ಗಳ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್​​ ಗೆಲುವಿನ ರುವಾರಿಗಳಾದರೆ, ಟೀಮ್ ಇಂಡಿಯಾ ಸೋಲಿಗೆ ಇದುವೇ ಬಹುದೊಡ್ಡ ಕಾರಣವಾಯಿತು. ಇದಾಗ್ಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಡಿದ ಕೆಲ ತಪ್ಪುಗಳಿಂದ ಪಂದ್ಯ ಕೈ ಜಾರಿತ್ತು ಎಂದರೂ ತಪ್ಪಾಗಲಾರದು. ಹಾಗಿದ್ರೆ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ 5 ತಪ್ಪುಗಳೇನು ನೋಡೋಣ…

  1. ಮೊದಲ ಕಾರಣ: ಜಸ್​ಪ್ರೀತ್ ಬುಮ್ರಾ ಹೊರತಾಗಿ ಬೇರಾವ ಬೌಲರ್​ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಗೆಲ್ಲಲು 378 ರನ್‌ಗಳ ಗುರಿ ನೀಡಿತ್ತು. ಇಷ್ಟು ದೊಡ್ಡ ಗುರಿ ಬೆನ್ನತ್ತಿ ಇಂಗ್ಲೆಂಡ್ ಇದುವರೆಗೆ ಜಯ ಸಾಧಿಸಿರಲಿಲ್ಲ. ಅಷ್ಟೇ ಯಾಕೆ ಎಡ್ಜ್‌ಬಾಸ್ಟನ್‌ನಲ್ಲಿಯೂ ಯಾವುದೇ ತಂಡ 285 ಪ್ಲಸ್ ಸ್ಕೋರ್ ಅನ್ನು ಬೆನ್ನಟ್ಟಿ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮೊನಚಿಲ್ಲದ ಭಾರತೀಯ ಬೌಲರ್​ಗಳನ್ನು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಬೆಂಡೆತ್ತಿದ್ದರು. ಬುಮ್ರಾ ಹೊರತುಪಡಿಸಿ ಎಲ್ಲಾ ಬೌಲರ್​ಗಳು 4ಕ್ಕಿಂತ ಹೆಚ್ಚು ಎಕಾನಮಿ ರೇಟ್​ನಲ್ಲಿ ರನ್ ನೀಡಿದ್ದರು. ಅದರಲ್ಲೂ ಮೊಹಮ್ಮದ್ ಸಿರಾಜ್ 6 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್​ ನೀಡಿದ್ದಾರೆ. ಅಂದರೆ ಯಾವುದೇ ಹಂತದಲ್ಲೂ ಭಾರತೀಯ ಬೌಲರ್​ಗಳು ಇಂಗ್ಲೆಂಡ್​ಗೆ ಮೇಲೆ ಒತ್ತಡ ಹಾಕುವಲ್ಲಿ ಸಫಲರಾಗಿರಲಿಲ್ಲ ಎಂಬುದು ಸ್ಪಷ್ಟ. ಪರಿಣಾಮ ಐತಿಹಾಸಿಕ ಗೆಲುವು ಇಂಗ್ಲೆಂಡ್ ಪಾಲಾಯಿತು.
  2. ಎರಡನೇ ಕಾರಣ: ಹನುಮ ವಿಹಾರಿ ಕೈಬಿಟ್ಟ ಬೈರ್ ಸ್ಟೋ ಕ್ಯಾಚ್ ಟೀಮ್ ಇಂಡಿಯಾ ಪಾಲಿಗೆ ಮುಳುವಾಯಿತು. ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಜಾನಿ ಬೈರ್ ಸ್ಟೋ ಎರಡನೇ ಇನಿಂಗ್ಸ್ ನಲ್ಲೂ ಶತಕ ಬಾರಿಸಿದರು. ಆದರೆ ಇಂತಹದೊಂದು ಅವಕಾಶವನ್ನು ಟೀಮ್ ಇಂಡಿಯಾವೇ ನೀಡಿತ್ತು. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬೈರ್‌ಸ್ಟೋವ್ 14 ರನ್‌ಗಳಿಸಿದ್ದಾಗ ನಾಲ್ಕನೇ ಸ್ಲಿಪ್​ನತ್ತ ಕ್ಯಾಚ್ ನೀಡಿದ್ದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹನುಮ ವಿಹಾರಿ ಕ್ಯಾಚ್ ಅನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿ ಉತ್ತಮ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು. ಇದಾದ ಬಳಿಕ ರಿಷಭ್ ಪಂತ್ ಕೈಯಿಂದ ಬೈರ್‌ಸ್ಟೋ ಅವರ ಕಠಿಣ ಕ್ಯಾಚ್ ಕೂಡ ಕೈ ತಪ್ಪಿತು. ಇದರ ಸಂಪೂರ್ಣ ಲಾಭ ಪಡೆದ ಆಂಗ್ಲ ಬ್ಯಾಟ್ಸ್ ಮನ್ ಶತಕ ಬಾರಿಸುವ ಮೂಲಕ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡರು.
  3. ಮೂರನೇ ಕಾರಣ: ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕಳಪೆ ಪ್ರದರ್ಶನ ಕೂಡ ಟೀಮ್ ಇಂಡಿಯಾ ಸೋಲಿಗೆ ಕಾರಣ ಎನ್ನಬಹುದು. ಏಕೆಂದರೆ ಈ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 11 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್ ಗಳಿಸಿ ಔಟಾಗಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿದ್ದ ಶ್ರೇಯಸ್ ಅಯ್ಯರ್ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಯ್ಯರ್​ ಎರಡು ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು ಒಟ್ಟು 34 ರನ್ ಮಾತ್ರ. ಅಂದರೆ ಮಧ್ಯಮ ಕ್ರಮಾಂಕದಲ್ಲಿ ಆಧಾರಸ್ತಂಭವಾಗಬೇಕಿದ್ದ ಶ್ರೇಯಸ್ ಅಯ್ಯರ್ ಬಂದ ವೇಗದಲ್ಲೇ ಹಿಂತಿರುಗಿದ್ದರು.
  4. ನಾಲ್ಕನೇ ಕಾರಣ: ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ನಾಯಕತ್ವ ಕೂಡ ಇಂಗ್ಲೆಂಡ್ ಪಾಲಿಗೆ ವರವಾಯಿತು. ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 378 ರನ್‌ಗಳ ಗುರಿಯನ್ನು ನೀಡಿತ್ತು. ಇದುವರೆಗೆ ಇಂಗ್ಲೆಂಡ್‌ನಲ್ಲಿ ಯಾವುದೇ ತಂಡ ಇಷ್ಟು ದೊಡ್ಡ ಗುರಿ ಸಾಧಿಸಿರಲಿಲ್ಲ. ಆದರೆ ಇಂಗ್ಲೆಂಡ್ ಆರಂಭಿಕರಾದ ಜಾಕ್ ಕ್ರೌಲಿ ಮತ್ತು ಅಲೆಕ್ಸ್ ಲೀಸ್ ಸ್ಪೋಟಕ ಇನಿಂಗ್ಸ್ ಆಡಲಾರಂಭಿಸಿದ್ದರು. ಇತ್ತ ಬುಮ್ರಾ ರಕ್ಷಣಾತ್ಮಕ ಫೀಲ್ಡಿಂಗ್‌ನಿಂದಾಗಿ ಭಾರತೀಯ ಬೌಲರ್‌ಗಳು ರಿವರ್ಸ್ ಸ್ವಿಂಗ್‌ನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಪರಿಣಾಮ ಲೀಸ್-ಕ್ರೌಲಿ ಜೋಡಿ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟವಾಡಿದರು. ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಕೂಡ ರಕ್ಷಣಾತ್ಮಕ ಫೀಲ್ಡಿಂಗ್​ನ ಲಾಭ ಪಡೆದು 200ಕ್ಕೂ ಹೆಚ್ಚು ರನ್​ಗಳನ್ನು ಕಲೆಹಾಕಿದ್ದರು. ಅಂದರೆ ಬುಮ್ರಾ ಅವರ ನಾಯಕತ್ವದ ಅನುಭವದ ಕೊರತೆ ಕೂಡ ಇಂಗ್ಲೆಂಡ್​ಗೆ ಪ್ಲಸ್ ಪಾಯಿಂಟ್ ಆಯಿತು.
  5. ಇದನ್ನೂ ಓದಿ
    Image
    IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
    Image
    6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
    Image
    Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
    Image
    Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?
  6. ಐದನೇ ಕಾರಣ: ಭಾರತ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 132 ರನ್ ಮುನ್ನಡೆ ಸಾಧಿಸಿತ್ತು. ಆದರೆ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ತಾಳ್ಮೆಯ ಆಟ ಪ್ರದರ್ಶಿಸುವಲ್ಲಿ ಎಡವಿತು. ಉತ್ತಮ ಜೊತೆಯಾಟದ ಅನಿವಾರ್ಯತೆಯಿದ್ದಾಗ, ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ದರು. ಇತ್ತ ನಾಲ್ಕನೇ ದಿನದಾಟದಲ್ಲಿ ಸಂಪೂರ್ಣವಾಗಿ ತಾಳ್ಮೆಯಿಂದ ಬ್ಯಾಟ್ ಬೀಸಿ ಡ್ರಾ ಮಾಡಿಕೊಂಡಿದ್ದರೂ, ಟೀಮ್ ಇಂಡಿಯಾಗೆ ಸರಣಿ ಗೆಲ್ಲುವ ಅವಕಾಶವಿತ್ತು. ಆದರೆ ಬೃಹತ್ ಮೊತ್ತ ಪೇರಿಸುವ ಗುರಿಯೊಂದಿಗೆ ಬ್ಯಾಟ್ ಬೀಸಿದ ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 245 ರನ್​ಗಳು ಮಾತ್ರ. ಅಂದರೆ ವಿಕೆಟ್​ಗಳು ಕಳೆದುಕೊಳ್ಳುತ್ತಿದ್ದರೂ ಭಾರತೀಯ ಬ್ಯಾಟ್ಸ್​ಮನ್​ಗಳು ರಕ್ಷಣಾತ್ಮಕ ಆಟದೊಂದಿಗೆ 4ನೇ ದಿನದಾಟ ಪೂರ್ಣಗೊಳಿಸಲು ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂದೇ ಹೇಳಬಹುದು. ಅತ್ತ 378 ರನ್​ಗಳ ಗುರಿ ಪಡೆದರೂ ಇಂಗ್ಲೆಂಡ್​ಗೆ 4ನೇ ದಿನದಾಟದ 2ನೇ ಮತ್ತು 3ನೇ ಸೆಷನ್​ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿತು. ಅದನ್ನು ಸಂಪೂರ್ಣವಾಗಿ ಬಳಸಿಕೊಂಡ ಇಂಗ್ಲೆಂಡ್, ಅಂತಿಮ ದಿನದಾಟದಲ್ಲಿ ಸುಲಭ ಜಯ ಸಾಧಿಸಿತು.

Published On - 5:51 pm, Tue, 5 July 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ