‘ಪಂತ್ ಬಂದರೆ ಭರತ್​ಗೆ ತಂಡದಲ್ಲಿ ಜಾಗವಿಲ್ಲ’; ಟೀಂ ಇಂಡಿಯಾ ಮಾಜಿ ವೇಗಿಯ ಎಚ್ಚರಿಕೆ

IND vs ENG: ಕೆಎಸ್ ಭರತ್ ಪ್ರಸ್ತುತ ಭಾರತ ತಂಡದ ಭಾಗವಾಗಿದ್ದಾರೆ. ಆದರೆ ಆಯ್ಕೆದಾರರು ಅಥವಾ ಮ್ಯಾನೇಜ್‌ಮೆಂಟ್ ಭರತ್ ಬದಲಿಯಾಗಿ ಬೇರೆ ವಿಕೆಟ್ ಕೀಪರ್ ಬ್ಯಾಟರ್ ಸಾಮರ್ಥ್ಯವನ್ನು ಕಂಡುಕೊಂಡರೆ, ಕೆಎಸ್ ಭರತ್ ಬೆಂಚ್ ಮೇಲೆ ಕುಳಿತುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಆರ್​ಪಿ ಸಿಂಗ್ ಹೇಳಿದ್ದಾರೆ.

‘ಪಂತ್ ಬಂದರೆ ಭರತ್​ಗೆ ತಂಡದಲ್ಲಿ ಜಾಗವಿಲ್ಲ’; ಟೀಂ ಇಂಡಿಯಾ ಮಾಜಿ ವೇಗಿಯ ಎಚ್ಚರಿಕೆ
ರಿಷಬ್ ಪಂತ್, ಕೆಎಸ್ ಭರತ್
Follow us
ಪೃಥ್ವಿಶಂಕರ
|

Updated on:Feb 10, 2024 | 7:55 PM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಭಾರತ (India vs England) ತಂಡವನ್ನು ಪ್ರಕಟಿಸಲಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳ ಕಳಪೆ ಪ್ರದರ್ಶನದಿಂದಾಗಿ ಹಲವು ಆಟಗಾರರ ಮೇಲೆ ಕತ್ತಿ ನೇತಾಡುತ್ತಿದ್ದು, ಅದರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಸ್ ಭರತ್ (KS Bharat) ಹೆಸರೂ ಸೇರಿತ್ತು. ಆದರೆ, ತಂಡದ ಮ್ಯಾನೇಜ್‌ಮೆಂಟ್ ಅವರ ಮೇಲಿನ ನಂಬಿಕೆ ಇಟ್ಟು ತಂಡದಲ್ಲಿ ಉಳಿಸಿಕೊಂಡಿದೆ. ಆದರೆ, ಭರತ್ ತಂಡದಲ್ಲಿ ಉಳಿದುಕೊಂಡಿದ್ದರೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ತೀರ ಕಡಿಮೆ ಇವೆ. ಏಕೆಂದರೆ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಧೃವ್ ಜುರೇಲ್ ಇದ್ದು, ಅವರಿಗೆ ಆಡುವ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಭರತ್​ಗೆ ತಂಡದ ಮಾಜಿ ವೇಗದ ಬೌಲರ್ ಆರ್.ಪಿ ಸಿಂಗ್ (RP Singh) ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.

ತೂಗ ಕತ್ತಿ ನೇತಾಡುತ್ತಿದೆ

ಈ ಬಗ್ಗೆ ಮಾತನಾಡಿರುವ ಆರ್​.ಪಿ ಸಿಂಗ್, ‘ಭರತ್ ಅವರ ತಲೆಯ ಮೇಲೆ ತೂಗ ಕತ್ತಿ ನೇತಾಡುತ್ತಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂತ್ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟರೆ, ಭರತ್​ಗೆ ತಂಡದಲ್ಲಿ ಅವಕಾಶ ಸಿಗುವುದು ಅಸಾಧ್ಯ. ಮೊದಲೆರಡು ಟೆಸ್ಟ್‌ಗಳಲ್ಲಿ ಉತ್ತಮ ಆರಂಭ ಪಡೆದ ಹೊರತಾಗಿಯೂ ಭರತ್, ಅದನ್ನು ಬಿಗ್ ಸ್ಕೋರ್‌ಗಳಾಗಿ ಪರಿವರ್ತಿಸಲು ವಿಫಲರಾಗಿದ್ದಾರೆ. ತಂಡದಲ್ಲಿ ಬೇರೆ ಯಾವುದೇ ವಿಕೆಟ್ ಕೀಪರ್ ಉತ್ತಮ ಪ್ರದರ್ಶನ ನೀಡಿದರೆ ಭರತ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ ಎಂದು ಆರ್ ಪಿ ಸಿಂಗ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಆರ್.ಪಿ.ಸಿಂಗ್, ‘ತಂಡದಲ್ಲಿ ಬಹುಶಃ 3-4 ಆಟಗಾರರು ಪ್ರದರ್ಶನ ನೀಡುವ ಒತ್ತಡದಲ್ಲಿಲ್ಲ. ಉಳಿದಂತೆ ಎಲ್ಲರ ಮೇಲೂ ಅದರಲ್ಲೂ ಕೆ.ಎಸ್.ಭರತ್ ಬದಲಿಯಾಗಿ ತಂಡ ಸೇರಿಕೊಳ್ಳಲು ಸಾಕಷ್ಟು ಆಟಗಾರರು ಕ್ಯೂನಲ್ಲಿ ಇದ್ದು, ಭರತ್ ಮೇಲೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡವಿದೆ. ಇವರಲ್ಲದೆ ರಿಷಬ್ ಪಂತ್ ಕೂಡ ಇಂಜುರಿಯಿಂದ ಚೇತರಿಸಿಕೊಂಡು ಬರುತ್ತಿದ್ದಾರೆ.

ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು

ಕೆಎಸ್ ಭರತ್ ಪ್ರಸ್ತುತ ಭಾರತ ತಂಡದ ಭಾಗವಾಗಿದ್ದಾರೆ. ಆದರೆ ಆಯ್ಕೆದಾರರು ಅಥವಾ ಮ್ಯಾನೇಜ್‌ಮೆಂಟ್ ಭರತ್ ಬದಲಿಯಾಗಿ ಬೇರೆ ವಿಕೆಟ್ ಕೀಪರ್ ಬ್ಯಾಟರ್ ಸಾಮರ್ಥ್ಯವನ್ನು ಕಂಡುಕೊಂಡರೆ, ಕೆಎಸ್ ಭರತ್ ಬೆಂಚ್ ಮೇಲೆ ಕುಳಿತುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ ಇಂಗ್ಲೆಂಡ್ ವಿರುದ್ಧ ಭರತ್ ಕೆಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಇದರರ್ಥ ಭರತ್ ಪ್ರದರ್ಶನ ಮಾಡಿಲ್ಲವೆಂದಲ್ಲ. ಅದೇ ರೀತಿಯ ಪ್ರದರ್ಶನವನ್ನು ಪುನರಾವರ್ತಿಸಲು, ಅವರು ಸ್ವಲ್ಪ ಪ್ಲಾನ್ ಮಾಡಿ ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡಬೇಕು. ಬೇರೆ ಆಟಗಾರ ಬಂದರೆ ತಂಡದಿಂದ ನನಗೆ ಗೇಟ್​ಪಾಸ್ ಸಿಗುತ್ತದೆ ಎಂದು ಭಾವಿಸಬಾರದು. ತಂಡದಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಾಗಿದೆ. ಆದರೆ ಪ್ರಸ್ತುತ ಕೆ.ಎಸ್.ಭರತ್ ನಮಗೆ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಭರತ್ ತನ್ನ ಪ್ರತಿಸ್ಪರ್ಧಿಗಳ ಮೇಲೆ ಗಮನ ಕೊಡದೆ ತಂಡದಲ್ಲಿ ತನ್ನ ಪಾತ್ರದ ಮೇಲೆ ಕೆಲಸ ಮಾಡುವಂತೆ ಆರ್​ಪಿ ಸಿಂಗ್​ ಸಲಹೆ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Sat, 10 February 24

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್