AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ತಂಡವನ್ನು ಮುನ್ನಡೆಸಿದ 38 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

India vs South Africa, 2nd Test: ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದುಕೊಂಡಿದೆ. 33 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 100 ರನ್​ಗಳ ಗಡಿದಾಟಿದ್ದು, ಟೀಮ್ ಇಂಡಿಯಾ 2 ವಿಕೆಟ್ ಕಬಳಿಸಲಷ್ಟೇ ಯಶಸ್ವಿಯಾಗಿದ್ದಾರೆ.

ಭಾರತ ತಂಡವನ್ನು ಮುನ್ನಡೆಸಿದ 38 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ
Team India
ಝಾಹಿರ್ ಯೂಸುಫ್
|

Updated on:Nov 22, 2025 | 11:57 AM

Share

ಭಾರತ ಟೆಸ್ಟ್ ತಂಡದ 38ನೇ ನಾಯಕನಾಗಿ ರಿಷಭ್ ಪಂತ್ ಪಾದಾರ್ಪಣೆ ಮಾಡಿದ್ದಾರೆ. ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಪಂತ್ ಟೆಸ್ಟ್​ನಲ್ಲಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್​​ಮನ್ ಗಿಲ್  ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಪಂದ್ಯದ ಮೊದಲ ಇನಿಂಗ್ಸ್​ನ ಬ್ಯಾಟಿಂಗ್ ವೇಳೆ ಅವರು ಕುತ್ತಿಗೆ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಶುಭ್​​ಮನ್ ಗಿಲ್ ಅನುಪಸ್ಥಿತಿಯಲ್ಲಿ ಇದೀಗ ದ್ವಿತೀಯ ಟೆಸ್ಟ್​ನಲ್ಲಿ ರಿಷಭ್ ಪಂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್​ ತಂಡವನ್ನು ಮುನ್ನಡೆಸಿದ 38ನೇ ನಾಯಕನೆಂಬ ಹೆಗ್ಗಳಿಕೆ ಪಂತ್ ಪಾಲಾಗಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಟೆಸ್ಟ್​ನಲ್ಲಿ ಮುನ್ನಡೆಸಿದ ಕ್ಯಾಪ್ಟನ್​ಗಳ ಪಟ್ಟಿ ಈ ಕೆಳಗಿನಂತಿದೆ…

  1.  ಸಿ.ಕೆ. ನಾಯುಡು (1932-1934) – 4 ಪಂದ್ಯಗಳು
  2.  ಮಹಾರಾಜಕುಮಾರ್ (ವಿಝಿಯನಗರಂ) (1936-1936) – 3 ಪಂದ್ಯಗಳು
  3.  ಇಫ್ತಿಕಾರ ಪಟೌಡಿ (1946-1946) – 3 ಪಂದ್ಯಗಳು
  4.  ಲಾಲಾ ಅಮರನಾಥ್ (1947-1952) – 15 ಪಂದ್ಯಗಳು
  5. ವಿಜಯ್ ಹಝಾರೆ (1951-1953) – 14 ಪಂದ್ಯಗಳು
  6.  ವಿನೂ ಮಂಕಡ್ (1955-1959) – 6 ಪಂದ್ಯಗಳು
  7.  ಗುಲಾಮ್ ಅಹ್ಮದ್ (1955-1959) – 3 ಪಂದ್ಯಗಳು
  8.  ಪಾಲಿ ಉಮ್ರಿಗರ್ (1955-1958) – 8 ಪಂದ್ಯಗಳು
  9.  ಹೇಮು ಅಧಿಕಾರಿ (1959-1959) – 1 ಪಂದ್ಯ
  10.  ದತ್ತ ಗಾಯಕ್ವಾಡ್ (1959-1959) – 4 ಪಂದ್ಯಗಳು
  11. ಪಂಕಜ್ ರಾಯ್ (1959-1959) – 1 ಪಂದ್ಯ
  12.  ಜಿಎಸ್ ರಾಮಚಂದ್ (1959-1960) – 5 ಪಂದ್ಯಗಳು
  13.  ನಾರಿ ಕಾಂಟ್ರಾಕ್ಟರ್ (1960-1962) – 12 ಪಂದ್ಯಗಳು
  14.  ಮನ್ಸೂಲಿ ಅಲಿ ಖಾನ್ ಪಟೌಡಿ (1962-1975) – 40 ಪಂದ್ಯಗಳು
  15.  ಚಂದು ಬೋರ್ಡೆ (1967-1967) – 1 ಪಂದ್ಯ
  16.  ಅಜಿತ್ ವಾಡೇಕರ್ (1971-1974) – 16 ಪಂದ್ಯಗಳು
  17.  ಎಸ್ ವೆಂಕಟರಾಘವನ್ (1974-1979) – 5 ಪಂದ್ಯಗಳು
  18.  ಸುನಿಲ್ ಗವಾಸ್ಕರ್ (1976-1985) – 47 ಪಂದ್ಯಗಳು
  19.  ಬಿಶನ್ ಬೇಡಿ (1976-1978) – 22 ಪಂದ್ಯಗಳು
  20.  ಗುಂಡಪ್ಪ ವಿಶ್ವನಾಥ್ (1980-1980) – 2 ಪಂದ್ಯಗಳು
  21. ಕಪಿಲ್ ದೇವ್ (1983-1987) – 34 ಪಂದ್ಯಗಳು
  22. ದಿಲೀಪ್ ವೆಂಗ್‌ಸರ್ಕರ್ (1987-1989) – 10 ಪಂದ್ಯಗಳು
  23.  ರವಿಶಾಸ್ತ್ರಿ (1988-1988) – 1 ಪಂದ್ಯ
  24.  ಕೆ. ಶ್ರೀಕಾಂತ್ (1989-1989) – 4 ಪಂದ್ಯಗಳು
  25. ಮೊಹಮ್ಮದ್ ಅಝರುದ್ದೀನ್ (1990-1999) – 47 ಪಂದ್ಯಗಳು
  26. ಸಚಿನ್ ತೆಂಡೂಲ್ಕರ್ (1996-2000) – 25 ಪಂದ್ಯಗಳು
  27.  ಸೌರವ್ ಗಂಗೂಲಿ (2000-2005) – 49 ಪಂದ್ಯಗಳು
  28.  ರಾಹುಲ್ ದ್ರಾವಿಡ್ (2003-2007) – 25 ಪಂದ್ಯಗಳು
  29.  ವೀರೇಂದ್ರ ಸೆಹ್ವಾಗ್ (2005-2012) – 4 ಪಂದ್ಯಗಳು
  30. ಅನಿಲ್ ಕುಂಬ್ಳೆ (2007-2008) – 14 ಪಂದ್ಯಗಳು
  31. ಎಂ.ಎಸ್. ಧೋನಿ (2008-2014) – 60 ಪಂದ್ಯಗಳು
  32.  ವಿರಾಟ್ ಕೊಹ್ಲಿ (2014-2022) – 68 ಪಂದ್ಯಗಳು
  33.  ಅಜಿಂಕ್ಯ ರಹಾನೆ (2017-2021) – 6 ಪಂದ್ಯಗಳು
  34.  ಕೆ.ಎಲ್. ರಾಹುಲ್ (2022-2022) – 3 ಪಂದ್ಯಗಳು
  35.  ರೋಹಿತ್ ಶರ್ಮಾ (2022-2024) – 24 ಪಂದ್ಯಗಳು
  36. ಜಸ್ಪ್ರೀತ್ ಬುಮ್ರಾ (2022-2025) – 3 ಪಂದ್ಯಗಳು
  37.  ಶುಭಮನ್ ಗಿಲ್ (2025*) – 8 ಪಂದ್ಯಗಳು
  38. ರಿಷಭ್ ಪಂತ್ (2025*) – 1 ಪಂದ್ಯ

ಇದನ್ನೂ ಓದಿ: 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೀಗೆ ಔಟಾಗಿದ್ದು ಇದೇ ಮೊದಲು..!

ಶತಕ ಪೂರೈಸಿದ ಸೌತ್ ಆಫ್ರಿಕಾ:

ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಸೌತ್ ಆಫ್ರಿಕಾ ತಂಡವು 33 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 102 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಟೆಂಬಾ ಬವುಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

Published On - 11:56 am, Sat, 22 November 25

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ