‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ನಿಜ ಕುಸ್ತಿಪಟುಗಳ ಜೊತೆ ಕಾಳಗ
Ram Charan movie: ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಹಾಡುಗಳು, ಸಿನಿಮಾದ ಟೀಸರ್, ಟ್ರೈಲರ್ ಎಲ್ಲವೂ ಈಗಾಗಲೇ ಹಿಟ್ ಆಗಿದೆ. ಸತತ ಎರಡು ಸೋಲು ಕಂಡಿರುವ ರಾಮ್ ಚರಣ್ ಸಹ ‘ಪೆದ್ದಿ’ಯನ್ನು ಗೆಲ್ಲಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದು, ‘ಪೆದ್ದಿ’ ಸಿನಿಮಾಕ್ಕಾಗಿ ಭಾರಿ ಶ್ರಮವನ್ನೇ ಹಾಕಿದ್ದಾರೆ. ಆ ಬಗ್ಗೆ ಖುದ್ದು ರಾಮ್ ಚರಣ್ ಮಾತನಾಡಿದ್ದಾರೆ.

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಹಾಡುಗಳು, ಸಿನಿಮಾದ ಟೀಸರ್, ಟ್ರೈಲರ್ ಎಲ್ಲವೂ ಈಗಾಗಲೇ ಹಿಟ್ ಆಗಿದೆ. ಚಿತ್ರತಂಡವೂ ಸಹ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದು, ಪ್ರಚಾರಕ್ಕೆಂದೇ ಮೂರು-ನಾಲ್ಕು ಕೋಟಿ ಹಣ ಖರ್ಚು ಮಾಡುತ್ತಿದೆ. ಸತತ ಎರಡು ಸೋಲು ಕಂಡಿರುವ ರಾಮ್ ಚರಣ್ ಸಹ ‘ಪೆದ್ದಿ’ಯನ್ನು ಗೆಲ್ಲಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದು, ‘ಪೆದ್ದಿ’ ಸಿನಿಮಾಕ್ಕಾಗಿ ಭಾರಿ ಶ್ರಮವನ್ನೇ ಹಾಕಿದ್ದಾರೆ. ಆ ಬಗ್ಗೆ ಖುದ್ದು ರಾಮ್ ಚರಣ್ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದೆ ರಾಮ್ ಚರಣ್ ಮತ್ತು ‘ಪೆದ್ದಿ’ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ವಿಡಿಯೋನಲ್ಲಿ, ರಾಮ್ ಚರಣ್ ಕಾರು ಡ್ರೈವ್ ಮಾಡಿಕೊಂಡು ಬುಚ್ಚಿ ಬಾಬು ಸನಾ ಅವರನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದರು. ಆ ವೇಳೆ ಇಬ್ಬರೂ ಸಹ ‘ಪೆದ್ದಿ’ ಸಿನಿಮಾದ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಅದನ್ನು ಬುಚ್ಚಿ ಬಾಬು ಮೊಬೈಲ್ನಲ್ಲಿ ಶೂಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು.
ಬುಚ್ಚಿ ಬಾಬು ಹೇಳಿರುವಂತೆ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾಕ್ಕಾಗಿ ಮೂರು ಬಾರಿ ದೇಹವನ್ನು ಬದಲಾಯಿಸಿಕೊಳ್ಳಬೇಕಾಯ್ತಂತೆ. ಕ್ರಿಕೆಟಿಗನ ದೇಹಕ್ಕಾಗಿ ತೆಳ್ಳಗೆ ಆದರೆ ಬಲವಾಗಿ ಕಾಣುವಂತೆ ದೇಹವನ್ನು ಹುರಿಗೊಳಿಸಿದ್ದ ರಾಮ್ ಚರಣ್ ಆ ನಂತರ ಕುಸ್ತಿ ಪಟುವಿನ ಪಾತ್ರಕ್ಕಾಗಿ ವಿಪರೀತ ವರ್ಕೌಟ್ ಮಾಡಿದರಂತೆ. ಆ ಬಳಿಕ ಸಿನಿಮಾದಲ್ಲಿ ಬರುವ ಮತ್ತೊಂದು ಪ್ರಮುಖ ದೃಶ್ಯಕ್ಕಾಗಿ ಮತ್ತೆ ಬೇರೆ ರೀತಿಯ ದೇಹದಾರ್ಡ್ಯವನ್ನು ಮಾಡಿಕೊಂಡರಂತೆ.
ಇದನ್ನೂ ಓದಿ:ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ
ಇನ್ನು ಸಿನಿಮಾದ ಕುಸ್ತಿ ದೃಶ್ಯದ ಶೂಟಿಂಗ್ ಬಗ್ಗೆ ಮಾತನಾಡಿರುವ ರಾಮ್ ಚರಣ್. ಸಿನಿಮಾ ಶೂಟಿಂಗ್ಗೆ ನಿಜವಾದ ಕುಸ್ತಿ ಪಟುಗಳನ್ನು ಕರೆದುಕೊಂಡು ಬರಲಾಗಿತ್ತು. ಅವರಿಗೆ ನಟನೆ ಗೊತ್ತಿಲ್ಲ, ಕ್ಯಾಮೆರಾ ಎದುರು ಫೇಕ್ ಆಗಿ ಫೈಟ್ ಮಾಡುವುದು ಗೊತ್ತಿಲ್ಲ. ಅವರು ನಿಜವಾಗಿಯೂ ಕುಸ್ತಿ ಮಾಡುತ್ತಿದ್ದರು. ಸಾಕಷ್ಟು ಬಾರಿ ನನ್ನ ಕುತ್ತಿಗೆ, ಕೈ, ಕಾಲುಗಳನ್ನು ಎಳೆದು ಪಟ್ಟುಗಳನ್ನು ಹಾಕುತ್ತಿದ್ದರು’ ಎಂದಿದ್ದಾರೆ. ಅದರಿಂದಲೇ ತಮ್ಮ ಕೈ ನೋವು ಶುರುವಾಗಿದೆ ಎಂದಿದ್ದ ರಾಮ್ ಚರಣ್ ಆ ನಂತರ ಕೈ ನೋವಿಗೆ ಶಸ್ತ್ರಚಿಕಿತ್ಸೆಗೆ ಸಹ ಒಳಗಾದರು.
ಒಟ್ಟಾರೆ ‘ಪೆದ್ದಿ’ ಸಿನಿಮಾಕ್ಕಾಗಿ ರಾಮ್ ಚರಣ್ ಬಹಳ ಶ್ರಮ ಪಟ್ಟಿದ್ದು, ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Thu, 21 May 26





