ಇದೇ ಕಾರಣಕ್ಕೆ ವೈಭವ್​ಗೆ ಅವಕಾಶ ನೀಡಲಿಲ್ಲ; ಗೌತಮ್ ಗಂಭೀರ್

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗದಿರಲು ಕೋಚ್ ಗೌತಮ್ ಗಂಭೀರ್ ಕಾರಣ ನೀಡಿದ್ದಾರೆ. ಟಿ20 ವಿಶ್ವಕಪ್ ತಂಡದ ಸಮತೋಲನ ಮುಖ್ಯವಾಗಿದ್ದು, ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯ ಮತ್ತು ಸ್ಥಿರ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಸೂರ್ಯವಂಶಿ ಪ್ರತಿಭಾವಂತ ಆಟಗಾರನಾದರೂ, ಸದ್ಯ ತಾಳ್ಮೆಯಿಂದ ಕಾಯಬೇಕಿದ್ದು, ಭವಿಷ್ಯದಲ್ಲಿ ಅವಕಾಶಗಳು ಸಿಗಲಿವೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ.

ಇದೇ ಕಾರಣಕ್ಕೆ ವೈಭವ್​ಗೆ ಅವಕಾಶ ನೀಡಲಿಲ್ಲ; ಗೌತಮ್ ಗಂಭೀರ್
ಗೌತಮ್ ಗಂಭೀರ್, ವೈಭವ್ ಸೂರ್ಯವಂಶಿ

Updated on: Sep 18, 2026 | 6:34 PM

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿತು. ಈ ಇಡೀ ಸರಣಿಯಲ್ಲಿ ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿತು. ಬ್ಯಾಟಿಂಗ್​ನಲ್ಲಿ ಬ್ಯಾಟರ್​ಗಳು ರನ್​ಗಳ ಮಳೆ ಸುರಿಸಿದರೆ, ಇತ್ತ ಬೌಲರ್​ಗಳು ಕೂಡ ತಮ್ಮ ಪರಾಕ್ರಮವನ್ನು ತೊರಿದರು. ಹೀಗಾಗಿ ಈ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಒಂದೇ ಒಂದು ಲೋಪವೂ ಕಂಡುಬರಲಿಲ್ಲ. ಆದಾಗ್ಯೂ ಈ ಸರಣಿಯಲ್ಲಿ 15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇದೀಗ ವೈಭವ್​ಗೆ ಏಕೆ ಈ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡಲಿಲ್ಲ ಎಂಬುದಕ್ಕೆ ಕೋಚ್ ಗೌತಮ್ ಗಂಭೀರ್ ಬಹಿರಂಗಪಡಿಸಿದ್ದಾರೆ.

ಅತ್ಯಂತ ಕಠಿಣ ನಿರ್ಧಾರವಾಗಿತ್ತು

ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಮಾತನಾಡಿದ ಗಂಭೀರ್, ‘ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟು ತಂಡದ ಸಂಯೋಜನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಂಜು ತನ್ನ ಸಾಮರ್ಥ್ಯವನ್ನು ತೋರಿಸಿದ್ದಾನೆಂದು ನಾನು ಭಾವಿಸುತ್ತೇನೆ. ಪ್ರತಿಭೆ ಇಲ್ಲದೆ ಯಾರೂ ಇದ್ದಕ್ಕಿದ್ದಂತೆ ವಿಶ್ವಕಪ್​ನಲ್ಲಿ ಟೂರ್ನಿಯ ಆಟಗಾರ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಇಂಗ್ಲೆಂಡ್ ಸರಣಿಗೆ ಸಂಜು ಬದಲಿಗೆ ಸೂರ್ಯವಂಶಿ ಅವರನ್ನು ಆಯ್ಕೆ ಮಾಡಿದ್ದು ನಾನು ಖಂಡಿತವಾಗಿಯೂ ನನ್ನ ಕೋಚಿಂಗ್ ವೃತ್ತಿಜೀವನದಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರವಾಗಿತ್ತು.

ಕೆಲವೊಮ್ಮೆ ನೀವು ಆಟಗಾರನ ಫಾರ್ಮ್ ಅನ್ನು ನೋಡುತ್ತೀರಿ. ಆದರೆ ವಿಶ್ವಕಪ್‌ಗಾಗಿ ತಂಡದ ಸಂಯೋಜನೆಯನ್ನು ಅಭಿವೃದ್ಧಿಪಡಿಸುವತ್ತ ನಮ್ಮ ಗಮನವಿದೆ. ಒಬ್ಬ ಆಟಗಾರ ಎರಡು ಅಥವಾ ಮೂರು ಪಂದ್ಯಗಳಲ್ಲಿ ವಿಫಲವಾದ ಮಾತ್ರಕ್ಕೆ ಆತ ಕಳಪೆ ಆಟಗಾರನಾಗುವುದಿಲ್ಲ. ಹಾಗೆಯೇ ವಿಶ್ವಕಪ್ ನಂತರ ಒಂದು ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದಾಕ್ಷಣ ಾ ತಂಡ ಕೆಟ್ಟದಾಗುವುದಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

ವೀರೇಂದ್ರ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ವೈಭವ್ ಸೂರ್ಯವಂಶಿ

ಸದ್ಯಕ್ಕೆ ವೈಭವ್ ತಾಳ್ಮೆಯಿಂದಿರಬೇಕು

ಇನ್ನು ಸೂರ್ಯವಂಶಿಯ ಬಗ್ಗೆ ಮಾತನಾಡಿದ ಗಂಭೀರ್, ‘ಸೂರ್ಯವಂಶಿ ಪ್ರತಿಭೆಯ ಬಗ್ಗೆ ತನಗೆ ಯಾವುದೇ ಸಂದೇಹವಿಲ್. ಆದರೆ ಸ್ಯಾಮ್ಸನ್ ಯಾವಾಗಲೂ ಅವನಿಗಿಂತ ಆದ್ಯತೆ ಪಡೆಯುತ್ತಾರೆ. ಅವಕಾಶ ಸಿಕ್ಕರೆ, ವೈಭವ್ ಕೂಡ ದೀರ್ಘಕಾಲದವರೆಗೆ ತಂಡದಲ್ಲಿ ಉಳಿಯುತ್ತಾರೆ. ಸದ್ಯಕ್ಕೆ ವೈಭವ್ ತಾಳ್ಮೆಯಿಂದಿರಬೇಕು. ವೈಭವ್ ತಮ್ಮ ಅವಕಾಶಕ್ಕಾಗಿ ಇನ್ನು ಕಾಯಬೇಕಾಗುತ್ತದೆ. ವೈಭವ್ ಎಂತಹ ಪ್ರತಿಭಾನ್ವಿತರು ಎಂದು ನಮಗೆ ತಿಳಿದಿದೆ. ಅವರು ಏನು ಮಾಡಬಹುದೆಂದು ನಮಗೆ ತಿಳಿದಿದೆ. ಆದರೆ ಒಬ್ಬ ಆಟಗಾರ ಈಗಾಗಲೇ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅವರಿಗೆ ತಂಡದಲ್ಲಿ ಆದ್ಯತೆ ನೀಡಲಾಗುವುದು. ವೈಭವ್ ಅವರ ಅವಕಾಶ ಬಂದಾಗಲೆಲ್ಲಾ ಅವರು ದೀರ್ಘಕಾಲ ಆಡುತ್ತಾರೆ’ ಎಂದು ಗಂಭೀರ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us