‘ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ’; ಸುದ್ದಿಗೋಷ್ಠಿಯಿಂದ ಗಂಭೀರ್​ನನ್ನು ದೂರವಿಡಿ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

Gautam Gambhir's Press Conference: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪತ್ರಿಕಾಗೋಷ್ಠಿಯ ನಂತರ, ಮಾಜಿ ಕ್ರಿಕೆಟ್ ಆಟಗಾರ ಸಂಜಯ್ ಮಂಜ್ರೇಕರ್ ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಗಂಭೀರ್ ಅವರ ಮಾತು ಮತ್ತು ನಡವಳಿಕೆಯನ್ನು ಪ್ರಶ್ನಿಸಿರುವ ಮಂಜ್ರೇಕರ್, ಅವರನ್ನು ಪತ್ರಿಕಾಗೋಷ್ಠಿಗಳಿಂದ ದೂರವಿಡಬೇಕೆಂದು ಸೂಚಿಸಿದ್ದಾರೆ.

‘ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ’; ಸುದ್ದಿಗೋಷ್ಠಿಯಿಂದ ಗಂಭೀರ್​ನನ್ನು ದೂರವಿಡಿ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
ಗೌತಮ್ ಗಂಭೀರ್
Follow us
ಪೃಥ್ವಿಶಂಕರ
|

Updated on: Nov 11, 2024 | 5:43 PM

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಅವರು ಟೀಂ ಇಂಡಿಯಾ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಪಾಪರಾಜಿಗಳು ಕೇಳಿದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರ ನೀಡಿದರು. ಕೆಎಲ್ ರಾಹುಲ್ ಫಾರ್ಮ್ ಬಗ್ಗೆಯೂ ಅವರು ಮಹತ್ವದ ಸಂಗತಿಯನ್ನು ಹಂಚಿಕೊಂಡರು. ಆದರೆ ಗೌತಮ್ ಗಂಭೀರ್ ಅವರ ಈ ಪತ್ರಿಕಾಗೋಷ್ಠಿಯ ನಂತರ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಅವರು, ಗೌತಮ್ ಗಂಭೀರ್ ಅವರಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ, ಅವರ ಬದಲು ರೋಹಿತ್ ಅಥವಾ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಸಂಜಯ್ ಮಂಜ್ರೇಕರ್ ವಿವಾದಾತ್ಮಕ ಟ್ವೀಟ್

ಗೌತಮ್ ಗಂಭೀರ್ ಅವರ ಪತ್ರಿಕಾಗೋಷ್ಠಿ ಮುಗಿದ ತಕ್ಷಣ ಸಂಜಯ್ ಮಂಜ್ರೇಕರ್, ಅವರ ಮೇಲೆ ಪ್ರಶ್ನೆಗಳನ್ನು ಎತ್ತಿದರು. ಮಂಜ್ರೇಕರ್ ಟ್ವೀಟ್ ಮಾಡಿ, ‘ಗೌತಮ್ ಗಂಭೀರ್ ಅವರ ಪತ್ರಿಕಾಗೋಷ್ಠಿಯನ್ನು ನೋಡಿದೆ. ಗೌತಮ್ ಗಂಭೀರ್ ಅವರನ್ನು ಈ ರೀತಿಯ ಪತ್ರಿಕಾಗೋಷ್ಠಿಯಿಂದ ದೂರವಿಡುವುದು ಬಿಸಿಸಿಐಗೆ ಒಳ್ಳೆಯದು. ಗಂಭೀರ್ ತೆರೆಮರೆಯಲ್ಲಿ ಮಾತ್ರ ಕೆಲಸ ಮಾಡಲಿ. ಗಂಭೀರ್​ಗೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಇದರ ಜೊತೆಗೆ ಶಿಷ್ಟಾಚಾರದ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ರೋಹಿತ್ ಮತ್ತು ಅಗರ್ಕರ್ ಮಾಧ್ಯಮಗಳೊಂದಿಗೆ ಮಾತನಾಡುವುದು ಸೂಕ್ತ ಎಂದು ನನಗನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಸದಾ ವಿವಾದದಲ್ಲಿ ಸಂಜಯ್

ಸಂಜಯ್ ಮಂಜ್ರೇಕರ್ ಅವರು ಗೌತಮ್ ಗಂಭೀರ್ ಬಗ್ಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಎತ್ತಿದ್ದು, ಮುಂದಿನ ದಿನಗಳಲ್ಲಿ ವಿವಾದ ಹೇಳುವುದು ಖಚಿತ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮಂಜ್ರೇಕರ್ ಆಗಾಗ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಸದಾ ವಿವಾದದಲ್ಲಿರುತ್ತಾರೆ. ಈ ಹಿಂದೆ ರವೀಂದ್ರ ಜಡೇಜಾ ಅವರ ವಿರುದ್ಧವೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಗೌತಮ್ ಗಂಭೀರ್ ಅವರನ್ನು ಟೀಕಿಸಿದ್ದಾರೆ.

ಗೌತಮ್ ಗಂಭೀರ್​ಗೆ ಅಗ್ನಿಪರೀಕ್ಷೆ

ಪ್ರಸ್ತುತ ಗೌತಮ್ ಗಂಭೀರ್ ಸಾಕಷ್ಟು ಒತ್ತಡದಲ್ಲಿದ್ದಾರೆ. ಏಕೆಂದರೆ ಅವರ ಕೋಚಿಂಗ್ ಅಡಿಯಲ್ಲಿ, ಟೀಂ ಇಂಡಿಯಾ ತನ್ನ ಸ್ವಂತ ತವರಿನಲ್ಲಿ ಟೆಸ್ಟ್ ಸರಣಿಯನ್ನು 0-3 ರಿಂದ ಕಳೆದುಕೊಂಡಿತು. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತ್ತು. ಅದಕ್ಕೂ ಮುನ್ನ ಶ್ರೀಲಂಕಾ ವಿರುದ್ಧವೂ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು. ಈಗ ಗೌತಮ್ ಗಂಭೀರ್ ಬಾರ್ಡರ್-ಗವಾಸ್ಕರ್ ಸರಣಿಯನ್ನಾಡಲು ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಫಲಿತಾಂಶವು ಟೀಂ ಇಂಡಿಯಾ ಪರವಾಗಿಲ್ಲದಿದ್ದರೆ, ಅದು ಗೌತಮ್ ಗಂಭೀರ್ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ