Glenn maxwell: ಸ್ವಿಚ್ ಶಾಟ್​ ಸಿಕ್ರೇಟ್ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್: ಎದುರಾಳಿಗೆ ಪರೋಕ್ಷ ಎಚ್ಚರಿಕೆ

| Updated By: ಝಾಹಿರ್ ಯೂಸುಫ್

Updated on: Sep 27, 2021 | 6:07 PM

IPL 2021: ಭಾನುವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿತ್ತು. ನಾವು ಏನು ಅಂದುಕೊಂಡಿದ್ದೆವೊ, ಎಲ್ಲವನ್ನೂ ಸರಿಯಾಗಿ ನಿಭಾಯಿಸಿದ್ದೆವು.

Glenn maxwell: ಸ್ವಿಚ್ ಶಾಟ್​ ಸಿಕ್ರೇಟ್ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್​ವೆಲ್: ಎದುರಾಳಿಗೆ ಪರೋಕ್ಷ ಎಚ್ಚರಿಕೆ
Glenn maxwell
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 14ನಲ್ಲಿ (IPL 2021) ಗ್ಲೆನ್ ಮ್ಯಾಕ್ಸ್​ವೆಲ್ (Glenn maxwell) ಅಬ್ಬರ ಮುಂದುವರೆದಿದೆ. ಮುಂಬೈ ಇಂಡಿಯನ್ಸ್ (Mumbai Indians)​ ವಿರುದ್ದ ಪಂದ್ಯದ ಮೂಲಕ ಯುಎಇನಲ್ಲೂ ಅಬ್ಬರಿಸಿದ್ದಾರೆ. ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ ಸೇರಿದಂತೆ ಬಲಿಷ್ಠ ಬೌಲಿಂಗ್ ಪಡೆಯನ್ನು ನಿರಾಯಾಸವಾಗಿ ಎದುರಿಸಿದ ಮ್ಯಾಕ್ಸ್​ವೆಲ್ 3 ಭರ್ಜರಿ ಸಿಕ್ಸ್​ ಹಾಗೂ 6 ಬೌಂಡರಿಗಳೊಂದಿಗೆ ಕೇವಲ 37 ಎಸೆತಗಳಲ್ಲಿ 56 ರನ್​ ಚಚ್ಚಿದ್ದರು. ಈ ಬಿರುಸಿನ ಬ್ಯಾಟಿಂಗ್ ಫಲವಾಗಿ ಆರ್​ಸಿಬಿ (RCB) 20 ಓವರ್​ನಲ್ಲಿ 165 ರನ್ ಪೇರಿಸುವಂತಾಯಿತು. ಇನ್ನು ಬೌಲಿಂಗ್​​ನಲ್ಲೂ ಮಿಂಚಿದ್ದ ಮ್ಯಾಕ್ಸ್​ವೆಲ್ 2 ವಿಕೆಟ್ ಉರುಳಿಸುವ ಮೂಲಕ ಆಲ್​ರೌಂಡರ್ ಪ್ರದರ್ಶನ ನೀಡಿ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಮ್ಯಾಕ್ಸ್​ವೆಲ್​ಗೆ ಒಲಿಯಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮ್ಯಾಕ್ಸ್​ವೆಲ್, ಭಾನುವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿತ್ತು. ನಾವು ಏನು ಅಂದುಕೊಂಡಿದ್ದೆವೊ, ಎಲ್ಲವನ್ನೂ ಸರಿಯಾಗಿ ನಿಭಾಯಿಸಿದ್ದೆವು. ಆರಂಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಭರತ್ ಪವರ್​ಪ್ಲೇನ ಸಂಪೂರ್ಣ ಲಾಭ ಪಡೆದು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದರಿಂದ ಬಳಿಕ ಬಂದ ನಾವೆಲ್ಲರೂ ಉತ್ತಮವಾಗಿ ಬ್ಯಾಟ್​ ಬೀಸಲು ಸಹಾಯವಾಯಿತು ಎಂದು ತಿಳಿಸಿದರು.

ಇದೇ ವೇಳೆ ಮ್ಯಾಕ್ಸ್​ವೆಲ್​ ಬ್ಯಾಟ್​ನಿಂದ ಸಿಡಿದ ಸಿಗ್ನೇಚರ್ ಶಾಟ್​ ಸ್ವೀಪ್​ ಸಿಕ್ಸ್ ಹಾಗೂ ಸ್ವಿಚ್ ಹಿಟ್​ಗಳ ಬಗ್ಗೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಮ್ಯಾಕ್ಸಿ, ಆ ಶಾಟ್​​ಗಳನ್ನು ಬಾರಿಸಲು ನಾನು ವರ್ಷಗಳ ಕಾಲ ಅಭ್ಯಾಸ ನಡೆಸಿದ್ದೇನೆ. ಇದೀಗ ಅದುವೇ ನನ್ನ ಶಕ್ತಿಯಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ನಾನು ಕಡಿಮೆ ಅಂತರದ ಬೌಂಡರಿ ಲೈನ್​ನತ್ತ ರಿವರ್ಸ್ ಸ್ವೀಪ್ ಮತ್ತು ಸ್ವಿಚ್ ಹಿಟ್​ಗಳನ್ನು ಬಾರಿಸುತ್ತೇನೆ. ಇದೇ ವೇಳೆ ಗಾಳಿ ಕೂಡ ಆಕಡೆ ಇದ್ದರೆ ಸ್ವಿಚ್​ ಶಾಟ್​ಗಳ ಮೊರೆ ಹೋಗುತ್ತೇನೆ. ಇದರಿಂದ ಚೆಂಡು ಕೂಡ ಬೌಂಡರಿಗೆ ವೇಗವಾಗಿ ತಲುಪುತ್ತದೆ ಎಂದು ತಮ್ಮ ರಿವರ್ಸ್ ಸ್ವೀಪ್ ಮತ್ತು ಸ್ವಿಚ್​ ಹಿಟ್ ಸಕ್ಸಸ್​ ಸಿಕ್ರೇಟ್​ ಅನ್ನು ಮ್ಯಾಕ್ಸ್​ವೆಲ್​ ಬಹಿರಂಗಪಡಿಸಿದರು.

ಅಷ್ಟೇ ಅಲ್ಲದೆ ಮುಂದಿನ ಪಂದ್ಯಗಳಲ್ಲೂ ಸ್ವಿಚ್ ಹಿಟ್ ಹಾಗೂ ರಿವರ್ಸ್​ ಸ್ವೀಪ್ ಶಾಟ್​​ಗಳ ಮೂಲಕ ಬೌಲರುಗಳನ್ನು ಎದುರಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಮ್ಯಾಕ್ಸ್​ವೆಲ್ ಎದುರಾಳಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ 10 ಪಂದ್ಯಗಳನ್ನಾಡಿರುವ ಮ್ಯಾಕ್ಸ್​ವೆಲ್ 14 ಸಿಕ್ಸ್ ಹಾಗೂ 24 ಬೌಂಡರಿಗಳೊಂದಿಗೆ 300 ರನ್​ ಕಲೆಹಾಕಿದ್ದಾರೆ. ಸೆಪ್ಟೆಂಬರ್​ 29 ರಂದು ಆರ್​ಸಿಬಿ ರಾಜಸ್ಥಾನ್ ರಾಯಲ್ಸ್​ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲೂ ಮ್ಯಾಕ್ಸ್​ವೆಲ್ ಸ್ವಿಚ್ ಹಿಟ್​ ಕಮಾಲ್ ತೋರಿಸಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(glenn maxwell reveals secret of switch shot)