Video: ನಾಟಕೀಯ ರನೌಟ್ ಮಾಡಿದ ಡಿಕೆ: ಕೋಪಗೊಂಡ ಮ್ಯಾಕ್ಸ್​​ವೆಲ್

| Updated By: ಝಾಹಿರ್ ಯೂಸುಫ್

Updated on: Sep 26, 2022 | 1:26 PM

India vs Australia: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್​ಗಳಲ್ಲಿ 186 ರನ್​ ಕಲೆಹಾಕಿತು. ಈ ಬೃಹತ್ ಗುರಿಹನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್​ಗಳಲ್ಲಿ 187 ರನ್​ ಬಾರಿಸಿ, 6 ವಿಕೆಟ್​ಗಳಿಂದ ಜಯ ಸಾಧಿಸಿತು.

Video: ನಾಟಕೀಯ ರನೌಟ್ ಮಾಡಿದ ಡಿಕೆ: ಕೋಪಗೊಂಡ ಮ್ಯಾಕ್ಸ್​​ವೆಲ್
Glenn Maxwell Runout
Follow us on

ಹೈದರಾಬಾದ್​ನಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ (India vs Australia) ನಡುವಣ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿತ್ತು. ಇದಾಗ್ಯೂ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಿದ್ದು ಡೇಂಜರಸ್ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್​ವೆಲ್ ಅವರ ರನೌಟ್. ಆದರೆ ಮ್ಯಾಕ್ಸ್​ವೆಲ್ ಅವರ ರನೌಟ್ ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.

8ನೇ ಓವರ್​ನಲ್ಲಿ ಮ್ಯಾಕ್ಸ್​ವೆಲ್ ಲೆಗ್​ ಸೈಡ್​ನತ್ತ ಭರ್ಜರಿ ಶಾಟ್ ಬಾರಿಸಿದ್ದರು. ಅಲ್ಲದೆ 2 ರನ್ ಕದಿಯುವ ಯತ್ನದಲ್ಲಿ ರನೌಟ್ ಆಗಿದ್ದರು. ಬೌಂಡರಿ ಲೈನ್​ನಿಂದ ಅಕ್ಷರ್ ಪಟೇಲ್ ಎಸೆದ ಚೆಂಡು ವಿಕೆಟ್​ಗೆ ತಾಗುವ ಮುನ್ನವೇ ಬಾಲ್ ಹಿಡಿಯುವ ತವಕದಲ್ಲಿ ದಿನೇಶ್ ಕಾರ್ತಿಕ್ ಅಚಾನಕ್ಕಾಗಿ ಬೇಲ್ಸ್​ ಎಗರಿಸಿದ್ದರು. ಇದಾದ ಬಳಿಕ ಚೆಂಡು ವಿಕೆಟ್​ಗೆ ತಗುಲಿತ್ತು.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇತ್ತ ಮೂರನೇ ಅಂಪೈರ್ ರಿಪ್ಲೇ ವೇಳೆ ಮೊದಲೇ ವಿಕೆಟ್ ಕೀಪರ್ ಕೈ ತಾಗಿ ಬೇಲ್ಸ್ ಎಗರಿದ್ದ ಕಾರಣ ನಾಟೌಟ್ ನೀಡಲಿದ್ದಾರೆ ಎಂದೇ ಮ್ಯಾಕ್ಸ್​ವೆಲ್ ಭಾವಿಸಿದ್ದರು. ಆದರೆ ಥರ್ಡ್​ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಮ್ಯಾಕ್ಸಿ ಕೋಪಗೊಂಡರು. ಅಲ್ಲದೆ ಅಂಪೈರ್ ತೀರ್ಪಿಗೆ ಅಸಮಾಧಾನವನ್ನು ಹೊರಹಾಕುತ್ತಾ ಮೈದಾನ ತೊರೆದರು.

ಆದರೆ ಚೆಂಡು ತಾಗುವ ಮುನ್ನವೇ ಬೇಲ್ಸ್ ಎಗರಿದ್ದರೂ, ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಲು ಮುಖ್ಯ ಕಾರಣ ಐಸಿಸಿ ನಿಯಮ. ಅಂದರೆ ಐಸಿಸಿ ನಿಯಮದ ಪ್ರಕಾರ ರನೌಟ್​ ವೇಳೆ ಸ್ಟಂಪ್‌ನ ಮೇಲಿರುವ ಎರಡು ಬೇಲ್‌ಗಳಲ್ಲಿ ಒಂದು ಇದ್ದರೂ ಸಾಕು. ಇತ್ತ ದಿನೇಶ್ ಕಾರ್ತಿಕ್ ಕೈ ತಾಗಿ ಒಂದು ಬೇಲ್ ಬಿದ್ದಿದ್ದರೂ ಮತ್ತೊಂದು ಬೇಲ್ ಹಾಗೇಯೇ ಇತ್ತು. ಆ ಬೇಲ್ಸ್ ಬೀಳುವ ಮೊದಲು ಮ್ಯಾಕ್ಸ್​ವೆಲ್ ಕ್ರೀಸ್​ಗೆ ತಲುಪಿರಲಿಲ್ಲ.

ಅತ್ತ ಅಕ್ಷ ಪಟೇಲ್ ಎಸೆದ ಥ್ರೋ ನೇರವಾಗಿ ಇನ್ನೊಂದು ಬೇಲ್ ಅನ್ನು ಎಗರಿಸಿತು. ಹೀಗಾಗಿ ಮೊದಲ ದಿನೇಶ್ ಕಾರ್ತಿಕ್ ಅವರ ಗ್ಲೌಸ್ ತಾಗಿ ಒಂದು ಬೇಲ್ಸ್ ಬಿದ್ದರೂ, ಆ ಬಳಿಕ ರನೌಟ್ ಆಗಿ ಗ್ಲೆನ್ ಮ್ಯಾಕ್ಸ್​ವೆಲ್ ಹೊರಹೋಗಬೇಕಾಯಿತು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್​ಗಳಲ್ಲಿ 186 ರನ್​ ಕಲೆಹಾಕಿತು. ಈ ಬೃಹತ್ ಗುರಿಹನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್​ಗಳಲ್ಲಿ 187 ರನ್​ ಬಾರಿಸಿ, 6 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

 

Published On - 1:25 pm, Mon, 26 September 22