MI vs GG, WPL 2023: ಗೆಲುವಿನ ನಾಗಾಲೋಟ ಮುಂದುವರೆಸಿದ ಮುಂಬೈ ಇಂಡಿಯನ್ಸ್

TV9 Web
| Updated By: ಝಾಹಿರ್ ಯೂಸುಫ್

Updated on:Mar 14, 2023 | 11:09 PM

Gujarat Giants vs Mumbai Indians: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದರು.

MI vs GG, WPL 2023: ಗೆಲುವಿನ ನಾಗಾಲೋಟ ಮುಂದುವರೆಸಿದ ಮುಂಬೈ ಇಂಡಿಯನ್ಸ್
MI vs GG

MI vs GG , WPL 2023: ಮುಂಬೈನ ಬ್ರಬೋರ್ನ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನಾಯಕ ಹರ್ಮನ್​ಪ್ರೀತ್ ಕೌರ್ (51) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಮುಂಬೈ ಇಂಡಿಯನ್ಸ್​ ವಿಕೆಟ್ ನಷ್ಟಕ್ಕೆ 162 ರನ್​ ಕಲೆಹಾಕಿತು.

163 ರನ್​ಗಳ ಸರ್ಧಾತ್ಮಕ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು ಮುಂಬೈ ಬೌಲರ್​ಗಳ ಮುಂದೆ ಕ್ರೀಸ್​ ಕಚ್ಚಿ ನಿಲ್ಲಲು ಪರದಾಡಿದರು. ಪರಿಣಾಮ 9 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್​ ತಂಡವು 107 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 55 ರನ್​ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಈ ಬಾರಿಯ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಸೋಲಿಲ್ಲದ ಸರದಾರರಾಗಿ ಮುಂಬೈ ಇಂಡಿಯನ್ಸ್ 5 ಗೆಲುವಿನೊಂದಿಗೆ ಜಯದ ನಾಗಾಲೋಟ ಮುಂದುವರೆಸಿದೆ.

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ(ನಾಯಕಿ), ಮಾನ್ಸಿ ಜೋಶಿ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್, ಸೋನಮ್ ಯಾದವ್, ನೀಲ್ ಬಿಶ್ತ್, ಪ್ರಿಯಾಂಕಾ ಬಾಲಾ, ಪೂಜಾ ವಸ್ತ್ರಾಕರ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್.

ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ್ ರಾಣಾ(ನಾಯಕಿ), ಮಾನ್ಸಿ ಜೋಶಿ, ಸೋಫಿಯಾ ಡಂಕ್ಲೆ, ಅಶ್ವನಿಕಾ ಪಟೇಲ್, ಮೋನಿಕಾ ಪಟೇಲ್ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುನಿಕಾ ಸಿಸೋಡಿಯಾ, ಅನ್ನಾಬೆಲ್ ಸದರ್ಲ್ಯಾಂಡ್.

LIVE NEWS & UPDATES

The liveblog has ended.
  • 14 Mar 2023 11:02 PM (IST)

    MI vs GG Live Score, WPL 2023: ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

    MIW 162/8 (20)

    GGT 107/9 (20)

      

    ಗುಜರಾತ್ ಜೈಂಟ್ಸ್​ ತಂಡಕ್ಕೆ 55 ರನ್​ಗಳ ಸೋಲುಣಿಸಿದ ಮುಂಬೈ ಇಂಡಿಯನ್ಸ್
  • 14 Mar 2023 10:56 PM (IST)

    MI vs GG Live Score, WPL 2023: 2 ಓವರ್​ಗಳು ಬಾಕಿ

    MIW 162/8 (20)

    GGT 98/9 (18)

      

    12 ಎಸೆತಗಳಲ್ಲಿ 65 ರನ್​ಗಳ ಅವಶ್ಯಕತೆ
    ಸೋಲಿನ ಸುಳಿಯಲ್ಲಿ ಗುಜರಾತ್ ಜೈಂಟ್ಸ್
  • 14 Mar 2023 10:52 PM (IST)

    MI vs GG Live Score, WPL 2023: 9ನೇ ವಿಕೆಟ್ ಪತನ

    ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟಾದ ತನುಜಾ ಕನ್ವರ್

    GGT 96/9 (17.3)

      

  • 14 Mar 2023 10:48 PM (IST)

    MI vs GG Live Score, WPL 2023: 8ನೇ ವಿಕೆಟ್ ಪತನ

    ಬ್ರಂಟ್ ಎಸೆತದಲ್ಲಿ ಹರ್ಮನ್​ಪ್ರೀತ್ ಕೌರ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಬಲಿಯಾದ ಕಿಮ್ ಗಾರ್ತ್​ (8)

    GGT 95/8 (16.3)

      

  • 14 Mar 2023 10:38 PM (IST)

    MI vs GG Live Score, WPL 2023: 7ನೇ ವಿಕೆಟ್ ಪತನ

    ಬ್ರಂಟ್ ಎಸೆತದಲ್ಲಿ ಎಲ್​ಬಿ ಡಬ್ಲ್ಯೂ ಆಗಿ ಔಟಾದ ಸ್ನೇಹ್ ರಾಣಾ (20)

    GGT 85/7 (14.5)

      

  • 14 Mar 2023 10:33 PM (IST)

    MI vs GG Live Score, WPL 2023: 14 ಓವರ್ ಮುಕ್ತಾಯ

    GGT 75/6 (14)

      

    ಕ್ರೀಸ್​ನಲ್ಲಿ ಸುಷ್ಮಾ ವರ್ಮಾ – ಸ್ನೇಹ್ ರಾಣಾ ಬ್ಯಾಟಿಂಗ್

  • 14 Mar 2023 10:25 PM (IST)

    MI vs GG Live Score, WPL 2023: ವೆಲ್ಕಂ ಬೌಂಡರಿ

    ಅಮೆಲಿಯಾ ಕೆರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬೌಂಡರಿ ಬಾರಿಸಿದ ಸ್ನೇಹ್ ರಾಣಾ

    GGT 62/6 (11.5)

      

  • 14 Mar 2023 10:17 PM (IST)

    MI vs GG Live Score, WPL 2023: 10 ಓವರ್ ಮುಕ್ತಾಯ

    GGT 49/5 (10)

      ಕ್ರೀಸ್​ನಲ್ಲಿ ಹೇಮಲತಾ – ಸ್ನೇಹ್ ರಾಣಾ ಬ್ಯಾಟಿಂಗ್

  • 14 Mar 2023 10:14 PM (IST)

    MI vs GG Live Score, WPL 2023: 5ನೇ ವಿಕೆಟ್ ಪತನ

    ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಗಾರ್ಡ್ನರ್…ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಕಲಿತಾ…ಗಾರ್ಡ್ನರ್ (8) ಔಟ್

    GGT 48/5 (9.1)

      

  • 14 Mar 2023 10:10 PM (IST)

    MI vs GG Live Score, WPL 2023: ಗುಜರಾತ್ ಜೈಂಟ್ಸ್​ ತಂಡದ 4ನೇ ವಿಕೆಟ್ ಪತನ

    ವೊಂಗ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ಹರ್ಲೀನ್ ಡಿಯೋಲ್ (22)

    GGT 48/4 (9)

      

  • 14 Mar 2023 10:04 PM (IST)

    MI vs GG Live Score, WPL 2023: 8 ಓವರ್ ಮುಕ್ತಾಯ

    MIW 162/8 (20)

    GGT 46/3 (8)

     ಕ್ರೀಸ್​ನಲ್ಲಿ ಹರ್ಲೀನ್ ಡಿಯೋಲ್ – ಗಾರ್ಡ್ನರ್ ಬ್ಯಾಟಿಂಗ್

  • 14 Mar 2023 09:51 PM (IST)

    MI vs GG Live Score, WPL 2023: 2ನೇ ವಿಕೆಟ್ ಪತನ

    ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ಮೇಘನಾ (16)

    GGT 34/2 (5.2)

      

  • 14 Mar 2023 09:39 PM (IST)

    MI vs GG Live Score, WPL 2023: 3 ಓವರ್ ಮುಕ್ತಾಯ

    GGT 13/1 (3)

    ಕ್ರೀಸ್​ನಲ್ಲಿ ಮೇಘನಾ – ಹರ್ಲೀನ್ ಡಿಯೋಲ್ ಬ್ಯಾಟಿಂಗ್

  • 14 Mar 2023 09:27 PM (IST)

    MI vs GG Live Score, WPL 2023: ಗುಜರಾತ್ ಜೈಂಟ್ಸ್​ ಮೊದಲ ವಿಕೆಟ್ ಪತನ

    ಸ್ಕಿವರ್ ಬ್ರಂಟ್ ಎಸೆದ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಸೋಫಿಯಾ ಡಂಕ್ಲಿ (0)

    GGT 0/1 (0.1)

      

  • 14 Mar 2023 09:09 PM (IST)

    MI vs GG Live Score, WPL 2023: ಮುಂಬೈ ಇಂಡಿಯನ್ಸ್​ ಇನಿಂಗ್ಸ್​ ಅಂತ್ಯ

    ಮುಂಬೈ ಇಂಡಿಯನ್ಸ್- 162/8 (20)

    ಗುಜರಾತ್ ಜೈಂಟ್ಸ್​ ತಂಡಕ್ಕೆ 163 ರನ್​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್​

      

  • 14 Mar 2023 09:04 PM (IST)

    MI vs GG Live Score, WPL 2023: 7ನೇ ವಿಕೆಟ್ ಪತನ

    ಗಾರ್ಡ್ನರ್ ಎಸೆತದಲ್ಲಿ ಬಿಗ್ ಹಿಟ್​ಗೆ ಯತ್ನ…ಬೌಂಡರಿ ಲೈನ್​ನಲ್ಲಿ ಹರ್ಲೀನ್ ಅತ್ಯುತ್ತಮ ಡೈವಿಂಗ್ ಕ್ಯಾಚ್…ಹರ್ಮನ್​ಪ್ರೀತ್ ಕೌರ್ (51) ಔಟ್

    MIW 160/7 (19.4)

      

  • 14 Mar 2023 09:02 PM (IST)

    MI vs GG Live Score, WPL 2023: ಭರ್ಜರಿ ಅರ್ಧಶತಕ ಬಾರಿಸಿದ ಹರ್ಮನ್​ಪ್ರೀತ್

    ಗಾರ್ಡ್ನರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್

    29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹರ್ಮನ್​ಪ್ರೀತ್ ಕೌರ್

    MIW 160/6 (19.3)

      

  • 14 Mar 2023 09:00 PM (IST)

    MI vs GG Live Score, WPL 2023: ಮತ್ತೊಂದು ಭರ್ಜರಿ ಸಿಕ್ಸ್

    ಸದರ್ಲ್ಯಾಂಡ್​ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಮನ್​ಪ್ರೀತ್ ಕೌರ್

    MIW 151/6 (19)

      

  • 14 Mar 2023 08:59 PM (IST)

    MI vs GG Live Score, WPL 2023: 6ನೇ ವಿಕೆಟ್ ಪತನ

    ಹರ್ಲೀನ್ ಡಿಯೋಲ್ ಅತ್ಯುತ್ತಮ ಥ್ರೋ..ಡೈರೆಕ್ಟ್ ಹಿಟ್…2ನೇ ರನ್​ ಓಡುತ್ತಿದ್ದ ಹುಮೈರಾ ಖಾಜಿ (2) ರನೌಟ್.

    MIW 145/6 (18.4)

      

  • 14 Mar 2023 08:57 PM (IST)

    MI vs GG Live Score, WPL 2023: ಭರ್ಜರಿ ಸಿಕ್ಸ್

    ಸದರ್ಲ್ಯಾಂಡ್ ಎಸೆತದಲ್ಲಿ ಡೀಪ್ ಸ್ಕ್ವೇರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಮನ್​ಪ್ರೀತ್ ಕೌರ್​

    MIW 144/5 (18.3)

      

  • 14 Mar 2023 08:54 PM (IST)

    MI vs GG Live Score, WPL 2023: 18 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಹರ್ಮನ್​ಪ್ರೀತ್ ಕೌರ್ – ಹುಮೈರಾ ಖಾಜಿ ಬ್ಯಾಟಿಂಗ್

    MIW 137/5 (18)

      

  • 14 Mar 2023 08:35 PM (IST)

    MI vs GG Live Score, WPL 2023: 14 ಓವರ್ ಮುಕ್ತಾಯ

    MIW 101/3 (14)

    ಹರ್ಮನ್​ಪ್ರೀತ್ ಕೌರ್ – ಅಮೆಲಿಯಾ ಕೆರ್

  • 14 Mar 2023 08:30 PM (IST)

    MI vs GG Live Score, WPL 2023: 13 ಓವರ್ ಮುಕ್ತಾಯ

    MIW 93/3 (13)

      

    ಹರ್ಮನ್​ಪ್ರೀತ್ ಕೌರ್ – ಅಮೆಲಿಯಾ ಕೆರ್

  • 14 Mar 2023 08:27 PM (IST)

    MI vs GG Live Score, WPL 2023: ಮುಂಬೈ ಇಂಡಿಯನ್ಸ್ 3ನೇ ವಿಕೆಟ್ ಪತನ

    ರನ್ ಕದಿಯುವ ಯತ್ನ…ಓಡಲು ನಿರಾಕರಿಸಿದ ಹರ್ಮನ್​ಪ್ರೀತ್ ಕೌರ್…ಯಾಸ್ತಿಕಾ ಭಾಟಿಯಾ (44) ರನೌಟ್.

    MIW 84/3 (12.1)

      

  • 14 Mar 2023 08:20 PM (IST)

    MI vs GG Live Score, WPL 2023: 2ನೇ ವಿಕೆಟ್ ಪತನ

    ಕಿಮ್ ಗಾರ್ತ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಸ್ಕಿವರ್ ಬ್ರಂಟ್ (36)

    MIW 75/2 (11)

      

  • 14 Mar 2023 08:14 PM (IST)

    MI vs GG Live Score, WPL 2023: 10 ಓವರ್ ಮುಕ್ತಾಯ

    MIW 64/1 (10)

    ಕ್ರೀಸ್​ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್

  • 14 Mar 2023 08:13 PM (IST)

    MI vs GG Live Score, WPL 2023: ಭರ್ಜರಿ ಸಿಕ್ಸ್

    ಸದರ್ಲ್ಯಾಂಡ್​ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಯಾಸ್ತಿಕಾ ಭಾಟಿಯಾ

    MIW 64/1 (10)

      

  • 14 Mar 2023 08:07 PM (IST)

    MI vs GG Live Score, WPL 2023: ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್

    MIW 50/1 (8.1)

      

      ಕ್ರೀಸ್​ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್

  • 14 Mar 2023 07:55 PM (IST)

    MI vs GG Live Score, WPL 2023: ಪವರ್​ಪ್ಲೇ ಮುಕ್ತಾಯ

    ಮೊದಲ 6 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 40 ರನ್​ ಕಲೆಹಾಕಿದ ಮುಂಬೈ ಇಂಡಿಯನ್ಸ್

    MIW 40/1 (6)

      ಕ್ರೀಸ್​ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್

  • 14 Mar 2023 07:49 PM (IST)

    MI vs GG Live Score, WPL 2023: ಯಾಸ್ತಿಕಾ ಅಬ್ಬರ

    ಗಾರ್ಡ್ನರ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಯಾಸ್ತಿಕಾ ಭಾಟಿಯಾ

    MIW 30/1 (4.5)

      

  • 14 Mar 2023 07:46 PM (IST)

    MI vs GG Live Score, WPL 2023: ಮತ್ತೊಂದು ಫೋರ್

    ಕಿಮ್ ಗಾರ್ತ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಮತ್ತೊಂದು ಫೋರ್ ಬಾರಿಸಿದ ಬ್ರಂಟ್

    MIW 20/1 (4)

      

  • 14 Mar 2023 07:45 PM (IST)

    MI vs GG Live Score, WPL 2023: ಆಕರ್ಷಕ ಕವರ್​ ಡ್ರೈವ್

    ಕಿಮ್ ಗಾರ್ತ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಸ್ಕಿವರ್ ಬ್ರಂಟ್…ಫೋರ್

    MIW 16/1 (3.4)

      

  • 14 Mar 2023 07:38 PM (IST)

    MI vs GG Live Score, WPL 2023: 2 ಓವರ್ ಮುಕ್ತಾಯ

    MIW 4/1 (2)

      

    ಕ್ರೀಸ್​ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್

  • 14 Mar 2023 07:33 PM (IST)

    MI vs GG Live Score, WPL 2023: ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಪತನ

    ಗಾರ್ಡ್ನರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹೇಲಿ ಮ್ಯಾಥ್ಯೂಸ್ (0)

    ಗುಜರಾತ್ ಜೈಂಟ್ಸ್​ಗೆ ಆರಂಭಿಕ ಯಶಸ್ಸು

    MIW 1/1 (0.4)

      

  • 14 Mar 2023 07:09 PM (IST)

    MI vs GG Live Score, WPL 2023: ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

  • 14 Mar 2023 07:08 PM (IST)

    MI vs GG Live Score, WPL 2023: ಗುಜರಾತ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್

    ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ(ನಾಯಕಿ), ಮಾನ್ಸಿ ಜೋಶಿ.

  • 14 Mar 2023 07:01 PM (IST)

    MI vs GG Live Score, WPL 2023: ಟಾಸ್ ಗೆದ್ದ ಗುಜರಾತ್ ಜೈಂಟ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 14 Mar 2023 06:32 PM (IST)

    MI vs GG Live Score, WPL 2023: ಗುಜರಾತ್ ಜೈಂಟ್ಸ್​ vs ಮುಂಬೈ ಇಂಡಿಯನ್ಸ್​

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯದ ಆರಂಭ; 7.30 ಕ್ಕೆ

    ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ

  • Published On - Mar 14,2023 6:30 PM

    Follow us
    ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
    ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
    ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
    ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
    ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
    ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
    ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
    ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
    ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
    ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
    ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
    ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
    ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
    ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
    ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
    ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
    ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
    ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
    ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
    ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್