ತನ್ನ ಚೊಚ್ಚಲ ಆವೃತ್ತಿಯಲ್ಲೇ ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿ ಫೈನಲ್ಗೇರಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಇದೀಗ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದಲ್ಲಿ ಹೇಳಿಕೊಳ್ಳವಂತಹ ಸ್ಟಾರ್ ಆಟಗಾರರು ಇಲ್ಲದೆ ಇದ್ದರೂ ಹಾರ್ದಿಕ್ ಪಾಂಡ್ಯ (Hardik Pandya) ಪಡೆ ಫೈನಲ್ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ (Rajastan Royals) ತಂಡವನ್ನ ಸೋಲಿಸಿ 7 ವಿಕೆಟ್ಗಳ ಜಯದೊಂದಿಗೆ ಪ್ರಶಸ್ತಿ ಮಡುಗೇರಿಸಿಕೊಂಡಿತು. ಗುಜರಾತ್ ತಂಡದಲ್ಲಿದ್ದ ಮೂರು-ನಾಲ್ಕು ಬ್ಯಾಟರ್ಗಳೇ ಆರಂಭದಿಂದ ಫೈನಲ್ ವರೆಗೆ ಮಿಂಚಿದರು. ಬೌಲಿಂಗ್ನಲ್ಲೂ ಅದೇರೀತಿ ನಡೆಯಿತು. ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೇವಾಟಿಯ ಫಿನಿಶಿಂಗ್ ಜವಾಬ್ದಾರಿ ಜಿಟಿ ತಂಡದ ಪ್ರಮುಖ ಅಸ್ತ್ರವಾಯಿತು. ಇವೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ, ಅವರು ಆಟಗಾರರ ಜೊತೆ ಪ್ರತಿಕ್ರಿಯಿಸುವುದು, ಹುರಿದುಂಬಿಸುವ ರೀತಿ ಇಂದು ಗುಜರಾತ್ ಕಪ್ ಗೆಲ್ಲಲು ಸಹಾಯ ಆಗಿದೆ ಎಂದರೆ ತಪ್ಪಾಗಲಾರದು.
ಗುಜರಾತ್ ಟೈಟಾನ್ಸ್ ಇಂದು ತನ್ನದೇ ಬಲದಿಂದ ಐಪಿಎಲ್ 2022ರ ಫೈನಲ್ನಲ್ಲಿ ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿದೆ. ಹೀಗಿದ್ದರೂ ಕೆಲ ನೆಟ್ಟಿಗರು ಮಾತ್ರ ಗುಜರಾತ್ ತಂಡದ ಈ ಗೆಲುವಿನ ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಫೈನಲ್ ಪಂದ್ಯದಲ್ಲಿ ಜಿಟಿ ತಂಡವೇ ಗೆಲ್ಲಬೇಕೆಂದು ಮೊದಲೇ ಫಿಕ್ಸ್ ಆಗಿತ್ತು ಎಂದು ಅನೇಕರು ಟ್ವೀಟ್ ಮಾಡುತ್ತಿದ್ದು Fixing ಎಂಬ ಪದ ಟ್ವಿಟರ್ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಕೆಲವು ಫೋಟೋಗಳನ್ನು ಹಂಚಿಕೊಂಡು ಫಿಕ್ಸಿಂಗ್ ಎಂದು ಅನುಮಾನ ಮೂಡಿಸುತ್ತದೆ ಎನ್ನುತ್ತಿದ್ದಾರೆ.
Home minister is Amit Shah.
Secretary of BCCI is Jay Shah.
Gujrat playing at Ahmedabad.What do you expect? RCB to win cup ? ???#fixing
#hotstar— tomy (@tomy_craig) May 29, 2022
Hardik Pandya: ಗುಜರಾತ್ ಗೆದ್ದ ತಕ್ಷಣ ಹಾರ್ದಿಕ್ ಪಾಂಡ್ಯ ಬಳಿ ಅಳುತ್ತಾ ಓಡಿ ಬಂದ ನತಾಶ: ವಿಡಿಯೋ
ಗುಜರಾತ್ ಈ ಪಂದ್ಯವನ್ನು ಗೆಲ್ಲಬೇಕೆಂದು ಮೊದಲೇ ಫಿಕ್ಸ್ ಆಗಿತ್ತು ಎಂದು ಅನೇಕರು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫೈನಲ್ ಪಂದ್ಯ ಆಯೋಜನೆಯಾಗಿರುವುದು ಅಹ್ಮದಾಬಾದ್ನಲ್ಲಿ ಹೀಗಿರುವಾಗ ಗುಜರಾತ್ ಗೆಲ್ಲದೆ ಇರಲು ಸಾಧ್ಯವೇ ಎಂದು ಕೆಲವು ಹೇಳಿಕೊಂಡಿದ್ದಾರೆ.
#fixing
Post fixing scenes pic.twitter.com/atznnAVrKk— Vishnu K B (@Vishnukb8055) May 29, 2022
Next election in Gujarat#fixing pic.twitter.com/blbt96Yudr
— imran baig (@imranba41465365) May 29, 2022
#fixing after winning the toss , RR chose bat first then only all know that the match was fixed
— Ranjith Kumar (@RKMSD147) May 29, 2022
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಬದಲು ಬ್ಯಾಟಿಂಗ್ ಸೆಲೆಕ್ಟ್ ಮಾಡಿದರು. ಗುಜರಾತ್ ಚೇಸಿಂಗ್ನಲ್ಲಿ ಕಿಂಗ್ ಎಂದು ತಿಳಿದಿದ್ದರೂ ಆರ್ ಆರ್ ತೆಗೆದುಕೊಂಡ ಈ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಇಬ್ಬರು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಆಯ್ದುಕೊಳ್ಳದೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಾಗಲೇ ಪಂದ್ಯ ಫಿಕ್ಸ್ ಆಗಿದೆ ಎಂಬುದು ಅರ್ಥವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಹೀಗೆ ಅನೇಕ ಮಂದಿ ಇದು ಫಿಕ್ಸಿಂಗ್ ಪಂದ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ.
ಭಾರೀ ನಿರೀಕ್ಷೆ ಹುಟ್ಟಿಸಿದ್ದು ಗುಜರಾತ್-ರಾಜಸ್ಥಾನ್ ನಡುವಣ ಫೈನಲ್ ಫೈಟ್ ಅಂದುಕೊಂಡಷ್ಟು ಮಟ್ಟಿಗೆ ರೋಚಕತೆ ಪಡೆಯಲಿಲ್ಲ. ಬಹುತೇಕ ಒನ್ಸೈಡ್ ಎಂಬಂತೆ ಪಂದ್ಯ ಸಾಗಿತು. ಬ್ಯಾಟಿಂಗ್ಗೆ ಇಳಿದ ಸ್ಯಾಮ್ಸನ್ ಪಡೆ ಮೊದಲ 5 ಓವರ್ನಲ್ಲಿ ಅಬ್ಬರಿಸಿದ್ದು ಬಿಟ್ಟರೆ ಬಳಿಕ ರನ್ ಕಲೆಹಾಕಲು ಪರದಾಡಿತು, ಜೊತೆಗೆ ವಿಕೆಟ್ಗಳನ್ನೂ ಕಳೆದುಕೊಂಡಿತು.
ಆರ್ ಆರ್ ತಂಡಕ್ಕೆ ಪ್ರತಿಬಾರಿ ಆಧಾರವಾಗುತ್ತಿದ್ದ ಆರೆಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಕೂಡ 35 ಎಸೆತಗಳಲ್ಲಿ 39 ರನ್ ಗಳಿಸಿ ಹಾರ್ದಿಕ್ಗೆ ವಿಕೆಟ್ ಒಪ್ಪಿಸಿದರು. ಔಟಾದ ಸಿಟ್ಟಿನಲ್ಲಿ ಬಟ್ಲರ್ ಡಗೌಟ್ಗೆ ತೆರಳಿ ತಮ್ಮ ಹೆಲ್ಮೆಟ್, ಗ್ಲೌಸ್ಗಳನ್ನು ಬಿಸಾಕಿದ ಘಟನೆ ಕೂಡ ನಡೆಯಿತು. ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 130 ರನ್ ಪೇರಿಲಸಷ್ಟೇ ಶಕ್ತವಾಯಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:36 pm, Mon, 30 May 22