AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill Six: ಶುಭ್​ಮನ್ ಗಿಲ್ 106-m ಸಿಕ್ಸ್ ಕಂಡು ಸ್ತಬ್ಧವಾದ ನರೇಂದ್ರ ಮೋದಿ ಸ್ಟೇಡಿಯಂ: ಹಾರ್ದಿಕ್ ಪಾಂಡ್ಯ ಏನು ಮಾಡಿದ್ರು ನೋಡಿ

GT vs MI, Qualifier 2: 13ನೇ ಓವರ್​ನ ಪಿಯೂಷ್ ಚಾವ್ಲಾ ಅವರ ಮೂರನೇ ಎಸೆತದಲ್ಲಿ ಶುಭ್​ಮನ್ ಗಿಲ್ ಅವರು ಡೀಪ್ ಮಿಡ್ ವಿಕೆಟ್​ ಕಡೆ ದೊಡ್ಡ ಸಿಕ್ಸ್ ಸಿಡಿಸಿದರು. ಇದು ಬರೋಬ್ಬರಿ 106 ಮೀಟರ್ ದೂರ ಸಾಗಿತು.

Shubman Gill Six: ಶುಭ್​ಮನ್ ಗಿಲ್ 106-m ಸಿಕ್ಸ್ ಕಂಡು ಸ್ತಬ್ಧವಾದ ನರೇಂದ್ರ ಮೋದಿ ಸ್ಟೇಡಿಯಂ: ಹಾರ್ದಿಕ್ ಪಾಂಡ್ಯ ಏನು ಮಾಡಿದ್ರು ನೋಡಿ
Shubman Gill Six GT vs MI
Vinay Bhat
|

Updated on: May 27, 2023 | 10:10 AM

Share

ಐಪಿಎಲ್ 2023 ರ (IPL 2023) ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಸ್ಟಾರ್ ಆರಂಭಿಕ ಶುಭ್​ಮನ್ ಗಿಲ್ (Shubman Gill) ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್ ಅವರ ಸೆಂಚುರಿಯ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಈ ಬಾರಿಯ ಆವೃತ್ತಿಯಲ್ಲಿ ಶುಭ್​ಮನ್ ಬ್ಯಾಟ್​ನಿಂದ ಸಿಡಿಸಿದ ಮೂರನೇ ಶತಕ ಇದಾಗಿದೆ. ಒಟ್ಟು 60 ಎಸೆತಗಳನ್ನು ಎದುರಿಸಿದ ಇವರು 129 ರನ್ ಚಚ್ಚಿ ದಾಖಲೆ ಬರೆದರು. ಇದರಲ್ಲಿ 7 ಫೋರ್ ಮತ್ತು 10 ಮನಮೋಹಕ ಸಿಕ್ಸರ್​ಗಳು ಸೇರಿದ್ದವು. ಅದರಲ್ಲೂ ಗಿಲ್ ಸಿಡಿಸಿದ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು.

13ನೇ ಓವರ್​ನ ಪಿಯೂಷ್ ಚಾವ್ಲಾ ಅವರ ಮೂರನೇ ಎಸೆತದಲ್ಲಿ ಗಿಲ್ ಅವರು ಡೀಪ್ ಮಿಡ್ ವಿಕೆಟ್​ ಕಡೆ ದೊಡ್ಡ ಸಿಕ್ಸ್ ಸಿಡಿಸಿದರು. ಇದು ಬರೋಬ್ಬರಿ 106 ಮೀಟರ್ ದೂರ ಸಾಗಿತು. ಇದನ್ನು ಕಂಡು ಇಡೀ ನರೇಂದ್ರ ಮೋದಿ ಸ್ಟೇಡಿಯಂ ಒಂದು ಕ್ಷಣ ಶಾಕ್ ಆಯಿತು. ಅತ್ತ ಡಗೌಟ್​ನಲ್ಲಿ ಕೂತಿದ್ದ ನಾಯಕ ಹಾರ್ದಿಕ್ ಪಾಂಡ್ಯ ಏನನ್ನೂ ಹೇಳಲಾಗದೆ ನಗುತ್ತಾ ರಿಯಾಕ್ಷನ್ ಕೊಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ರೋಹಿತ್ ಶರ್ಮಾ ಹಾಗೂ ಜಯ್ ಶಾ ಕೊಟ್ಟ ರಿಯಾಕ್ಷನ್ ನೋಡಿ
Image
Shubman Gill: ಶತಕದ ಸರದಾರ ಶುಭ್​ಮನ್ ಗಿಲ್ ಪಂದ್ಯ ಮುಗಿದ ಬಳಿಕ ಆಡಿದ ಮಾತುಗಳೇನು ಗೊತ್ತೇ?
Image
IPL 2023: 6,6,6; 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೌಲರ್​ ಸದ್ದಡಗಿಸಿದ ಗಿಲ್..!
Image
IPL 2023: ಕೊಹ್ಲಿ ಹಾದಿಯಲ್ಲಿ ಶುಭ್​ಮನ್; 60 ಎಸೆತಗಳಲ್ಲಿ 129 ರನ್ ಚಚ್ಚಿದ ಗಿಲ್ ಬರೆದ ದಾಖಲೆಗಳಿವು

Shubman Gill, IPL 2023: ಮುಂಬೈ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಶುಭ್​ಮನ್ ಗಿಲ್..!

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶತಕವೀರ ಶುಭ್​ಮನ್ ಗಿಲ್, ಐಪಿಎಲ್​ನಲ್ಲಿ ಇದು ನನ್ನ ಶ್ರೇಷ್ಠ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ”ನಾನು ಬಾಲ್ ಟು ಬಾಲ್, ಓವರ್ ಟು ಓವರ್ ಆಡುತ್ತಾ ಸಾಗಿದೆ. ಆ ಒಂದು ಓವರ್​ನಲ್ಲಿ ಮೂರು ಸಿಕ್ಸ್ ಸಿಡಿಸಿದ್ದು ನನಗೆ ಒಳ್ಳೆಯ ಟಚ್ ಸಿಕ್ಕಿತು. ಆಗ ನನಗೆ ಅನಿಸಿತು ಇಂದು ನನ್ನ ದಿನವೆಂದು. ಅಲ್ಲದೆ ಈ ಪಿಚ್​ನಲ್ಲಿ ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿದ್ದರಿಂದ ಸುಲಭವಾಯಿತು. ಈ ಪಂದ್ಯದಲ್ಲಿ ಆಡಬೇಕಿರುವುದು ಮುಖ್ಯವಾಗಿತ್ತು. ನಾನು ಉತ್ತಮವಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಐಪಿಎಲ್​ನಲ್ಲಿ ಕಣಕ್ಕಿಳಿದೆ. ಕೊನೆಯ ಸೀಸನ್​ ಕೂಡ ನನಗೆ ಅತ್ಯುತ್ತಮವಾಗಿತ್ತು. ನಾನು ಬ್ಯಾಟ್ ಮಾಡಲು ಶುರು ಮಾಡಿದಾಗ ಇಲ್ಲಿ ಒಳ್ಳೆಯ ಸ್ಕೋರ್ ಮಾಡಬಹುದು ಎಂಬ ನಂಬಿಕೆ ಬಂತು,” ಎಂದು ಗಿಲ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಗಿಲ್, ”ಕಳೆದ ವೆಸ್ಟ್ ಇಂಡೀಸ್ ಸರಣಿಯಿಂದ ನನ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂಜುರಿ ಆಗಿದ್ದೆ, ಆದರೂ ನಾನು ನನ್ನ ಕೆಲಸವನ್ನು ಬಿಡಲಿಲ್ಲ. ಟಿ20 ವಿಶ್ವಕಪ್ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಾನು ನನ್ನಲ್ಲಿ ಕೆಲ ಬದಲಾವಣೆ ಮಾಡಿದೆ. ಕೆಲವು ಹೊಡೆತಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ. ಒಂದು ಬಾರಿ ಮೈದಾನಕ್ಕೆ ಇಳಿದರೆ ಯಾವುದೇ ನಿರೀಕ್ಷೆ ಇರದೆ ಸಂಪೂರ್ಣವಾಗಿ ತಂಡಕ್ಕೆ ಕೊಡುಗೆ ನೀಡುವ ಬಗ್ಗೆ ಯೋಚಿಸುತ್ತೇನೆ. ನನಗನಿಸುವ ಪ್ರಕಾರ ಐಪಿಎಲ್​ನಲ್ಲಿ ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ,” ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ