AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ನನ್ನ ತಂಡಕ್ಕೆ ಆಯ್ಕೆ ಮಾಡಬೇಡಿ; ಆಯ್ಕೆ ಮಂಡಳಿ ಬಳಿ ಮನವಿಯಿಟ್ಟ ಹಾರ್ದಿಕ್ ಪಾಂಡ್ಯ!

Hardik Pandya: ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಬಗ್ಗೆ ಸಂಪೂರ್ಣವಾಗಿ ಕೆಲಸ ಮಾಡಲು ಬಯಸುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡದಂತೆ ಟೀಂ ಇಂಡಿಯಾದ ಆಯ್ಕೆಗಾರರನ್ನು ಸ್ವತಃ ಅವರೇ ಕೋರಿದ್ದಾರೆ.

Hardik Pandya: ನನ್ನ ತಂಡಕ್ಕೆ ಆಯ್ಕೆ ಮಾಡಬೇಡಿ; ಆಯ್ಕೆ ಮಂಡಳಿ ಬಳಿ ಮನವಿಯಿಟ್ಟ ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಪಾಂಡ್ಯ
TV9 Web
| Edited By: |

Updated on:Nov 28, 2021 | 6:06 PM

Share

ಹಾರ್ದಿಕ್ ಪಾಂಡ್ಯ ಅವರ ಇತ್ತೀಚಿನ ಪ್ರದರ್ಶನ ನಿರಾಶಾದಾಯಕವಾಗಿದೆ. ಅವರು ಐಪಿಎಲ್ 2021 ರಲ್ಲಿ ವಿಫಲರಾದರು. ಇದಾದ ನಂತರ ಟಿ20 ವಿಶ್ವಕಪ್ 2021ರಲ್ಲೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಸದ್ದು ಮಾಡಲಿಲ್ಲ. ಜೊತೆಗೆ ಬೌಲಿಂಗ್​ನಲ್ಲೂ ವಿಫಲರಾದರು. ಸುದೀರ್ಘ ಹೋರಾಟ ಮತ್ತು ಅನೇಕ ಅನುಭವಿಗಳ ವಾಕ್ಚಾತುರ್ಯದ ನಂತರ, ಅವರ ಬೌಲಿಂಗ್ ಅನ್ನು ಟಿ 20 ವಿಶ್ವಕಪ್‌ನ ಪಂದ್ಯಗಳಲ್ಲಿ ನೋಡಲಾಯಿತು. ಆದರೆ ತಂಡದಲ್ಲಿ ಸ್ಥಾನ ಉಳಿಸುವ ಪ್ರಯತ್ನ ಮಾತ್ರ ತೋರಿದರು. ಯಾವುದೇ ರೀತಿಯ ಪ್ರಭಾವ ಇರಲಿಲ್ಲ. ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಆಡಿರಲಿಲ್ಲ. ಅವರ ಜಾಗದಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಅವಕಾಶ ನೀಡಲಾಗಿದೆ.

ಏತನ್ಮಧ್ಯೆ, ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಬಗ್ಗೆ ಸಂಪೂರ್ಣವಾಗಿ ಕೆಲಸ ಮಾಡಲು ಬಯಸುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡದಂತೆ ಟೀಂ ಇಂಡಿಯಾದ ಆಯ್ಕೆಗಾರರನ್ನು ಸ್ವತಃ ಅವರೇ ಕೋರಿದ್ದಾರೆ. ESPNcricinfo ಈ ಮಾಹಿತಿಯನ್ನು ನೀಡಿದೆ. ಕೆಲ ಕಾಲ ಅವರನ್ನು ಆಯ್ಕೆ ಮಾಡದಂತೆ ಹಾರ್ದಿಕ್ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಅವರು ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡುವ ಸಲುವಾಗಿ ಮತ್ತು ಈ ಸಮಯದಲ್ಲಿ, ಅವರು ಬೌಲಿಂಗ್‌ಗೆ ಸಂಪೂರ್ಣವಾಗಿ ಫಿಟ್ ಆಗಲು ಕೊಂಚ ಕಾಲಾವಕಾಶ ಕೇಳಿಕೊಂಡಿದ್ದಾರೆ. ಐಪಿಎಲ್ 2022 ರ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳು ಯೋಜಿಸುತ್ತಿರುವ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಈ ಹೇಳಿಕೆ ಬಂದಿದೆ. ಫಾರ್ಮ್​ನಲ್ಲಿಲ್ಲದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವುದಿಲ್ಲ ಎಂದು ನಂಬಲಾಗಿದೆ.

ಮುಂಬೈ ರೋಹಿತ್-ಬುಮ್ರಾ ಅವರನ್ನು ಉಳಿಸಿಕೊಳ್ಳಲಿದೆ! ಮುಂಬರುವ ಐಪಿಎಲ್ ಸೀಸನ್‌ಗೆ ಮುನ್ನ ಮುಂಬೈ ತಂಡ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಬಯಸಿದೆ ಎಂಬ ವರದಿಗಳಿವೆ. ಇದಲ್ಲದೇ, ಕೀರನ್ ಪೊಲಾರ್ಡ್ ಅವರನ್ನೂ ತನ್ನೊಂದಿಗೆ ಇರಿಸಿಕೊಳ್ಳಲು ಅವರ ಮನಸ್ಸು ಮಾಡಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಎಂಟು ತಂಡಗಳು ಐಪಿಎಲ್ ಮೆಗಾ ಹರಾಜಿನ ಮೊದಲು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅವರ ಬಜೆಟ್‌ನಲ್ಲಿ 44 ಕೋಟಿ ರೂ. ಕಡಿತವಾಗಲಿದೆ. ಅದೇ ಸಮಯದಲ್ಲಿ, ಹೊಸದಾಗಿ ಸೇರ್ಪಡೆಗೊಂಡ ಎರಡು ತಂಡಗಳು ಹರಾಜು ಪೂಲ್‌ನಿಂದ ತಲಾ ಇಬ್ಬರು ಆಟಗಾರರನ್ನು ತೆಗೆದುಕೊಳ್ಳಬಹುದು. ಎರಡು ಹೊಸ ತಂಡಗಳು ಲಕ್ನೋ ಮತ್ತು ಅಹಮದಾಬಾದ್‌ನಿಂದ ಬಂದಿವೆ. ಪಾಂಡ್ಯ ಸಹೋದರರು ಅಹಮದಾಬಾದ್ ಫ್ರಾಂಚೈಸಿಯ ಭಾಗವಾಗಬಹುದೆಂದು ನಂಬಲಾಗಿದೆ.

ಐಪಿಎಲ್ 2018ರ ಹರಾಜಿಗೂ ಮುನ್ನ ಮುಂಬೈ ಹಾರ್ದಿಕ್ ಅವರನ್ನು ಉಳಿಸಿಕೊಂಡಿದೆ. ಆದರೆ ಇತ್ತೀಚೆಗಿನ ಫಾರ್ಮ್ ನಿಂದಾಗಿ ಹಾರ್ದಿಕ್ ರಿಂದ ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿದೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಉಳಿಸಿಕೊಳ್ಳುವ ಆಯ್ಕೆಯೂ ತಂಡಕ್ಕಿದೆ. ಧಾರಣೆ ಕುರಿತು ಮಾಹಿತಿ ನೀಡಲು ತಂಡಗಳಿಗೆ ನವೆಂಬರ್ 30ರವರೆಗೆ ಕಾಲಾವಕಾಶವಿದೆ.

Published On - 6:05 pm, Sun, 28 November 21

ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್