BBL 11: ವಿಕೆಟ್ ಪಡೆದು ‘ಕೋವಿಡ್ ಸೇಫ್ ಸೆಲೆಬ್ರೇಷನ್’ ಮಾಡಿದ ವೇಗಿ
Haris Rauf’s ‘Covid-Safe’ Celebration: ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ ನೀಡಿರುವ ಸಿಎಸ್ಕೆ ತಂಡದ ಜೆರ್ಸಿಯ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದ ಹ್ಯಾರಿಸ್ ರೌಫ್ ಇದೀಗ ಕೋವಿಡ್ ಸೇಫ್ ಸೆಲೆಬ್ರೇಷನ್ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.
ಒಂದೆಡೆ ಕೊರೋನಾ….ಮತ್ತೊಂದೆಡೆ ಕ್ರಿಕೆಟ್…ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಹಾಗೂ ಕೊರೋನಾ ನಡುವೆ ಜಂಗೀಕುಸ್ತಿ ಮುಂದುವರೆದಿದೆ. ಒಂದೆಡೆ ಕೊರೋನಾ ಭೀತಿ ಎದುರಾದರೆ ಮತ್ತೊಂದೆಡೆ ಸಕಲ ಸುರಕ್ಷತೆಯೊಂದಿಗೆ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿದೆ. ಅದರಂತೆ ಇದೀಗ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಕೂಡ ಭರ್ಜರಿಯಾಗಿ ಜರುಗುತ್ತಿದೆ. ಇದಾಗ್ಯೂ ಕೊರೋನಾ ಭೀತಿಯಂತು ದೂರವಾಗಿಲ್ಲ. ಹೀಗಾಗಿಯೇ ಮೈದಾನದಿಂದಲೇ ಕೊರೋನಾ ಸುರಕ್ಷತೆಯ ಸಂದೇಶ ಸಾರಿದ್ದಾರೆ ಪಾಕಿಸ್ತಾನ್ ವೇಗಿ ಹ್ಯಾರಿಸ್ ರೌಫ್.
ಬಿಬಿಎಲ್ನಲ್ಲಿ ಮಂಗಳವಾರ ನಡೆದ 27ನೇ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಪರ್ತ್ ಸ್ಕಾಚರ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಬಿರುಸಿನ ಆರಂಭ ಪಡೆದ ಪರ್ತ್ಗೆ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕೊನೆಗೂ ಹ್ಯಾರಿಸ್ ರೌಫ್ ಯಶಸ್ವಿಯಾಗಿದ್ದರು.
ಪಂದ್ಯದ ಮೂರನೇ ಓವರ್ ಬೌಲ್ ಮಾಡಿದ ಹ್ಯಾರಿಸ್ ರೌಫ್ ಎರಡನೇ ಎಸೆತದಲ್ಲಿ ಕರ್ಟಿಸ್ ಪ್ಯಾಟರ್ಸನ್ ವಿಕೆಟ್ ಪಡೆಯುವ ಮೂಲಕ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಮೊದಲ ವಿಕೆಟ್ ಪಡೆದ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಮೂಲಕ ಹ್ಯಾರಿಸ್ ರೌಫ್ ಎಲ್ಲರ ಗಮನ ಸೆಳೆದರು.
ವಿಕೆಟ್ ಪಡೆದ ತಕ್ಷಣ ರೌಫ್, ಕೈಯನ್ನು ಸ್ಯಾನಿಟೈಸರ್ ಸ್ವಚ್ಛಗೊಳಿಸುತ್ತಿರುವಂತೆ ತೋರಿಸಿ ಆ ಬಳಿಕ ಮುಖಕ್ಕೆ ಮಾಸ್ಕ್ ಹಾಕಿ ವಿಭಿನ್ನವಾಗಿ ಕೋವಿಡ್ ಸೇಫ್ ಸೆಲೆಬ್ರೇಷನ್ ಮಾಡಿದರು. ಅಷ್ಟೇ ಅಲ್ಲದೆ ವಿಕೆಟ್ ಸಿಕ್ಕ ಸಂಭ್ರಮವನ್ನು ಸಹ ಆಟಗಾರರೊಂದಿಗೆ ದೂರದಿಂದಲೇ ಹಂಚಿಕೊಂಡು ಪರಸ್ಪರ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದರು. ಇದೀಗ ಹ್ಯಾರಿಸ್ ರೌಫ್ ಮಾಡಿದ ಕೋವಿಡ್ ಸೇಫ್ ಸೆಲೆಬ್ರೇಷನ್ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ ನೀಡಿರುವ ಸಿಎಸ್ಕೆ ತಂಡದ ಜೆರ್ಸಿಯ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದ ಹ್ಯಾರಿಸ್ ರೌಫ್ ಇದೀಗ ಕೋವಿಡ್ ಸೇಫ್ ಸೆಲೆಬ್ರೇಷನ್ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.
View this post on Instagram
ಇನ್ನು ಈ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ಗಳಿಸಿತು. 197 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 149 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 47 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Haris Rauf’s UNIQUE ‘Covid-Safe’ Wicket Celebration During BBL Game)
Published On - 4:48 pm, Tue, 11 January 22