ಭಾರತ ತಂಡದ ರಣತಂತ್ರ ಏನೆಂಬುದೇ ಅರ್ಥವಾಗುತ್ತಿಲ್ಲ!

Sri Lanka vs India, 1st Test: ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ಕೊನೆಯ ದಿನದಾಟಕ್ಕೆ ತಲುಪಿದೆ. ಈಗಾಗಲೇ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ, ಗೆಲುವಿಗಾಗಿ ಇನ್ನು 6 ವಿಕೆಟ್‌ಗಳನ್ನು ಪಡೆಯಬೇಕಿದೆ. ಅತ್ತ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನೂ 288 ರನ್‌ಗಳ ಅಗತ್ಯವಿದೆ.

ಭಾರತ ತಂಡದ ರಣತಂತ್ರ ಏನೆಂಬುದೇ ಅರ್ಥವಾಗುತ್ತಿಲ್ಲ!
Team India
Image Credit source: GettyImages

Updated on: Aug 19, 2026 | 10:32 AM

ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತೋರಿದ ಬ್ಯಾಟಿಂಗ್ ರಣತಂತ್ರದ ವಿರುದ್ಧ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಕಠಿಣ ಪದಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಗಿ, ಶ್ರೀಲಂಕಾ ತಂಡಕ್ಕೆ ಗೆಲ್ಲಲು 372 ರನ್‌ಗಳ ಭಾರಿ ಗುರಿಯನ್ನೇನೋ ನೀಡಿದೆ. ಆದರೆ, ಮಳೆಯ ಮುನ್ಸೂಚನೆ ಇದ್ದಾಗಲೂ ಭಾರತೀಯ ಬ್ಯಾಟರ್‌ಗಳು ತೋರಿದ ಮಂದಗತಿಯ ಆಟವು ಭೋಗ್ಲೆ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಸಮಯ ವ್ಯರ್ಥ ಮಾಡಿದ ಭಾರತೀಯ ಬ್ಯಾಟರ್ಸ್!

ಎರಡನೇ ಇನ್ನಿಂಗ್ಸ್‌ನ ಕೊನೆಯ ಹಂತದ ಆಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹಂಚಿಕೊಂಡಿರುವ ಹರ್ಷ ಭೋಗ್ಲೆ, “ಕೊನೆಯ 40 ನಿಮಿಷಗಳಲ್ಲಿ ಭಾರತ ತಂಡದ ರಣತಂತ್ರ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಅವರು ಪಂದ್ಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರೇ ವಿನಃ ಸ್ಕೋರ್ ಬೋರ್ಡ್‌ಗೆ ಹೆಚ್ಚಿನ ರನ್ ಸೇರಿಸಲಿಲ್ಲ. ಹವಾಮಾನ ಅನಿಶ್ಚಿತವಾಗಿರುವಾಗ (ಮಳೆಯ ಆತಂಕ ಇರುವಾಗ), ವೇಗದಿಂದ ರನ್​ಗಳಿಸಬೇಕಿತ್ತು” ಎಂದು ಬರೆದುಕೊಂಡಿದ್ದಾರೆ.

ಪಂತ್ ಹೊರತುಪಡಿಸಿ ಉಳಿದ ಬ್ಯಾಟರ್‌ಗಳ ವೈಫಲ್ಯ:

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಪರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾತ್ರ ಭರ್ಜರಿ ಪ್ರದರ್ಶನ ನೀಡಿ 69 ಎಸೆತಗಳಲ್ಲಿ 66 ರನ್ ಚಚ್ಚಿದರು. ಅವರನ್ನು ಬಿಟ್ಟರೆ ದೇವದತ್ ಪಡಿಕ್ಕಲ್ ಹಾಗೂ ಕೆ.ಎಲ್. ರಾಹುಲ್ ಮಾತ್ರ ಎರಡಂಕಿ ರನ್ ದಾಟಲು ಯಶಸ್ವಿಯಾದರು. ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆದರೂ ರನ್ ಗಳಿಸಲು ಪರದಾಡಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ಪಂದ್ಯದ ಸದ್ಯದ ಸ್ಥಿತಿ:

ನಾಲ್ಕನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ್ದು, ಗೆಲುವಿಗಾಗಿ ಇನ್ನೂ 288 ರನ್‌ಗಳ ಅಗತ್ಯವಿದೆ. ಭಾರತ ತಂಡದ ಗೆಲುವಿಗೆ ಇನ್ನು 6 ವಿಕೆಟ್‌ಗಳಷ್ಟೇ ಬಾಕಿ ಇದ್ದರೂ, ಹವಾಮಾನ ಕೈಕೊಟ್ಟರೆ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಭೀತಿ ಎದುರಾಗಿದೆ. ಈ ಭೀತಿಯ ನಡುವೆಯೂ ಟೀಮ್ ಇಂಡಿಯಾಗೆ ಗೆಲುವು ದಕ್ಕಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಪಂದ್ಯ ಡ್ರಾ ಆಗಲೇಬಾರದು!

ಸಂಕ್ಷಿಪ್ತ ಸ್ಕೋರ್ ವಿವರ:

  • ಭಾರತ ಮೊದಲ ಇನಿಂಗ್ಸ್​: 462
  • ಶ್ರೀಲಂಕಾ ಮೊದಲ ಇನಿಂಗ್ಸ್​: 284
  • ಭಾರತ ದ್ವಿತೀಯ ಇನಿಂಗ್ಸ್​: 193
  • ಶ್ರೀಲಂಕಾ ದ್ವಿತೀಯ ಇನಿಂಗ್ಸ್​: 372 ರನ್​ಗಳ ಗುರಿ
Loading...
Unable to load recommendations.
Follow Us