AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮೀಬಿಯ ಹೀಗೆ ಮಾಡಿದ್ರೆ ಪಾಕಿಸ್ತಾನ್ ವಿಶ್ವಕಪ್​​ನಿಂದ ಔಟ್..!

T20 World Cup 2026: ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನಮೀಬಿಯ ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್ ಮೈದಾನದಲ್ಲಿ ನಡೆಯಲಿರುವ ಈ ಮ್ಯಾಚ್ ಪಾಕಿಸ್ತಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಅಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ಸೂಪರ್-8 ಹಂತಕ್ಕೇರಲಿದೆ.

ನಮೀಬಿಯ ಹೀಗೆ ಮಾಡಿದ್ರೆ ಪಾಕಿಸ್ತಾನ್ ವಿಶ್ವಕಪ್​​ನಿಂದ ಔಟ್..!
Pakistan
ಝಾಹಿರ್ ಯೂಸುಫ್
|

Updated on: Feb 18, 2026 | 8:31 AM

Share

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯವು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈ ನಿರ್ಣಾಯಕ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿರುವುದು ಪಾಕಿಸ್ತಾನ್ ಮತ್ತು ನಮೀಬಿಯ. ಈ ಮ್ಯಾಚ್ ನಮೀಬಿಯ ಪಾಲಿಗೆ ಔಪಚಾರಿಕವಾಗಿದ್ದರೆ, ಪಾಕ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಅಂದರೆ ಈ ಮ್ಯಾಚ್​​ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ತಂಡವು ಸೂಪರ್-8 ಹಂತಕ್ಕೇರಲಿದೆ. ಹೀಗಾಗಿ ಕೊಲಂಬೊದಲ್ಲಿ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕ್ ಪಡೆ ಗೆಲ್ಲಲೇಬೇಕು.

ಒಂದು ವೇಳೆ ನಮೀಬಿಯ ತಂಡವು ಯಾವುದೇ ಅಂತರದಿಂದ ಗೆದ್ದರೂ ಪಾಕಿಸ್ತಾನ್ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ. ಅಂದರೆ ನಮೀಬಿಯ ತಂಡ ಕೇವಲ 1 ರನ್​ ಅಥವಾ 1 ವಿಕೆಟ್​​ನಿಂದಲೂ ಗೆದ್ದರೂ ಸಹ ಪಾಕ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.

ಪಾಕಿಸ್ತಾನ್ ತಂಡ ಹೊರಬಿದ್ದರೆ ಯುಎಸ್​ಎ ತಂಡ ಸೂಪರ್-8 ಹಂತಕ್ಕೇರಲಿದೆ. ಅಂದರೆ ಯುಎಸ್​ಎ ತಂಡದ ಪಾಲಿಗೆ ಪಾಕಿಸ್ತಾನ್ ವಿರುದ್ಧ ನಮೀಬಿಯ ತಂಡ ಗೆಲ್ಲಲೇಬೇಕು. ಏಕೆಂದರೆ ಯುಎಸ್​​ಎ ತಂಡದ ನೆಟ್​ ರನ್​ ರೇಟ್ +0.787 ಇದ್ದು, ಇದರಿಂದ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಮುಂದಿನ ಹಂತಕ್ಕೇರಬಹುದು.

ಅತ್ತ ಪಾಕಿಸ್ತಾನ್ ತಂಡ ಸೂಪರ್-8 ಹಂತಕ್ಕೇರಲು 6 ಅಂಕಗಳು ಅತ್ಯವಶ್ಯಕ. ಹೀಗಾಗಿ ನಮೀಬಿಯ ವಿರುದ್ಧ ಗೆಲ್ಲಬೇಕು. ಒಂದು ವೇಳೆ ಸೋತರೆ 4 ಅಂಕಗಳನ್ನು ಹೊಂದಿದ್ದರೂ -0.403 ನೆಟ್​ ರನ್ ಇರುವ ಕಾರಣ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​​ನಿಂದ ಹೊರಬೀಳಲಿದೆ.

ಹೀಗಾಗಿ ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​ನ 35ನೇ ಪಂದ್ಯವು ಪಾಕ್​ನಂತೆ ಯುಎಸ್​​ಎ ಪಾಲಿಗೂ ಅತೀ ಮುಖ್ಯ. ಅದರಂತೆ ಪಾಕ್ ಪಡೆಯನ್ನು ಬಗ್ಗು ಬಡಿದು ನಮೀಬಿಯ ಯುಎಸ್​​ಎ ತಂಡವನ್ನು ಸೂಪರ್-8 ಹಂತಕ್ಕೇರಿಸಲಿದೆಯಾ ಅಥವಾ ನಮೀಬಿಯ ವಿರುದ್ಧ ಗೆದ್ದು ಪಾಕಿಸ್ತಾನ್ ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ನಮೀಬಿಯ ಟಿ20 ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಝೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರುಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, ಡಬ್ಲ್ಯೂಪಿ ಹೀಂಗ್‌ಬರ್ಗ್, ಮ್ಯಾಕ್ಸ್​ ಹಿಯೆಂಗೊ.