IND vs AUS: ರಿಷಭ್ ಪಂತ್ ವಿರುದ್ಧ ಸಿಟ್ಟಿನಿಂದ ಕೂಗಿದ ರೋಹಿತ್ ಶರ್ಮಾ, ವಿಡಿಯೋ ವೈರಲ್

ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್​​ನ ಸೂಪರ್-8 ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 92 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ 205 ರನ್‌ ಗಳಿಸಿತ್ತು. ಆದರೆ ಆಸ್ಟ್ರೇಲಿಯಾದ ಮುಂದೆ ಈ ಸ್ಕೋರ್ ಕೂಡ ಕಡಿಮೆಯಾಗಬಹುದು ಎಂಬುದು ತಂಡದ ಲೆಕ್ಕಾಚಾರವಾಗಿತ್ತು. ಹೀಗಾಗಿ ಬೌಲಿಂಗ್, ಫೀಲ್ಡಿಂಗ್​ನಲ್ಲಿ ಚುರುಕಿನ ಆರಂಭ ಪಡೆಯಲು ತಂಡ ಮುಂದಾಗಿತ್ತು. ಆದರೆ ಎರಡನೇ ಓವರ್​​ನಲ್ಲೇ ಮಾರ್ಷ್​ ಕ್ಯಾಚ್ ಅವಕಾಶ ಕೈಚೆಲ್ಲಿದ್ದು ರೋಹಿತ್ ಶರ್ಮಾ ಸಿಟ್ಟಿಗೆ ಕಾರಣವಾಯಿತು. ಹಿಟ್​​ಮ್ಯಾನ್ ಸಿಟ್ಟಿನಿಂದ ಕೂಗಿದ ವಿಡಿಯೋ ವೈರಲ್ ಆಗುತ್ತಿದ್ದು, ಇಲ್ಲಿದೆ ನೋಡಿ.

IND vs AUS: ರಿಷಭ್ ಪಂತ್ ವಿರುದ್ಧ ಸಿಟ್ಟಿನಿಂದ ಕೂಗಿದ ರೋಹಿತ್ ಶರ್ಮಾ, ವಿಡಿಯೋ ವೈರಲ್
ಸಿಟ್ಟಾದ ರೋಹಿತ್ ಶರ್ಮಾ (ಟ್ವಿಟರ್​​ ವಿಡಿಯೋ ಸ್ಕ್ರೀನ್​​ಗ್ರ್ಯಾಬ್)
Follow us
|

Updated on: Jun 25, 2024 | 8:12 AM

ಟಿ20 ವಿಶ್ವಕಪ್​​ನ (T20 World Cup) ಸೂಪರ್ 8 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 24 ರನ್​ಗಳ ಅಮೋಘ ಗೆಲುವು ಸಾಧಿಸಿರುವ ಟೀಂ ಇಂಡಿಯಾ (Team India) ಸೆಮಿ ಫೈನಲ್ ಪ್ರವೇಶಿಸಿದೆ. ಆದಾಗ್ಯೂ, ಆರಂಭಿಕ ಹಂತದಲ್ಲಿ ಆಸ್ಟ್ರೇಲಿಯಾ ಬ್ಯಾಟರ್​ಗಳು ಮೇಲುಗೈ ಸಾಧಿಸಿದ್ದು ಟೀಂ ಇಂಡಿಯಾಕ್ಕೆ ತುಸು ಆತಂಕ ಸೃಷ್ಟಿಸಿತ್ತು. ವಿಶ್ವಕಪ್​​ನಂಥ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರಿದ್ದಾಗ ದೊಡ್ಡ ಮೊತ್ತವಾದರೂ ಡಿಫೆಂಡ್​ ಮಾಡಲು ಶ್ರಮ ಬೇಕೇಬೇಕು. ಇಂಥ ಸಂದರ್ಭದಲ್ಲಿ ಎರಡನೇ ಓವರ್​​ನಲ್ಲಿ ಮಿಚೆಲ್ ಮಾರ್ಷ್‌ ಕ್ಯಾಚ್​​ ಪಡೆಯುವಲ್ಲಿ ವಿಕೆಟ್​ ಕೀಪರ್​ ರಿಷಭ್ ಪಂತ್ (Rishabh Pant) ಎಡವಿದಾಗ ಕ್ಯಾಪ್ಟರ್ ರೋಹಿತ್ ಶರ್ಮಾ (Rohit Sharma) ಒಂದು ಕ್ಷಣ ಅವರ ಮೇಲೆ ಸಿಟ್ಟಾದರು. ಹಿಟ್​​ಮ್ಯಾನ್ ಸಿಟ್ಟಿನಿಂದ ಕೂಗಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬೂಮ್ರಾ ಓವರ್ ವೇಳೆ ನಡೆದಿದ್ದೇನು?

ರೋಹಿತ್ ಸ್ಫೋಟಕ ಬ್ಯಾಟಿಂಗ್ (41 ಎಸೆತಗಳಲ್ಲಿ 92 ರನ್) ನೆರವಿನಿಂದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ನಂತರ ಬೌಲಿಂಗ್ ವೇಳೆ ಮೊದಲ ಓವರ್‌ನಲ್ಲಿಯೇ ಡೇವಿಡ್ ವಾರ್ನರ್ ಅವರನ್ನು ಅರ್ಷದೀಪ್ ಸಿಂಗ್ ಔಟ್ ಮಾಡಿದರು. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರಲು ಟೀಂ ಇಂಡಿಯಾಕ್ಕೆ ಒಳ್ಳೆಯ ಅವಕಾಶವಿತ್ತು. ಎರಡನೇ ಓವರ್‌ನಲ್ಲಿಯೇ ಅದರ ಅವಕಾಶವೂ ಒಲಿದು ಬಂದಿತ್ತು. ಜಸ್ಪ್ರೀತ್ ಬುಮ್ರಾ ಅವರ ನಾಲ್ಕನೇ ಎಸೆತವು ಶಾರ್ಟ್ ಪಿಚ್ ಆಗಿತ್ತು. ಮಿಚೆಲ್ ಮಾರ್ಷ್‌ಗೆ ಪುಲ್ ಶಾಟ್ ಅನ್ನು ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಚೆಂಡು ಅವರ ಬ್ಯಾಟ್‌ನ ಮೇಲ್ಭಾಗಕ್ಕೆ ಬಡಿದು ವಿಕೆಟ್‌ನ ಹಿಂದೆ ಲೆಗ್ ಸೈಡ್‌ನಲ್ಲಿ ಪುಟಿಯಿತು. ಇನ್ನೇನು ವಿಕೆಟ್ ಸಿಕ್ಕಿತುಬಿಟ್ಟಿತು ಎಂದು ಎಲ್ಲರೂ ಭಾವಿಸಿದರು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಎಡವಿದ್ದರಿಂದ ಚೆಂಡಿನ ಬಳಿ ತಲುಪಲು ಹಾಗೂ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದ ರೋಹಿತ್ ಸಿಟ್ಟಾದರು. ಮಿಡ್-ಆಫ್‌ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಅವರು ಅಲ್ಲಿಂದಲೇ ಪಂತ್ ಮೇಲೆ ಕೋಪವನ್ನು ಹೊರಹಾಕಿದರು ಮತ್ತು ಕೂಗಾಡಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ರೋಹಿತ್ ಸಿಟ್ಟಾದ ವಿಡಿಯೋ

ಈ ಜೀವದಾನದ ನಂತರ ಮಾರ್ಷ್​ ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿದ್ದಲ್ಲದೆ, ಒಂದು ಹಂತದಲ್ಲಿ ಟೀಮ್ ಇಂಡಿಯಾಕ್ಕೆ ಕಂಟಕವಾಗಿ ಪರಿಣಮಿಸಿದರು. ಮಾರ್ಷ್ ಟ್ರಾವಿಸ್ ಹೆಡ್ ಜೊತೆಗೆ 81 ರನ್‌ಗಳ ಅತ್ಯುತ್ತಮ ಜೊತೆಯಾಟ ಮಾಡಿದರು. ಆದರೆ, ಕುಲದೀಪ್ ಯಾದವ್ ಎಸೆತದಲ್ಲಿ ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಮಾರ್ಷ್ ಇನ್ನಿಂಗ್ಸ್ ಕೊನೆಗೊಳಿಸಿದರು.

ಇದನ್ನೂ ಓದಿ: ಆಸೀಸ್​​ ಬೌಲರ್​ಗಳ ಬೆವರಿಳಿಸಿ ರೋಹಿತ್ ಶರ್ಮಾ ನಿರ್ಮಿಸಿದ ದಾಖಲೆಗಳಿವು…

ನಂತರ ಕ್ರಮೇಣ ಆಸ್ಟ್ರೇಲಿಯಾ ಇನ್ನಿಂಗ್ಸ್ ಕುಸಿಯಲು ಪ್ರಾರಂಭಿಸಿತು. ಅಂತಿಮವಾಗಿ ಆಸೀಸ್ 181 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಟೀಂ ಇಂಡಿಯಾ 24 ರನ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ