ಕೊನೆಗೂ ಶುಭ್ಮನ್ ಗಿಲ್ (Shubman Gill) ಶತಕದ ಬರ ನೀಗಿದೆ. ಚಟ್ಟೋಗ್ರಾಮ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಸಿಡಿಸಿದ್ದಾರೆ. ಗಿಲ್ ಈ ಹಿಂದೆ ಬ್ರಿಸ್ಬೇನ್ ಟೆಸ್ಟ್ನಲ್ಲಿ (Brisbane Test) ಶತಕ ವಂಚಿತರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ ಗಿಲ್ 91 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ, ಶತಕ ವಂಚಿತರಾಗಿದ್ದರು. ಆದರೆ ಬಾಂಗ್ಲಾ ವಿರುದ್ಧ ಎಚ್ಚರ ತಪ್ಪದ ಗಿಲ್, ಆಸ್ಟ್ರೇಲಿಯಾ ವಿರುದ್ಧ ಮಾಡಿದ ಎಡವಟ್ಟನ್ನು ಇಲ್ಲಿ ಮಾಡಲಿಲ್ಲ. ಹೀಗಾಗಿ ಬರೋಬ್ಬರು 700 ದಿನಗಳ ನಂತರ ಶುಭ್ಮನ್ ಗಿಲ್ ಶತಕದ ಕಾಯುವಿಕೆ ಕೊನೆಗೊಂಡಿದೆ.
147 ಎಸೆತಗಳಲ್ಲಿ ಶತಕ ಪೂರೈಸಿದ ಗಿಲ್, ತಮ್ಮ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಬಾರಿಸಿದರು. ಅದರಲ್ಲೂ 90 ರ ಗಡಿ ದಾಟಿದ ನಂತರವೂ ನಿರ್ಭೀತಿಯ ಬ್ಯಾಟಿಂಗ್ ಮಾಡಿದ ಗಿಲ್, ತಮ್ಮ ವೈಯಕ್ತಿಕ ಸ್ಕೋರ್ 95 ರಲ್ಲಿ ರಿವರ್ಸ್ ಸ್ವೀಪ್ ಆಡಿ ಬೌಂಡರಿ ಬಾರಿಸಿದರು. ಅಲ್ಲದೆ ಶತಕಕ್ಕೆ ಇನ್ನೊಂದು ರನ್ ಬೇಕಿರುವಾಗಲು ಧೃತಿಗೆಡದ ಗಿಲ್, ಮುಂದೆ ಹೋಗಿ ಲಾಂಗ್ ಆನ್ನಲ್ಲಿ ಫೋರ್ ಹೊಡೆದು, ಶತಕದ ಸಂಭ್ರಮಾಚರಣೆ ಮಾಡಿದರು.
Rohit Sharma: ಎರಡನೇ ಟೆಸ್ಟ್ಗೂ ಮುನ್ನ ರೋಹಿತ್ ಇಂಜುರಿ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್..!
Live – https://t.co/GUHODOYOh9 #BANvIND pic.twitter.com/pRO6sqCxx9
— BCCI (@BCCI) December 16, 2022
2. 110 ರನ್ ಗಳಿಸಿದ ನಂತರ ಔಟ್
ಶತಕ ಸಿಡಿಸಿದ ಬೆನ್ನಲ್ಲೇ ಹೊಡಿಬಡಿ ಆಡಕ್ಕೆ ಮುಂದಾದ ಗಿಲ್, ಅಂತಿಮವಾಗಿ 110 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 151 ಎಸೆತಗಳನ್ನು ಆಡಿದ ಗಿಲ್ 10 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದರು. ಶತಕದ ನಂತರ ಮೆಹದಿ ಹಸನ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಗಿಲ್, ಮತ್ತೊಂದು ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
3. ಗಿಲ್ ಕೈಹಿಡಿದ ಅದೃಷ್ಟ
ವಾಸ್ತವವಾಗಿ ಎರಡನೇ ಇನಿಂಗ್ಸ್ನ 32ನೇ ಓವರ್ನಲ್ಲಿ ಗಿಲ್ ವಿರುದ್ಧ ಎಲ್ಬಿಡಬ್ಲ್ಯೂಗೆ ಮನವಿ ಮಾಡಲಾಗಿತ್ತು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ನಂತರ ಬಾಂಗ್ಲಾದೇಶ ಡಿಆರ್ಎಸ್ ತೆಗೆದುಕೊಂಡಿತು. ಆದರೆ ತಾಂತ್ರಿಕ ದೋಷದಿಂದ ಆ ಸಮಯದಲ್ಲಿ ಡಿಆರ್ಎಸ್ ಲಭ್ಯವಿರಲಿಲ್ಲ. ಹೀಗಾಗಿ ಗಿಲ್ಗೆ ಒಂದು ಜೀವದಾನ ಸಿಕ್ಕಿತು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಗಿಲ್ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಆದರೆ ಗಿಲ್ರಂತೆಯೇ ಮೊದಲ ಇನ್ನಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ಗೆ ಒಂದಲ್ಲ ಅಂತಾ ಮೂರು ಜೀವದಾನಗಳು ಸಿಕ್ಕಿದ್ದವು. ಆದರೆ ಅಯ್ಯರ್ಗೆ ಇದರ ಲಾಭ ಪಡೆಯಲಾಗಲಿಲ್ಲ. 86 ರನ್ಗಳ ಇನ್ನಿಂಗ್ಸ್ ಆಡಿದ ಅಯ್ಯರ್ ಅಂತಿಮವಾಗಿ ವಿಕೆಟ್ ಒಪ್ಪಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Fri, 16 December 22