ನಾನು ಕೇಳಿಕೊಂಡಿದ್ದು ಒಂದೇ ಪ್ರಶ್ನೆ: ಪಂದ್ಯದ ಬಳಿಕ ಇಶಾನ್ ಕಿಶನ್ ಹೇಳಿದ್ದೇನು?
India vs New Zealand: ನ್ಯೂಝಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ವಿಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 208 ರನ್ಗಳಿಸಿದರೆ, ಟೀಮ್ ಇಂಡಿಯಾ ಈ ಗುರಿಯನ್ನು 15.2 ಓವರ್ಗಳಲ್ಲಿ ಚೇಸ್ ಮಾಡಿದೆ.

ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಇಶಾನ್ ಕಿಶನ್ ಕೂಡ ಒಬ್ಬರು. ಏಕೆಂದರೆ ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 208 ರನ್ಗಳು.
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6 ರನ್ಗಳಿಸುವಷ್ಟೆರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 11 ಫೋರ್ ಹಾಗೂ 4 ಸಿಕ್ಸರ್ಗಳೊಂದಿಗೆ 76 ರನ್ ಚಚ್ಚಿದ್ದರು. ಆ ಬಳಿಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 82 ರನ್ಗಳಿಸುವ ಮೂಲಕ 15.2 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿ ತಲುಪಿಸಿದರು. ಈ ಮೂಲಕ ಭಾರತ ತಂಡ 7 ವಿಕೆಟ್ಗಳ ಜಯ ಸಾಧಿಸಿತು.
ಈ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಇಶಾನ್ ಕಿಶನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಇಶಾನ್, ಈ ಪಂದ್ಯದಲ್ಲಿ ನಾನು ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿತ್ತು. ಕೆಲವೊಮ್ಮೆ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೀರಿ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ.
ಇದಾಗ್ಯೂ ನಾವು ಅಪಾಯಗಳನ್ನು ತೆಗೆದುಕೊಳ್ಳಬಾರದು, ಕ್ರಾಸ್-ಬ್ಯಾಟಿಂಗ್ ಮಾಡಬಾರದು ಎಂದು ನೋಡುತ್ತಿದ್ದೆವು, ಆದರೆ ನಾನು ಇನ್ನೂ ಪವರ್‌ಪ್ಲೇನಲ್ಲಿ ಸಾಧ್ಯವಾದಷ್ಟು ರನ್‌ಗಳನ್ನು ಗಳಿಸಲು ನೋಡುತ್ತಿದ್ದೆ. ಏಕೆಂದರೆ ನಮ್ಮ ಮುಂದೆ 200 ಕ್ಕೂ ಹೆಚ್ಚಿನ ಟಾರ್ಗೆಟ್ ನೀಡಲಾಗಿತ್ತು.
ಹೀಗಾಗಿ ಪವರ್‌ಪ್ಲೇನಲ್ಲಿ ಹೇಗೆಲ್ಲಾ ಸಾಧ್ಯವೊ ಹಾಗೆಲ್ಲ ರನ್ಗಳಿಸಲೇಬೇಕಿತ್ತು. ಇಂತಹ ಸಂದರ್ಭಗಳಲ್ಲಿ ನೀವು ಹೇಗೆ ಬ್ಯಾಟಿಂಗ್ ಮಾಡುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನಾನು ಉತ್ತಮ ಹೊಡೆತಗಳನ್ನು ಆಡಿದರೆ, ಚೇಸ್ ಮಾಡಬಹುದು ಎಂಬ ಭಾವನೆ ನನಗಿತ್ತು ಎಂದು ಇಶಾನ್ ಕಿಶನ್ ಹೇಳಿದರು.
ನಾನು ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮವಾಗಿ ಆಡಿದ್ದೆ. ಈ ವೇಳೆಯೇ ಭಾರತಕ್ಕಾಗಿ ಆಡಲು ಸಮರ್ಥರಾಗಿದ್ದೀರಾ ಎಂಬ ಪ್ರಶ್ನೆಯೊಂದು ನನ್ನಲ್ಲಿ ಮೂಡಿತ್ತು. ನಾನು ನನ್ನಲ್ಲಿ ಕೇಳಿಕೊಂಡ ಒಂದು ಪ್ರಶ್ನೆ ಕಂಬ್ಯಾಕ್ ಸಾಧ್ಯಾನಾ? ನಾನು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಬಹುದೇ ಅಥವಾ ಇಲ್ಲವೇ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತೆ ದೇಶೀಯ ಟೂರ್ನಿ ಆಡಿದ್ದೆ. ಇದಾಗ್ಯೂ ನನ್ನಲ್ಲಿ ಉತ್ತಮವಾಗಿ ಆಡಬಲ್ಲೆನಾ ಎಂಬ ಪ್ರಶ್ನೆ ಹಾಗೆಯೇ ಉಳಿದಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾನು ಎಲ್ಲೋ ರನ್ ಗಳಿಸಬೇಕಾಗಿತ್ತು. ನಾನು ಔಟಾದರೂ, ನಾನು ಉತ್ತಮ ಕ್ರಿಕೆಟ್ ಆಡಬೇಕೆಂದು ಬಯಸಿದ್ದೆ. ಅದರಂತೆ ಇದೀಗ ನ್ಯೂಝಿಲೆಂಡ್ ವಿರುದ್ಧ ಆಡಿದ್ದೇನೆ. ಈ ಮೂಲಕ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆಗಿನ ಎಲ್ಲಾ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಂಡಿದ್ದೇನೆ ಎಂದು ಇಶಾನ್ ಕಿಶನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಬ್ಯಾಟರ್ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ
ಇಶಾನ್ ಕಿಶನ್ ಅವರ ಈ ಸಿಡಿಲಬ್ಬರಕ್ಕೆ ನಲುಗಿದ ನ್ಯೂಝಿಲೆಂಡ್ ಬೌಲರ್ಗಳು ಕೊನೆಯವರೆಗೆ ಲಯಕ್ಕೆ ಮರಳಲಿಲ್ಲ ಎಂಬುದು ವಿಶೇಷ. ಇದರ ಸಂಪೂರ್ಣ ಲಾಭ ಪಡೆದ ಟೀಮ್ ಇಂಡಿಯಾ 15.2 ಓವರ್ಗಳಲ್ಲಿ 209 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ.
