AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ

India vs New Zealand 2nd T20: ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 20 ಓವರ್​ಗಳಲ್ಲಿ 208 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 15.2 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ವಿಶ್ವ ದಾಖಲೆ ಬರೆದಿದೆ.

ಝಾಹಿರ್ ಯೂಸುಫ್
|

Updated on: Jan 24, 2026 | 7:32 AM

Share
ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ನಿರ್ಮಿಸಿರುವುದು ಟೀಮ್ ಇಂಡಿಯಾ (Team India). ಅದು ಕೂಡ ಪಾಕಿಸ್ತಾನ್ (Pakistan) ತಂಡದ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ. 

1 / 6
ರಾಯ್​ಪುರ್​ನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 208 ರನ್​​ಗಳನ್ನು. ಈ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

2 / 6
ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 32 ಎಸೆತಗಳಲ್ಲಿ 11 ಫೋರ್ ಹಾಗೂ 4 ಸಿಕ್ಸರ್​ಗಳೊಂದಿಗೆ 76 ರನ್ ಚಚ್ಚಿದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 82 ರನ್ ಬಾರಿಸಿದರು.

3 / 6
ಈ ಸ್ಫೋಟಕ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 15.2 ಓವರ್​ಗಳಲ್ಲಿ 209 ರನ್​ಗಳಿಸಿ 7 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಹೊಸ ವಿಶ್ವ ದಾಖಲೆಯನ್ನು ಬರೆಯಿತು. ಅದು ಸಹ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸುವ ಮೂಲಕ ಎಂಬುದು ವಿಶೇಷ.

4 / 6
ಅಂದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನು ಬಾಕಿಯಿರಿಸಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. 2025 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಪಾಕ್ ತಂಡ 24 ಎಸೆತಗಳನ್ನು ಬಾಕಿಯಿಸಿ 205 ರನ್​ಗಳನ್ನು ಚೇಸ್ ಮಾಡಿ ವಿಶ್ವ ದಾಖಲೆ ಬರೆದಿದ್ದರು.

5 / 6
ಇದೀಗ ಪಾಕಿಸ್ತಾನ್ ತಂಡದ ಈ ವಿಶ್ವ ದಾಖಲೆಯನ್ನು ಭಾರತೀಯ ಬ್ಯಾಟರ್​ಗಳು ಧೂಳೀಪಟ ಮಾಡಿದ್ದಾರೆ. ನ್ಯೂಝಿಲೆಂಡ್ ನೀಡಿದ 209 ರನ್​ಗಳ ಗುರಿಯನ್ನು 28 ಎಸೆತಗಳನ್ನು ಬಾಕಿಯಿರಿಸಿ ಚೇಸ್ ಮಾಡಿ ಗೆದ್ದಿದೆ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸಿ 200+ ಸ್ಕೋರ್​ ಬೆನ್ನತ್ತಿದ ಗೆದ್ದ ತಂಡ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.

6 / 6
Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ

ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!

ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ

ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ

ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!

ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ

ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP

ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!

ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ

ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್