IND vs SL: 98 ರನ್ ಇದ್ದಾಗ ರನೌಟ್ ಮಾಡಿದ ಶಮಿ; ಲಂಕಾ ನಾಯಕನಿಗೆ ಜೀವದಾನ ನೀಡಿದ ರೋಹಿತ್!

IND vs SL: ಈ ಪಂದ್ಯದಲ್ಲಿ 88 ಎಸೆತಗಳನ್ನು ಎದುರಿಸಿದ ಶನಕ 12 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 108 ರನ್ ಬಾರಿಸಿದರು. ಶನಕ ಅವರ ಈ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ ಭಾರತ ನೀಡಿದ 374 ರನ್‌ಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ 8 ವಿಕೆಟ್‌ಗೆ 306 ರನ್ ಗಳಿಸಿತು.

IND vs SL: 98 ರನ್ ಇದ್ದಾಗ ರನೌಟ್ ಮಾಡಿದ ಶಮಿ; ಲಂಕಾ ನಾಯಕನಿಗೆ ಜೀವದಾನ ನೀಡಿದ ರೋಹಿತ್!
ಶತಕ ಸಿಡಿಸಿದ ಶನಕ
Follow us
TV9 Web
| Updated By: ಪೃಥ್ವಿಶಂಕರ

Updated on:Jan 11, 2023 | 1:49 PM

ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು 67 ರನ್‌ಗಳಿಂದ ಸೋಲಿಸಿರುವ ಟೀಂ ಇಂಡಿಯಾ (India defeated Sri Lanka) ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ (Team India) ಆತಿಥೇಯರಿಗೆ 374 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ 179 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ದೊಡ್ಡ ಸೋಲಿನ ಭೀತಿಯಲ್ಲಿದ್ದ ಶ್ರೀಲಂಕಾ ತಂಡವನ್ನು ನಾಯಕ ದಸುನ್ ಶನಕ (Dasun Shanaka) ಹೋರಾಟದ ಇನ್ನಿಂಗ್ಸ್ ಆಡುವುದರೊಂದಿಗೆ 300 ರನ್‌ಗಳ ಸಮೀಪಕ್ಕೆ ತಂದರು. ಈ ಪಂದ್ಯದಲ್ಲಿ ಶನಕ 108 ರನ್​ಗಳ ಇನಿಂಗ್ಸ್ ಆಡುವುದರೊಂದಿಗೆ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು.

ಆದರೆ ಶನಕ ಈ ಶತಕ ಸಿಡಿಸುವಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮೆರೆದ ಕ್ರೀಡಾಸ್ಫೂರ್ತಿ ಪ್ರಮುಖ ಪಾತ್ರವಹಿಸಿತು. ವಾಸ್ತವವಾಗಿ ಶ್ರೀಲಂಕಾ ತಂಡ ಆಗಲೇ ಪಂದ್ಯದಿಂದ ಹೊರ ಬಿದ್ದಿತ್ತು. ಆದರೆ ಕೊನೆಯ ಓವರ್‌ನಲ್ಲಿ ಶನಕ ಅವರ ಶತಕದತ್ತ ಎಲ್ಲರ ಕಣ್ಣು ನೆಟ್ಟಿತ್ತು. ಶನಕ ಶತಕಕ್ಕೆ ಕೇವಲ 2 ರನ್‌ಗಳು ಬೇಕಿದ್ದರೆ, ಕೇವಲ 3 ಎಸೆತಗಳು ಮಾತ್ರ ಬಾಕಿ ಉಳಿದಿದ್ದವು.

98 ರನ್​ಗಳಿಗೆ ಶನಕ ರನೌಟ್

ನಾಲ್ಕನೇ ಎಸೆತದಲ್ಲಿ ಶನಕ ನಾನ್ ಸ್ಟ್ರೈಕ್ ಎಂಡ್‌ನಲ್ಲಿದ್ದರು. ಈ ವೇಳೆ ರಜಿತಾ ಬ್ಯಾಟಿಂಗ್​ನಲ್ಲಿದ್ದರು. ಮೊಹಮ್ಮದ್ ಶಮಿ ಕೊನೆಯ ಓವರ್‌ನ ನಾಲ್ಕನೇ ಎಸೆತವನ್ನು ಬೌಲ್ ಮಾಡಲು ಮುಂದಾದಾಗ ಶನಕಾ ಅವರನ್ನು ನಾನ್ ಸ್ಟ್ರೈಕ್‌ನಲ್ಲಿ ರನ್ ಔಟ್ ಮಾಡಿದರು. ಬಳಿಕ ಶಮಿ ಅಂಪೈರ್ ಬಳಿ ರನ್ ಔಟ್ ಮನವಿಯನ್ನೂ ಮಾಡಿದರು. ಆದರೆ ಅಷ್ಟರಲ್ಲಿ ಶಮಿ ಬಳಿ ಬಂದ ರೋಹಿತ್ ಅವರ ಬಳಿ ಏನನ್ನೋ ಮಾತನಾಡಿ, ರನೌಟ್ ಮನವಿಯನ್ನು ಹಿಂತೆಗೆದುಕೊಂಡಿದಲ್ಲದೆ, ಶನಕ ಅವರಿಗೆ ಬ್ಯಾಟಿಂಗ್ ಮುಂದುವರೆಸುವಂತೆ ಸೂಚನೆ ನೀಡಿದರು. ಇದಾದ ಬಳಿಕ ಶನಕ ಓವರ್‌ನ 5ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅವರು ಅಜೇಯರಾಗಿ ಮರಳಿದರು.

ಶನಕ ಏಕಾಂಗಿ ಹೋರಾಟ

ಈ ಪಂದ್ಯದಲ್ಲಿ 88 ಎಸೆತಗಳನ್ನು ಎದುರಿಸಿದ ಶನಕ 12 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 108 ರನ್ ಬಾರಿಸಿದರು. ಶನಕ ಅವರ ಈ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ ಭಾರತ ನೀಡಿದ 374 ರನ್‌ಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ 8 ವಿಕೆಟ್‌ಗೆ 306 ರನ್ ಗಳಿಸಿತು. ಪಂದ್ಯದ ನಂತರ ಈ ರನೌಟ್ ಬಗ್ಗೆ ಮಾತನಾಡಿದ ರೋಹಿತ್, ರನೌಟ್ ಮಾಡಿದ ವೇಳೆ ಶನಕ 98 ರನ್ ಗಳಿಸಿ ಆಡುತ್ತಿದ್ದರು. ಅಲ್ಲದೆ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಹೌದು ನಾವು ಶಕನ ಅವರನ್ನು ಔಟ್ ಮಾಡಲು ಯತ್ನಿಸಿದೆವು. ಆದರೆ ಆ ರೀತಿಯಲ್ಲಿ ಅಲ್ಲ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:46 pm, Wed, 11 January 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್