IPL 2023: ಐಪಿಎಲ್ನಿಂದ ರಿಷಬ್ ಪಂತ್ ಔಟ್! ಬಿಗ್ ಅಪ್ಡೇಟ್ ನೀಡಿದ ಸೌರವ್ ಗಂಗೂಲಿ
IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಿರ್ದೇಶಕ ಸೌರವ್ ಗಂಗೂಲಿ, ತಂಡದ ನಾಯಕ ರಿಷಬ್ ಪಂತ್ ಐಪಿಎಲ್ ಆಡುವ ಬಗ್ಗೆ ಹೇಳಿಕೆ ನೀಡಿದ್ದು, ಈ ವರ್ಷ ನಡೆಯಲಿರುವ ಐಪಿಎಲ್ 16 ನೇ ಆವೃತ್ತಿಯನ್ನು ರಿಷಬ್ ಮಿಸ್ ಮಾಡಿಕೊಳ್ಳುವುದು ದೃಢಪಟ್ಟಿದೆ.

ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್ನ ಮ್ಯಾಕ್ಸ್ (Max Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಪಂತ್ (Rishabh Pant) ಅವರನ್ನು ಜ.4ರಂದು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಜನವರಿ 6 ಶುಕ್ರವಾರದಂದು ಪಂತ್ ಅವರಿಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದರೂ ಕೆಲಕಾಲ ಆಟದಿಂದ ಹೊರಗುಳಿಯಲಿದ್ದಾರೆ ಎಂಬ ಮಾತು ಆಗಿನಿಂದಲೂ ಕೇಳಿಬರುತ್ತಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನೂತನ ನಿರ್ದೇಶಕ ಸೌರವ್ ಗಂಗೂಲಿ (Sourav Ganguly), ತಂಡದ ನಾಯಕ ರಿಷಬ್ ಪಂತ್ ಐಪಿಎಲ್ ಆಡುವ ಬಗ್ಗೆ ಹೇಳಿಕೆ ನೀಡಿದ್ದು, ಈ ವರ್ಷ ನಡೆಯಲಿರುವ ಐಪಿಎಲ್ 16 ನೇ ಆವೃತ್ತಿಯನ್ನು ರಿಷಬ್ ಮಿಸ್ ಮಾಡಿಕೊಳ್ಳುವುದು ದೃಢಪಟ್ಟಿದೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತನಾಡಿರುವ ಸೌರವ್ ಗಂಗೂಲಿ, ರಿಷಬ್ ಪಂತ್ ಐಪಿಎಲ್ (16ನೇ ಆವೃತ್ತಿ)ಗೆ ಲಭ್ಯರಿರುವುದಿಲ್ಲ. ನಾನೀಗ ದೆಹಲಿ ಕ್ಯಾಪಿಟಲ್ಸ್ ಜೊತೆಗಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಐಪಿಎಲ್ ತಂಡವಾಗಿದೆ. ಈ ವರ್ಷ ನಮ್ಮ ತಂಡ ಉತ್ತಮವಾಗಿ ಆಡಲಿದೆ. ಆದರೆ ರಿಷಬ್ ಪಂತ್ ಇಂಜುರಿ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
Rishabh Pant Health: ರಿಷಬ್ ಪಂತ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಚೇತರಿಸಿಕೊಳ್ಳಲು ಎಷ್ಟು ವಾರ ಬೇಕು?
ಈ ಹಿಂದೆಯೂ ಡೆಲ್ಲಿ ಜೊತೆಗಿದ್ದ ಗಂಗೂಲಿ
ಕಳೆದ ವರ್ಷ ಅಕ್ಟೋಬರ್ ವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಗಂಗೂಲಿ, 2019 ರ ಐಪಿಎಲ್ ಸೀಸನ್‌ವರೆಗೂ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಮತ್ತೆ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಐಪಿಎಲ್ ಜೊತೆಗೆ ಸೌರವ್ ಗಂಗೂಲಿ ಇತರ ಲೀಗ್‌ಗಳಲ್ಲಿಯೂ ಡೆಲ್ಲಿ ಫ್ರಾಂಚೈಸಿ ಖರೀದಿಸಿರುವ ತಂಡಗಳ ಜೊತೆ ಕೆಲಸ ಮಾಡಲಿದ್ದಾರೆ. ಐಪಿಎಲ್ ಹೊರತಾಗಿ, ಡೆಲ್ಲಿ ಫ್ರಾಂಚೈಸಿಯು ILT20 (ದುಬೈ ಕ್ಯಾಪಿಟಲ್ಸ್), SA T20 (ಪ್ರಿಟೋರಿಯಾ ಕ್ಯಾಪಿಟಲ್ಸ್) ನಲ್ಲಿ ತಂಡಗಳನ್ನು ಖರೀದಿಸಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿದ್ದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದಾಗ, ಹಿತಾಸಕ್ತಿ ಸಂಘರ್ಷದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಕ್ಯಾಪಿಟಲ್ಸ್‌ನಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಐಪಿಎಲ್ ಆಡದಿದ್ದರೂ ಪೂರ್ಣ ವೇತನ
ಐಪಿಎಲ್‌ನಲ್ಲಿ ಆಡದಿದ್ದರೂ ರಿಷಬ್ ಪಂತ್ ಸಂಪೂರ್ಣ ಶುಲ್ಕವನ್ನು ಪಡೆಯಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 16 ಕೋಟಿ ನೀಡಿ ಪಂತ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಇನ್ನು ಪಂತ್, ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಆಟಗಾರನಾಗಿರುವುದರಿಂದ ಬಿಸಿಸಿಐನಿಂದಲೂ ಪಂತ್ಗೆ 16 ಕೋಟಿ ರೂ. ಸಂಭಾವನೆ ಸಿಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 11 January 23
