
ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಆದರೆ ಈ ಮಧ್ಯೆ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಇಬ್ಬರೂ ಆಡುವ ಏಕದಿನ ಪಂದ್ಯಕ್ಕೆ ಸಂಬಂಧಿಸಿದಂತೆ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ವಾಸ್ತವವಾಗಿ ನಾಲ್ಕು ತಿಂಗಳ ನಂತರ ನಡೆಯಲಿರುವ ಭಾರತ-ಆಸ್ಟ್ರೇಲಿಯಾ (India vs Australia) ಸರಣಿಯ ಸಿಡ್ನಿ ಏಕದಿನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಭಾರತ, ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಏಕದಿನ ಮತ್ತು ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ, ಇದರಲ್ಲಿ ಕೊನೆಯ ಪಂದ್ಯ ನವೆಂಬರ್ 8 ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ವಿರಾಟ್ ಮತ್ತು ರೋಹಿತ್ ಇಬ್ಬರೂ ಟೆಸ್ಟ್ ಮತ್ತು ಟಿ20ಗಳಿಂದ ನಿವೃತ್ತರಾಗಿರುವುದರಿಂದ ಮತ್ತು 2027 ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯು ಇಬ್ಬರಿಗೂ ಮುಖ್ಯವಾದ ಕಾರಣ ಏಕದಿನ ಸರಣಿಯಲ್ಲಿ ಆಡುವುದನ್ನು ಕಾಣಬಹುದು.
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತೀಯ ಅಭಿಮಾನಿಗಳಲ್ಲಿ ಅಪಾರ ಉತ್ಸಾಹವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ, ‘ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲ್ಲಿರುವ ಏಕದಿನ ಪಂದ್ಯ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್‌ಗಳು ಪಂದ್ಯಕ್ಕೆ ನಾಲ್ಕು ತಿಂಗಳ ಮೊದಲೇ ಮಾರಾಟವಾಗಿದ್ದು, ಇದು ಈ ಪಂದ್ಯಗಳಿಗೆ ಭಾರಿ ಬೇಡಿಕೆಯನ್ನು ತೋರಿಸುತ್ತದೆ. ಈ ಪಂದ್ಯಗಳು ಮಾತ್ರವಲ್ಲದೆ ಎಂಸಿಜಿಯಲ್ಲಿ ನಡೆಯಲ್ಲಿರುವ ಟಿ20 ಪಂದ್ಯ ಹಾಗೂ ಗಬ್ಬಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್ಗೂ ಭಾರಿ ಬೇಡಿಕೆಯಿದೆ.
ಆಶಸ್ ಟೆಸ್ಟ್ ಸರಣಿಯ ಟಿಕೆಟ್‌ಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿದ್ದು, ಇದೀಗ ಬಿಳಿ ಚೆಂಡಿನ ಪಂದ್ಯಗಳಿಗೂ ಭಾರಿ ಬೇಡಿಕೆಯಿದೆ, ಕೇವಲ ಎರಡು ವಾರಗಳ ಟಿಕೆಟ್ ಮಾರಾಟದ ನಂತರ ಎಂಟು ಪಂದ್ಯಗಳಿಗೆ 90,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇಲ್ಲಿಯವರೆಗೆ ಮಾರಾಟವಾದ ಟಿಕೆಟ್‌ಗಳಲ್ಲಿ ಶೇಕಡಾ 16 ಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿ ಕ್ಲಬ್‌ಗಳು ಖರೀದಿಸಿವೆ. ಭಾರತ್ ಆರ್ಮಿ ಅತ್ಯಂತ ಸಕ್ರಿಯ ಅಭಿಮಾನಿ ಕ್ಲಬ್‌ಗಳಲ್ಲಿ ಒಂದಾಗಿದ್ದು, 2,400 ಕ್ಕೂ ಹೆಚ್ಚು ಟಿಕೆಟ್ ಖರೀದಿಸಿದೆ. ಫ್ಯಾನ್ಸ್ ಇಂಡಿಯಾ ಕೂಡ 1,400 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಖರೀದಿಸಿದೆ ಎಂದು ತಿಳಿಸಿದೆ.
IND vs ENG: ಬುಮ್ರಾ ವಿಚಾರವನ್ನು ಬಹಿರಂಗಪಡಿಸಿದ್ಯಾಕೆ? ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಗೌರವಿಸುವ ಬಗ್ಗೆ ಹೇಳಿಕೆ ನೀಡುವ ಮೂಲಕ ಈ ಸರಣಿಯನ್ನು ಇನ್ನಷ್ಟು ವಿಶೇಷಗೊಳಿಸಿದೆ. ಈ ಆಸ್ಟ್ರೇಲಿಯಾ ಪ್ರವಾಸವು ರೋಹಿತ್ ಮತ್ತು ವಿರಾಟ್ ಅವರ ಕೊನೆಯ ಪ್ರವಾಸವಾಗಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದು, ಆದ್ದರಿಂದ ಈ ಸರಣಿಯನ್ನು ಇಬ್ಬರಿಗೂ ವಿಶೇಷವಾಗಿಸುವುದಾಗಿ ಹೇಳಿಕೊಂಡಿದೆ.
Published On - 9:13 pm, Thu, 26 June 25