IND vs PAK: ಪಾಕ್ ವಿರುದ್ಧದ ಪಂದ್ಯದಲ್ಲಿ ಪಂತ್ ಮಾತ್ರವಲ್ಲ ಈ ಸ್ಟಾರ್ ಪ್ಲೇಯರ್ ಕೂಡ ಆಡುವುದು ಡೌಟ್
India Playing XI vs Pakistan: ಭಾರತ- ಪಾಕಿಸ್ತಾನ ನಡುವಣ ರಣ ರೋಚಕ ಕದನಕ್ಕೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದೇ ಕುತೂಹಲ. ಭಾರತದ ಬ್ಯಾಟಿಂಗ್ ವಿಭಾಗ ಬಹುತೇಕ ಫೈನಲ್ ಆಗಿದೆ. ಆದರೆ, ಬೌಲಿಂಗ್ನಲ್ಲಿ ಗೊಂದಲವಿದೆ.

ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಿಕೆಟ್ ಸೋಲ್ಡ್ ಔಟಾದ ಪರಿಣಾಮ ಹೌಸ್ ಫುಲ್ ನಿರೀಕ್ಷಿಸಲಾಗಿದೆ. ಇಡೀ ವಿಶ್ವವೇ ಈ ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಈ ರಣ ರೋಚಕ ಕದನಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ (India Playing XI) ಹೇಗಿರಬಹುದು ಎಂಬುದೇ ಕುತೂಹಲ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ವಿಭಾಗ ಬಹುತೇಕ ಫೈನಲ್ ಆಗಿದೆ. ರಿಷಭ್ ಪಂತ್ ಬೆಂಚ್ ಕಾಯಲಿದ್ದಾರೆ ಎಂದು ಹೇಳಲಾಗಿದ್ದು ದಿನೇಶ್ ಕಾರ್ತಿಕ್ಗೆ ಅವಕಾಶ ಸಿಗಲಿದೆ. ಇದರ ಜೊತೆಗೆ ಮತ್ತೊಬ್ಬ ಸ್ಟಾರ್ ಪ್ಲೇಯರ್ ಮೊಹಮ್ಮದ್ ಶಮಿ ಕೂಡ ಆಡುವುದು ಅನುಮಾನ ಎನ್ನಲಾಗುತ್ತಿದೆ. ಹರ್ಷಲ್ ಪಟೇಲ್ ಅಥವಾ ಶಮಿ ಪೈಕಿ ಒಬ್ಬರಿಗೆ ಮಾತ್ರ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆ.
ಮೊಹಮ್ಮದ್ ಶಮಿ ಐಪಿಎಲ್ 2022 ಫೈನಲ್ ಬಳಿಕ ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾಕ್ಕೆ ಮರಳಿದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶಮಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದರು. ಇದರಲ್ಲಿ ಯಶಸ್ಸು ಸಾಧಿಸಿದರೂ ನಂತರದ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಗ ಪರಿಣಾಮ ಶಮಿಯ ಸಾಮರ್ಥ್ಯ ನೋಡಲು ಸಾಧ್ಯವಾಗಲಿಲ್ಲ. ಇತ್ತ ಹರ್ಷಲ್ ಪಟೇಲ್ ಇಂಜುರಿಯಿಂದ ಗುಣಮುಖರಾಗಿ ಸತತವಾಗಿ ಪಂದ್ಯವನ್ನು ಆಡಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಯಾರಿಗೆ ಸ್ಥಾನ ಎಂಬ ಗೊಂದಲವಿದೆ.
ಉಳಿದಂತೆ ಭಾರತದ ಟಾಪ್ 5 ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರದ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಅರನೇ ಸ್ಥಾನಕ್ಕೆ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಆಡುವುದು ಬಹುತೇಕ ಖಚಿತ. ಆಲ್ರೌಂಡರ್ ಜವಾಬ್ದಾರಿ ಹಾರ್ದಿಕ್ ಜೊತೆಗೆ ಅಕ್ಷರ್ ಪಟೇಲ್ ವಹಿಸಲಿದ್ದಾರೆ. ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಥವಾ ಯುಜ್ವೇಂದ್ರ ಚಹಲ್ ಇರಲಿದ್ದಾರೆ.
ಮಳೆ ಇದೆಯೇ?:
ಮೆಲ್ಬೋರ್ನ್ ಭಾಗದಲ್ಲಿ ನಿರಂತರ ಮಳೆ ಸುರಿದರೆ ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೀಗ ಗುಡ್ ನ್ಯೂಸ್ ಸಿಕ್ಕಿದೆ. ಮೆಲ್ಬೋರ್ನ್ನಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಶನಿವಾರ ಸಣ್ಣ ಪ್ರಮಾಣದ ಮಳೆ ಆಗಿದೆಯಷ್ಟೆ. ಭಾನುವಾರ ಆಸ್ಟ್ರೇಲಿಯಾ ಕಾಲಮಾನ ಮಧ್ಯಾಹ್ನದ ಹೊತ್ತಿಗೆ ಮೆಲ್ಬೋರ್ನ್ನಲ್ಲಿ ಮಳೆಯ ಸೂಚನೆಯಿಲ್ಲ. ಸಂಜೆ ವೇಳೆಗೆ ಕೊಂಚ ಮಳೆ ಆಗಬಹುದು ಎಂದು ಹೇಳಲಾಗಿದೆ. ಈಗೀನ ಸ್ಥಿತಿ ನೋಡಿದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗುವುದು ಖಚಿತವಾಗಿದೆ.




