15 ಸದಸ್ಯರ ಟೀಮ್ ಇಂಡಿಯಾದಲ್ಲಿ 9 ಬೌಲರ್‌ಗಳು..!
India T20 Squad For England: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಗಾಗಿ 15 ಸದಸ್ಯರ ಟೀಮ್ ಇಂಡಿಯಾವನ್ನು ಹೆಸರಿಸಲಾಗಿದೆ. ಈ ತಂಡದಲ್ಲಿ ಆಲ್ರೌಂಡರ್ ಸೇರಿದಂತೆ 9 ಬೌಲರ್‌ಗಳು ಇರುವುದು ವಿಶೇಷ. ಅಂದರೆ ಭಾರತ ತಂಡವು ಈ ಬಾರಿ ಆಲ್ರೌಂಡರ್ಗಳ ಆಯ್ಕೆಯೊಂದಿಗೆ ಬೌಲರ್ಗಳಿಗೆ ಪ್ರಾಶಸ್ತ್ಯ ನೀಡಿರುವುದು ವಿಶೇಷ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿಕೆಟ್ ಕೀಪರ್ಗಳಾಗಿ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿರುವುದು ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೇಲ್.
ಹಾಗೆಯೇ ಈ ತಂಡದಲ್ಲಿ ಪರಿಪೂರ್ಣ ಬ್ಯಾಟರ್ಗಳಾಗಿ ಆರು ಮಂದಿ ಆಯ್ಕೆಯಾದರೆ, ಆಲ್ರೌಂಡರ್ಗಳಾಗಿ ನಾಲ್ವರಿಗೆ ಮಣೆ ಹಾಕಲಾಗಿದೆ. ಇನ್ನು ಪರಿಪೂರ್ಣ ಬೌಲರ್ಗಳಾಗಿ ಐವರು ಸ್ಥಾನಗಿಟ್ಟಿಸಿಕೊಂಡಿದ್ದಾರೆ.
9 ಬೌಲರ್ಗಳ ಪಡೆ:
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ 9 ಬೌಲರ್ಗಳ ಆಯ್ಕೆಗಳಿವೆ. ಇಲ್ಲಿ ಪೂರ್ಣ ಪ್ರಮಾಣದ ಬೌಲರ್ಗಳಾಗಿ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಹಾಗೂ ವರುಣ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಆಲ್ರೌಂಡರ್ಗಳ ರೂಪದಲ್ಲಿ ಟೀಮ್ ಇಂಡಿಯಾಗೆ ನಾಲ್ವರು ಬೌಲರ್ಗಳ ಆಯ್ಕೆಗಳಿವೆ. ಅದರಂತೆ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ ಅವರನ್ನು ಬೌಲರ್ಗಳಾಗಿ ಬಳಸಿಕೊಳ್ಳಬಹುದು.
ವೇಗಿಗಳು/ಸ್ಪಿನ್ನರ್ಗಳು ಯಾರೆಲ್ಲಾ?
ಭಾರತ ತಂಡದಲ್ಲಿ ಈ ಬಾರಿ ವೇಗಿಗಳಾಗಿ ಯಾರೆಲ್ಲಾ ಎಂದು ನೋಡುವುದಾದರೆ…
- ಮೊಹಮ್ಮದ್ ಶಮಿ
- ಅರ್ಷದೀಪ್ ಸಿಂಗ್
- ಹರ್ಷಿತ್ ರಾಣಾ
- ಹಾರ್ದಿಕ್ ಪಾಂಡ್ಯ
- ನಿತೀಶ್ ಕುಮಾರ್ ರೆಡ್ಡಿ
ಸ್ಪಿನ್ನರ್ಗಳು:
- ರವಿ ಬಿಷ್ಣೋಯ್
- ವರುಣ್ ಚಕ್ರವರ್ತಿ
- ಅಕ್ಷರ್ ಪಟೇಲ್
- ವಾಷಿಂಗ್ಟನ್ ಸುಂದರ್
ಇದನ್ನೂ ಓದಿ: IPL 2025: RCB ತಂಡ ನಾಯಕ ಯಾರು? ಸ್ಪಷ್ಟನೆ ನೀಡಿದ ಕೋಚ್ ಆ್ಯಂಡಿ ಫ್ಲವರ್
ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ಟಿ20 ತಂಡ ಈ ಕೆಳಗಿನಂತಿದೆ…
ಬ್ಯಾಟರ್ಸ್: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್).
ಬೌಲರ್‌ಗಳು: ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ
ಆಲ್ ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ