IND vs BAN: ಭಾರತ vs ಬಾಂಗ್ಲಾದೇಶ್ ಸರಣಿ ನಡೆಯುವುದು ಡೌಟ್
India vs Bangaldesh: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಗೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಈ ವೇಳಾಪಟ್ಟಿಯಂತೆ ಆಗಸ್ಟ್ 17 ರಿಂದ ಏಕದಿನ ಸರಣಿ ಶುರುವಾಗಲಿದೆ. ಇದಾದ ಬಳಿಕ ಆಗಸ್ಟ್ 26 ರಿಂದ ಟಿ20 ಸರಣಿ ಆರಂಭವಾಗಲಿದೆ. ಆದರೆ ಈ ಸರಣಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ.

India vs Bangladesh: ಆಗಸ್ಟ್ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸೀಮಿತ ಓವರ್ಗಳ ಸರಣಿಯನ್ನು ಬಿಸಿಸಿಐ (BCCI) ಕೈ ಬಿಡುವ ಸಾಧ್ಯತೆಯಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಬಾಂಗ್ಲಾದೇಶ್ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಿದ್ದು, ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಯಿಂದ ಹಿಂದೆ ಸರಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
ಪೆಹಲ್ಗಾಮ್ನಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಬಾಂಗ್ಲಾದೇಶದ ನಿವೃತ್ತ ಸೇನಾ ಅಧಿಕಾರಿ ಎಎಲ್ಎಂ ಫಜ್ಲುರ್ ರೆಹಮಾನ್ ಅವರು ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆಗೆ ಕರೆ ನೀಡಿದ್ದರು. ಅಲ್ಲದೆ ಅವರು ಪ್ರಸ್ತುತ ಮಧ್ಯಂತರ ಸರ್ಕಾರಕ್ಕೆ ಬಹಳ ಹತ್ತಿರವಾಗಿದ್ದು, ಭಾರತದ ಈಶಾನ್ಯ ರಾಜ್ಯಗಳ ಆಕ್ರಮಣವನ್ನು ಸೂಚಿಸುವ ಮೂಲಕ ಇತ್ತೀಚೆಗೆ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು.
ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ್ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆಯ ಕುರಿತು ಚರ್ಚೆಯನ್ನು ಪ್ರಾರಂಭಿಸುವುದು ಅಗತ್ಯ ಎಂದು ಭಾವಿಸುತ್ತೇನೆ ಎಂದು ನಿವೃತ್ತ ಸೇನಾ ಅಧಿಕಾರಿ ಎಎಲ್ಎಂ ಫಜ್ಲುರ್ ರೆಹಮಾನ್ ಹೇಳಿದ್ದರು.
ಅತ್ತ ನಿವೃತ್ತ ಸೇನಾಧಿಕಾರಿ ಬಾಂಗ್ಲಾದೇಶ್ ಸರ್ಕಾರದ ಬೆಂಬಲಿಗರಲ್ಲಿ ಒಬ್ಬರು ಎಂದು ತಿಳಿದು ಬಂದಿದೆ. ಇದೀಗ ಅವರ ಈ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗಳನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಯು ಆಗಸ್ಟ್ 17 ರಂದು ಆರಂಭಿಸಲು ನಿರ್ಧರಿಸಲಾಗಿತ್ತು. ಇದೀಗ ಬದಲಾದ ಪರಿಸ್ಥಿತಿಯಿಂದಾಗಿ ಈ ಸರಣಿಯು ನಡೆಯುವುದು ಅನುಮಾನ. ಅಲ್ಲದೆ ಇದೇ ಅವಧಿಯಲ್ಲಿ ಟೀಮ್ ಇಂಡಿಯಾ ಬೇರೊಂದು ರಾಷ್ಟ್ರದ ವಿರುದ್ಧ ಸರಣಿ ಆಯೋಜಿಸಿದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಭಾರತ vs ಬಾಂಗ್ಲಾದೇಶ್ ಸರಣಿ ವೇಳಾಪಟ್ಟಿ:
ಏಕದಿನ ಸರಣಿ:
- ಮೊದಲ ಏಕದಿನ ಪಂದ್ಯ – ಆಗಸ್ಟ್ 17, ಮಿರ್ಪುರ್
- ಎರಡನೇ ಏಕದಿನ ಪಂದ್ಯ – ಆಗಸ್ಟ್ 20, ಮಿರ್ಪುರ್
- ಮೂರನೇ ಏಕದಿನ ಪಂದ್ಯ – ಆಗಸ್ಟ್ 23, ಚಟ್ಟೋಗ್ರಾಮ್
ಟಿ20 ಸರಣಿ:
- ಮೊದಲ ಟಿ20 ಪಂದ್ಯ – ಆಗಸ್ಟ್ 26, ಚಟ್ಟೋಗ್ರಾಮ್
- ಎರಡನೇ ಟಿ20 ಪಂದ್ಯ – ಆಗಸ್ಟ್ 29, ಮಿರ್ಪುರ್
- ಮೂರನೇ ಟಿ20 ಪಂದ್ಯ – ಆಗಸ್ಟ್ 31, ಮಿರ್ಪುರ್
