- Kannada News Photo gallery Cricket photos 5 Players to be dropped from BCCI's annual central contract
ಕೇಂದ್ರೀಯ ಒಪ್ಪಂದದಿಂದ ಐವರು ಆಟಗಾರರನ್ನು ಕೈಬಿಟ್ಟ ಬಿಸಿಸಿಐ
BCCI Annual Central Contract: ಬಿಸಿಸಿಐ ಈ ಬಾರಿ ಟೀಮ್ ಇಂಡಿಯಾದ 34 ಆಟಗಾರರೊಂದಿಗೆ ಕೇಂದ್ರೀಯ ಒಪ್ಪಂದ ಮಾಡಿಕೊಂಡಿದೆ. ಈ ಆಟಗಾರರನ್ನು ನಾಲ್ಕು ಗ್ರೇಡ್ಗಳಲ್ಲಿ ವಿಂಗಡಿಸಲಾಗಿದ್ದು, ಈ ಗ್ರೇಡ್ಗಳಲ್ಲಿರುವ ಆಟಗಾರರಿಗೆ ಕ್ರಮವಾಗಿ ವಾರ್ಷಿಕವಾಗಿ ತಲಾ 7, 5, 3 ಮತ್ತು 1 ಕೋಟಿ ರೂ. ಸಂಭಾವನೆ ಸಿಗಲಿದೆ.
Updated on: Apr 21, 2025 | 12:58 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2024-25ರ ಸಾಲಿನ ಕೇಂದ್ರೀಯ ಒಪ್ಪಂದದ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಕಳೆದ ಸಾಲಿನಲ್ಲಿ ಸ್ಥಾನ ಪಡೆದಿದ್ದ ಐವರು ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ. ಆ ಆಟಗಾರರು ಯಾರೆಂದರೆ....

ಶಾರ್ದೂಲ್ ಠಾಕೂರ್: ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕಳೆದ ಸಾಲಿನ ವಾರ್ಷಿಕ ಒಪ್ಪಂದದಲ್ಲಿ ಗ್ರೇಡ್-ಸಿ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ 2024-25ರ ಬಿಸಿಸಿಐ ಒಪ್ಪಂದದಿಂದ ಶಾರ್ದೂಲ್ ಅವರನ್ನು ಕೈ ಬಿಡಲಾಗಿದೆ.

ಅವೇಶ್ ಖಾನ್: ಟೀಮ್ ಇಂಡಿಯಾ ವೇಗಿ ಅವೇಶ್ ಖಾನ್ ಕಳೆದ ಒಪ್ಪಂದ ಪಟ್ಟಿಯಲ್ಲಿ ಗ್ರೇಡ್ ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ನೂತನ ಒಪ್ಪಂದದಿಂದ ಅವೇಶ್ ಖಾನ್ ಅವರನ್ನು ಸಹ ಕೈ ಬಿಡಲಾಗಿದೆ.

ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಳೆದ ಸಾಲಿನಲ್ಲಿ ಗ್ರೇಡ್-ಎ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಿವೃತ್ತರಾಗಿರುವ ಕಾರಣ ಅಶ್ವಿನ್ ಅವರನ್ನು ಸಹ ಕೇಂದ್ರೀಯ ಒಪ್ಪಂದದಿಂದ ಕೈ ಬಿಡಲಾಗಿದೆ.

ಜಿತೇಶ್ ಶರ್ಮಾ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕಳೆದ ಸಾಲಿನಲ್ಲಿ ಸಿ ಗ್ರೇಡ್ ಒಪ್ಪಂದ ಪಟ್ಟಿಯಲ್ಲಿದ್ದರು. ಆದರೆ ಈ ಬಾರಿ ಅವರನ್ನು ಕೇಂದ್ರೀಯ ಒಪ್ಪಂದಕ್ಕಾಗಿ ಪರಿಗಣಿಸಲಾಗಿಲ್ಲ.

ಕೆ.ಎಸ್. ಭರತ್: ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಕೂಡ ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಕಳೆದ ಸಾಲಿನಲ್ಲಿ ಸಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದ ಭರತ್ ಜೊತೆಗಿನ ಒಪ್ಪಂದವನ್ನು ಸಹ ಬಿಸಿಸಿಐ ಕೊನೆಗೊಳಿಸಿದೆ.

ಬಿಸಿಸಿಐ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು: ಎ+ ಗ್ರೇಡ್: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ || ಎ ಗ್ರೇಡ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಭ್ ಪಂತ್ || ಬಿ ಗ್ರೇಡ್: ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್.

ಸಿ ಗ್ರೇಡ್: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಝ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಆಕಾಶ್ ದೀಪ್, ವರುಣ್ ಚರ್ಕವರ್ತಿ.



















