Sai Sudarshan: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ ಸಾಯಿ ಸುದರ್ಶನ್: ಏನಿದು ಸಾಧನೆ ನೋಡಿ
GT vs SRH, IPL 2025: ಈ ಋತುವಿನಲ್ಲಿ ಸಾಯಿ ಸುದರ್ಶನ್ ಆಡಿದ 10 ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಐಪಿಎಲ್‌ನ 18 ನೇ ಋತುವಿನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ. ಅದೇ ಸಮಯದಲ್ಲಿ, ಸಾಯಿ ಹೈದರಾಬಾದ್ ವಿರುದ್ಧ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಬೆಂಗಳೂರು (ಮೇ. 03): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League) 51 ನೇ ಪಂದ್ಯವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಆತಿಥೇಯ ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು 38 ರನ್‌ಗಳಿಂದ ಗೆದ್ದುಕೊಂಡಿತು. ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಜಿಟಿ ತಂಡದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಈ ಪಂದ್ಯದಲ್ಲಿ ಕೂಡ ಕಮಾಲ್ ಮಾಡಿದರು. ಈ ಸೀಸನ್ನ ಪ್ರತಿ ಪಂದ್ಯದಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿದೆ, ಅದು ಹೈದರಾಬಾದ್ ವಿರುದ್ಧವೂ ಮುಂದುವರೆಯಿತು. ಸುದರ್ಶನ್ ಕೇವಲ 23 ಎಸೆತಗಳಲ್ಲಿ 9 ಬೌಂಡರಿಗಳಿಂದ 48 ರನ್ ಚಚ್ಚಿದರು.
ಇದರೊಂದಿಗೆ, ಅವರು ಈ ಋತುವಿನಲ್ಲಿ ಸುದರ್ಶನ್ ಆಡಿದ 10 ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಐಪಿಎಲ್‌ನ 18 ನೇ ಋತುವಿನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ. ಅದೇ ಸಮಯದಲ್ಲಿ, ಸಾಯಿ ಹೈದರಾಬಾದ್ ವಿರುದ್ಧ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಸಾಯಿ ಸುದರ್ಶನ್ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಾಣ:
23 ವರ್ಷದ ಸಾಯಿ ಸುದರ್ಶನ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ದೊಡ್ಡ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸುದರ್ಶನ್ ಪಾತ್ರರಾದರು. ಇವರು 54 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಸಚಿನ್ 59 ಇನ್ನಿಂಗ್ಸ್‌ಗಳಲ್ಲಿ ಟಿ20ಯಲ್ಲಿ 2000 ರನ್ ಪೂರೈಸಿದ್ದಾರೆ. 2011 ರಲ್ಲಿ ಈ ಸಾಧನೆ ಮಾಡಿದ್ದರು. ಸುದರ್ಶನ್ ಟಿ20 ಮಾದರಿಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುದರ್ಶನ್ 1000 ರನ್‌ಗಳಿಂದ 2000 ರನ್‌ಗಳನ್ನು ತಲುಪಲು ಕೇವಲ 22 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.
RCB vs CSK, IPL 2025: ಇಂದು ಆರ್ಸಿಬಿ ಗೆದ್ದರೆ ಏನಾಗಲಿದೆ?: ಪಾಯಿಂಟ್ಸ್ ಟೇಬಲ್ ಅಲ್ಲೋಲ-ಕಲ್ಲೋಲ
53 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮಾತ್ರ ಅವರಿಗಿಂತ ಮುಂದಿದ್ದಾರೆ. ಸಾಯಿ ಭಾರತೀಯ ತಂಡಕ್ಕೂ ಪಾದಾರ್ಪಣೆ ಮಾಡಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅವರು ಟೀಮ್ ಇಂಡಿಯಾ ಪರ 3 ಏಕದಿನ ಮತ್ತು 1 ಟಿ20 ಪಂದ್ಯವನ್ನೂ ಆಡಿದ್ದಾರೆ. ಕಳೆದ ಋತುವಿನಲ್ಲಿ ಸುದರ್ಶನ್ ಐಪಿಎಲ್ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು, ಕೇವಲ 25 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು, ಸಚಿನ್ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಈ ದಾಖಲೆಯನ್ನು ಹೊಂದಿದ್ದರು.
ಟಿ20ಯಲ್ಲಿ ವೇಗವಾಗಿ 2000 ರನ್ ಪೂರೈಸಿದ ಆಟಗಾರ
- 53 – ಶಾನ್ ಮಾರ್ಷ್
- 54 – ಸಾಯಿ ಸುದರ್ಶನ್*
- 58 – ಬ್ರಾಡ್ ಹಾಡ್ಜ್ / ಮಾರ್ಕಸ್ ಟ್ರೆಸ್ಕೋಥಿಕ್ / ಮೊಹಮ್ಮದ್ ವಾಸಿಮ್
- 59 – ಸಚಿನ್ ತೆಂಡೂಲ್ಕರ್ / ಡಾರ್ಸಿ ಶಾರ್ಟ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ