ಭಾರತ-ಆಸ್ಟ್ರೇಲಿಯಾ ನಡುವಣ 3 ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಮೊಹಾಲಿಯ ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅತ್ತ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿರುವುದರಿಂದ ಆಸ್ಟ್ರೇಲಿಯಾ ತಂಡ ಕೂಡ ಫುಲ್ ಖುಷಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಆಸೀಸ್ ಪಾಲಿಗೆ ಪಿಸಿಎ ಪಿಚ್ ತವರು ಮೈದಾನದಂತಿರುವುದು.
ಅಂದರೆ ಮೊಹಾಲಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ 5 ಏಕದಿನ ಪಂದ್ಯಗಳನ್ನಾಡಲಿದೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 1 ಬಾರಿ ಮಾತ್ರ ಎಂದರೆ ನಂಬಲೇಬೇಕು. ಅತ್ತ ತವರಿನ ಹುಲಿಗಳನ್ನು ಪಿಸಿಎ ಪಿಚ್ನಲ್ಲಿ ಆಸ್ಟ್ರೇಲಿಯಾ 4 ಬಾರಿ ಮಣಿಸಿದೆ.
ಇಲ್ಲಿ ವಿಶೇಷ ಎಂದರೆ ಈ ಪಿಚ್ನಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿರುವುದು 1996 ರಲ್ಲಿ. ಇದಾದ ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಭಾರತಕ್ಕೆ ಆಸೀಸ್ ಪಡೆಗೆ ಸೋಲುಣಿಸಿದೆ.
ಇನ್ನು ಈ ಮೈದಾನದಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿ 358 ರನ್ ಬಾರಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನು ಚೇಸ್ ಮಾಡಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿತ್ತು ಎಂಬುದು ಉಲ್ಲೇಖಾರ್ಹ. ಹೀಗಾಗಿ ಮೊಹಾಲಿ ಮೈದಾನದಲ್ಲಿ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದೆ ಆಸ್ಟ್ರೇಲಿಯಾ ತಂಡ.
ಮೊಹಾಲಿ ಮೈದಾನದಲ್ಲಿ ಭಾರತ ತಂಡವು ಒಟ್ಟು 16 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ ಇಲ್ಲಿ ಸೋತಿರುವ 6 ಪಂದ್ಯಗಳಲ್ಲಿ ನಾಲ್ಕು ಮ್ಯಾಚ್ಗಳು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ.
ಇನ್ನು ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಒಟ್ಟು 7 ಪಂದ್ಯಗಳನ್ನಾಡಿದ್ದು, 6 ರಲ್ಲಿ ಜಯ ಸಾಧಿಸಿದೆ. ಹಾಗೆಯೇ 1996 ರಲ್ಲಿ ಮಾತ್ರ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ.
ಇಲ್ಲಿ ಒಟ್ಟಾರೆ ಪಂದ್ಯಗಳ ಗೆಲುವಿನ ಲೆಕ್ಕಾಚಾರಗಳನ್ನು ಗೆದ್ದುಕೊಂಡರೆ ಮೊಹಾಲಿಯ ಪಿಸಿಎ ಮೈದಾನವು ಭಾರತಕ್ಕಿಂತ ಆಸ್ಟ್ರೇಲಿಯಾ ಪಾಲಿಗೆ ತವರು ಮೈದಾನದಂತಿದೆ. ಇದಕ್ಕೆ ಸಾಕ್ಷಿಯೇ ಈ ಮೈದಾನದಲ್ಲಿ ಆಸೀಸ್ ಪಡೆ ಪಾರುಪತ್ಯ ಮೆರೆದಿರುವುದು. ಇದಾಗ್ಯೂ ಶುಕ್ರವಾರ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ:
Published On - 10:58 pm, Thu, 21 September 23