IND vs BAN: ಸಿರಾಜ್- ಕುಲ್ದೀಪ್ ಮ್ಯಾಜಿಕ್; ಬಾಲ ಮುದುರಿದ ಬಾಂಗ್ಲಾ! 133 ರನ್​ಗಳಿಗೆ 8 ವಿಕೆಟ್ ಪತನ

IND vs BAN: ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಎರಡನೇ ದಿನದ ಆಟದಲ್ಲಿಯೇ ಕೇವಲ 133 ರನ್‌ಗಳಿಗೆ ತನ್ನ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ.

IND vs BAN: ಸಿರಾಜ್- ಕುಲ್ದೀಪ್ ಮ್ಯಾಜಿಕ್; ಬಾಲ ಮುದುರಿದ ಬಾಂಗ್ಲಾ! 133 ರನ್​ಗಳಿಗೆ 8 ವಿಕೆಟ್ ಪತನ
ind vs ban
Follow us
TV9 Web
| Updated By: ಪೃಥ್ವಿಶಂಕರ

Updated on:Dec 15, 2022 | 4:49 PM

ಟೀಂ ಇಂಡಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿ ಏಕದಿನ ಸರಣಿ ಗೆದ್ದಿದ್ದ ಬಾಂಗ್ಲಾದೇಶ (India and Bangladesh) ತಂಡ ಟೆಸ್ಟ್ ಸರಣಿಯಲ್ಲಿ ಮುಗ್ಗರಿಸಿದೆ. ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಎರಡನೇ ದಿನದಾಟದ ಅಂತ್ಯಕ್ಕೆ ಕೇವಲ 133 ರನ್‌ಗಳಿಗೆ ತನ್ನ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಸಿರಾಜ್ (Mohammed Siraj) ಹಾಗೂ ಕುಲ್ದೀಪ್ ಯಾದವ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಗ್ಲಾ ಪರ ಉರುಳಿರುವ 8 ವಿಕೆಟ್​ಗಳಲ್ಲಿ ಕುಲ್ದೀಪ್ ಯಾದವ್ (Kuldeep Yadav) 10 ಓವರ್‌ಗಳಲ್ಲಿ 33 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಸಿರಾಜ್ ಕೂಡ 3 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಒಂದು ವಿಕೆಟ್ ಉಮೇಶ್ ಯಾದವ್ ಪಾಲಾಯಿತು.

ಭಾರತದ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್​ಗಳಿಗೆ ಹೆಚ್ಚು ಹೊತ್ತು ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ತಂಡದ ಪರ ಇದುವರೆಗೆ ಮುಶ್ಫಿಕರ್ ರಹೀಮ್ ಗರಿಷ್ಠ 28 ರನ್ ಗಳಿಸಿದರೆ, ಲಿಟ್ಟನ್ ದಾಸ್ 24 ರನ್ ಗಳಿಸಿದರು. ಝಾಕಿರ್ ಹಸನ್ 20 ರನ್​ಗಳ ಇನಿಂಗ್ಸ್ ಆಡಿದರು. ಇನ್ನುಳಿದಂತೆ 9ನೇ ವಿಕೆಟ್​ಗೆ ಜೊತೆಯಾಗಿರುವ ಮೆಹದಿ ಹಸನ್ ಹಾಗೂ ಇಬಾದತ್ ಹುಸೇನ್ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಹಸನ್ 16 ರನ್ ಗಳಿಸಿದರೆ, ಇಬಾದತ್ 13 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

2. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ ಪೆವಲಿಯನ್ ಪರೇಡ್

ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ನೀಡಿದ 404 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭ ಅತ್ಯಂತ ಕಳಪೆಯಾಗಿತ್ತು. ನಜ್ಮುಲ್ ಹಸನ್ ಶಾಂಟೊ ಮೊದಲ ಎಸೆತದಲ್ಲೇ ಔಟಾದರು. ಸಿರಾಜ್ ಅವರ ಉತ್ತಮ ಎಸೆತದಲ್ಲಿ ಶಾಂಟೊ, ಪಂತ್​ಗೆ ಕ್ಯಾಚ್ ನೀಡಿದರು. ಇದಾದ ಬಳಿಕ ಉಮೇಶ್ ಯಾದವ್ ಯಾಸಿರ್ ಅಲಿಯನ್ನು ಬೌಲ್ಡ್ ಮಾಡಿದರು. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದನ್ನು ಮುಂದುವರೆಸಿದ ಸಿರಾಜ್, ಲಿಟನ್ ದಾಸ್ ಮತ್ತು ಜಾಕಿರ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ಎದುರಾಳಿಯನ್ನು ಬ್ಯಾಕ್‌ಫೂಟ್‌ಗೆ ತಳ್ಳಿದರು.

ಸಿರಾಜ್ ಜೊತೆ ಲಿಟನ್ ಕಿರಿಕ್; ಮುಂದಿನ ಎಸೆತದಲ್ಲೇ ಔಟ್! ಕಿಂಗ್ ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ

3. ಕುಲ್ದೀಪ್​ಗೆ 4 ವಿಕೆಟ್

ಸಿರಾಜ್ ಜೊತೆಗೆ ವಿಕೆಟ್ ತೆಗೆಯುವ ಜವಬ್ದಾರಿವಹಿಸಿಕೊಂಡ ಕುಲ್ದೀಪ್ ಬಾಂಗ್ಲಾ ತಂಡದ ಮಧ್ಯಮ ಕ್ರಮಾಂಕದ ಬೆನ್ನೇಲುಬು ಮುರಿದರು. ಮೊದಲು ಕುಲ್ದೀಪ್, ನಾಯಕ ಶಕೀಬ್​​ರನ್ನು 3 ರನ್​ಗಳಿಗೆ ಬಲಿ ಪಡೆದರೆ, ನಂತರ ನುರುಲ್ ಹಸನ್ ವಿಕೆಟ್ ಕಬಳಿಸಿದರು. ಇಲ್ಲಿ ಈ ವಿಕೆಟ್​ನ ಶ್ರೇಯ ಗಿಲ್​ಗೆ ಸಲ್ಲಬೇಕು. ಕುಲ್ದೀಪ್​ ಬೌಲಿಂಗ್​ನಲ್ಲಿ ಶಾಟ್​ ಲೆಗ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಗಿಲ್, ಹಸನ್​ ಆಡಿದ ಬಾಲನ್ನು ಸೆಕೆಂಡ್​ಗೂ ಕಡಿಮೆ ಸಮಯದಲ್ಲಿ ಕ್ಯಾಚ್​ ಮಾಡಿದರು. 3ನೇ ವಿಕೆಟ್ ರೂಪದಲ್ಲಿ ಮುಶ್ಫಿಕರ್ ರಹೀಮ್ ವಿಕೆಟ್ ಕಬಳಿಸಿದ ಕುಲ್ದೀಪ್, ನಾಲ್ಕನೇ ವಿಕೆಟ್​ ಆಗಿ ಇಸ್ಲಾಂರನ್ನು ಬಲಿ ಹಾಕಿದರು.

4. 404 ರನ್​ಗಳಿಗೆ ಭಾರತ ಆಲೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದೆ. ಭಾರತದ ಪರ ಚೇತೇಶ್ವರ ಪೂಜಾರ 90 ಮತ್ತು ಶ್ರೇಯಸ್ ಅಯ್ಯರ್ 86 ರನ್ ಗಳಿಸಿದರೆ, ಅಶ್ವಿನ್ ಮತ್ತು ಕುಲದೀಪ್ ಯಾದವ್ ಎರಡನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ 58 ರನ್ ಗಳಿಸಿ ಅದ್ಭುತ ಅರ್ಧಶತಕ ಗಳಿಸಿದರೆ, ಕುಲದೀಪ್ ಯಾದವ್ 40 ರನ್​ಗಳಿಸಿ ಇನ್ನಿಂಗ್ಸ್ ಮುಗಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Thu, 15 December 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ