ಸಿರಾಜ್ ಜೊತೆ ಲಿಟನ್ ಕಿರಿಕ್; ಮುಂದಿನ ಎಸೆತದಲ್ಲೇ ಔಟ್! ಕಿಂಗ್ ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ

IND vs BAN: ಈ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರುವುದನ್ನು ತಪ್ಪಿಸಲು ಮಧ್ಯಪ್ರವೇಶಿದ ಅಂಪೈರ್​ಗಳು ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಆದರೆ ಈ ಘಟನೆ ನಡೆದ ಮುಂದಿನ ಎಸೆತದಲ್ಲಿ ಸಿರಾಜ್, ಲಿಟ್ಟನ್ ಅವರ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಸಿರಾಜ್ ಜೊತೆ ಲಿಟನ್ ಕಿರಿಕ್; ಮುಂದಿನ ಎಸೆತದಲ್ಲೇ ಔಟ್! ಕಿಂಗ್ ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ
IND vs BAN
Follow us
| Updated By: ಪೃಥ್ವಿಶಂಕರ

Updated on:Dec 15, 2022 | 3:28 PM

ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಟೀಂ ಇಂಡಿಯಾ ಬಾಂಗ್ಲಾ ಎದುರು 404 ರನ್​ಗಳ ಟಾರ್ಗೆಟ್ ಮುಂದಿಟ್ಟಿದೆ. ಆದರೆ ಈ ಗುರಿ ಬೆನ್ನಟ್ಟಿರುವ ಬಾಂಗ್ಲಾ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಗಿದೆ. ಕೇವಲ 56 ರನ್​ಗಳಿಗೆ ತಂಡದ ಪ್ರಮುಖ 4 ವಿಕೆಟ್​ಗಳು ಉರುಳಿವೆ. ಆರಂಭದಿಂದಲೇ ಬಾಂಗ್ಲಾ ಆಟಗಾರರ ಮೇಲೆ ಸವಾರಿ ಮಾಡಿರುವ ಸಿರಾಜ್ (Mohammad Siraj) ಹಾಗೂ ಉಮೇಶ್ ಯಾದವ್ ರನ್​ಗಳಿಗೆ ಕಡಿವಾಣ ಹಾಕಿದ್ದಾರೆ. ಆದರೆ ಈ ನಡುವೆ ಸಿರಾಜ್ ಹಾಗೂ ಬಾಂಗ್ಲಾ ತಂಡದ ಆಟಗಾರ ಲಿಟನ್ ದಾಸ್ (Litton Das) ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ ಈ ವಾಗ್ವಾದ ನಡೆದ ಮುಂದಿನ ಎಸೆತದಲ್ಲಿಯೇ ಸಿರಾಜ್, ಲಿಟನ್​ರನ್ನು ಪೆವಿಲಿಯನ್​ಗಟ್ಟಿ ಏಟಿಗೆ ಎದುರೇಟು ನೀಡಿದ್ದಾರೆ. ಇದಕ್ಕೆ ಕಿಂಗ್ ಕೊಹ್ಲಿ (Virat Kohli) ಕೂಡ ಸಾಥ್ ನೀಡಿದ್ದಾರೆ.

ವಾಸ್ತವವಾಗಿ ಬಾಂಗ್ಲಾ ಇನ್ನಿಂಗ್ಸ್​ 14ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಎಸೆಯಲು ಬಂದ ಸಿರಾಜ್ ಹಾಗೂ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಓವರ್​ಗೂ ಮುನ್ನ ಸಿರಾಜ್ ವಿರುದ್ಧ ಲಿಟ್ಟನ್ ದಾಸ್ ಕೆಲವು ಅತ್ಯುತ್ತಮ ಹೊಡೆತಗಳನ್ನು ಆಡಿದ್ದರು. ಈ ವೇಳೆ ಬೌಲಿಂಗ್​ಗೆ ಬಂದ ಸಿರಾಜ್​ ಲಿಟನ್​ಗೆ ಏನನ್ನೋ ಹೇಳಿದರು. ಇದನ್ನು ನೋಡಿದ ಲಿಟನ್​ ನನಗೆ ಸರಿಯಾಗಿ ಏನು ಕೇಳಿಸಿಲ್ಲ. ಮತ್ತೊಮ್ಮೆ ಹೇಳು ಎಂಬಂತೆ ಸನ್ನೆ ಮಾಡಿದರು. ಈ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರುವುದನ್ನು ತಪ್ಪಿಸಲು ಮಧ್ಯಪ್ರವೇಶಿದ ಅಂಪೈರ್​ಗಳು ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಆದರೆ ಈ ಘಟನೆ ನಡೆದ ಮುಂದಿನ ಎಸೆತದಲ್ಲಿ ಸಿರಾಜ್, ಲಿಟ್ಟನ್ ಅವರ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

2. ಸಿರಾಜ್ ಎಸೆತಕ್ಕೆ ಲಿಟನ್ ಬೌಲ್ಡ್

ಈ ಮಾತಿನ ಚಕಮಕಿ ನಡೆದ ಮುಂದಿನ ಎಸೆತದಲ್ಲಿ ಲಿಟ್ಟನ್ ದಾಸ್‌ಗೆ ಮೊಹಮ್ಮದ್ ಸಿರಾಜ್ ತಕ್ಕ ಉತ್ತರ ನೀಡಿದರು. ವಾಸ್ತವವಾಗಿ ಸಿರಾಜ್, ಲಿಟ್ಟನ್‌ಗೆ ಇನ್-ಕಟರ್ ಬೌಲ್ ಮಾಡಿದರು. ಚೆಂಡು ಸ್ವಲ್ಪ ಶಾರ್ಟ್​ ಇದ್ದಿದ್ದರಿಂದ ಲಿಟ್ಟನ್​ಗೆ ಈ ಚೆಂಡನ್ನು ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಲಿಟನ್ ಬ್ಯಾಟಿನ ತುದಿಗೆ ಬಡಿದ ಚೆಂಡು ಸೀದಾ ವಿಕೆಟ್​ಗೆ ಹೋಯಿತು. ಲಿಟನ್ ಬೋಲ್ಡ್ ಆದ ಕೂಡಲೇ ಸಿರಾಜ್ ಲಿಟನ್ ಕಡೆಗೆ ಬೆರಳು ತೋರಿಸಿ ಸುಮ್ಮನಿರುವಂತೆ ಸನ್ನೆ ಮಾಡಿದರು. ಇತ್ತ ಸ್ಲಿಪ್​ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ, ಈ ಮೊದಲು ಲಿಟನ್ ಮಾಡಿದ ಸನ್ನೆಯಂತೆಯೇ ತಾವು ಕೂಡ ಬಾಂಗ್ಲಾ ಅಭಿಮಾನಿಗಳತ್ತ ತಿರುಗೆ ಸನ್ನೆ ಮಾಡಿದರು.

IPL 2023 Auction: ಒಬ್ಬ ಭಾರತೀಯನಿಲ್ಲ; ಮಾರ್ಕ್ಯೂ ಆಲ್​ರೌಂಡರ್ಸ್​ ವಿಭಾಗದಲ್ಲಿ 6 ವಿದೇಶಿಗರು!

3. ಸಿರಾಜ್ ಅದ್ಭುತ ಬೌಲಿಂಗ್

ಚಟ್ಟೋಗ್ರಾಮ್‌ನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವುದಕ್ಕೆ ಹೆಸರುವಾಸಿ. ಆದರೆ ಮೊಹಮ್ಮದ್ ಸಿರಾಜ್ ಈ ವಿಕೆಟ್‌ನಲ್ಲಿ ಅದ್ಭುತವಾಗಿ ಬೌಲ್ ಮಾಡುತ್ತಿದ್ದಾರೆ. ಲಿಟ್ಟನ್ ದಾಸ್​ಗೂ ಮೊದಲು ನಜ್ಮುಲ್ ಹುಸೇನ್ ಶಾಂಟೊ ಮತ್ತು ಝಾಕಿರ್ ಹಸನ್ ಅವರನ್ನು ವಜಾಗೊಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಸುದ್ದಿ ಬರೆಯುವವರೆಗೂ ಅವರು 3 ವಿಕೆಟ್ ಪಡೆದಿದ್ದರೆ, ಅದೇ ವೇಳೆ ಉಮೇಶ್ ಯಾದವ್ ಹಾಗೂ ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

4. 404 ರನ್​ಗಳಿಗೆ ಭಾರತ ಆಲೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದೆ. ಭಾರತದ ಪರ ಚೇತೇಶ್ವರ ಪೂಜಾರ 90 ಮತ್ತು ಶ್ರೇಯಸ್ ಅಯ್ಯರ್ 86 ರನ್ ಗಳಿಸಿದರೆ, ಅಶ್ವಿನ್ ಮತ್ತು ಕುಲದೀಪ್ ಯಾದವ್ ಎರಡನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ 58 ರನ್ ಗಳಿಸಿ ಅದ್ಭುತ ಅರ್ಧಶತಕ ಗಳಿಸಿದರೆ, ಕುಲದೀಪ್ ಯಾದವ್ 40 ರನ್​ಗಳಿಸಿ ಇನ್ನಿಂಗ್ಸ್ ಮುಗಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Thu, 15 December 22