IND vs BAN: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ

IND vs BAN: ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಹಾಗೆಯೇ ಟಾಸ್ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಂದರೆ ಚೆನ್ನೈನಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ರೋಹಿತ್ ಕಣಕ್ಕಿಳಿಸುತ್ತಿದ್ದರೆ, ಇತ್ತ ಬಾಂಗ್ಲಾದೇಶ ತಂಡದಲ್ಲಿ 2 ಬದಲಾವಣೆಗಳಾಗಿವೆ.

IND vs BAN: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ
ಭಾರತ- ಬಾಂಗ್ಲಾದೇಶ
Follow us
|

Updated on:Sep 27, 2024 | 10:19 AM

ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿತು. ಇದೀಗ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದೆ. ಹೀಗಾಗಿ 1 ಗಂಟೆ ತಡವಾಗಿ ಪಂದ್ಯ ಆರಂಭವಾಗುತ್ತಿದ್ದು, ಟಾಸ್ ಕೂಡ ತಡವಾಗಿ ನಡೆದಿದೆ. ಅದರಂತೆ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಹಾಗೆಯೇ ಟಾಸ್ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಂದರೆ ಚೆನ್ನೈನಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ರೋಹಿತ್ ಕಣಕ್ಕಿಳಿಸುತ್ತಿದ್ದರೆ, ಇತ್ತ ಬಾಂಗ್ಲಾದೇಶ ತಂಡದಲ್ಲಿ 2 ಬದಲಾವಣೆಗಳಾಗಿವೆ.

ಉಭಯ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ ತಂಡ: ಶದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹುಸೇನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ವಿಕೆಟ್ ಕೀಪರ್), ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಾಲಿದ್ ಅಹ್ಮದ್.

ಕಾನ್ಪುರದಲ್ಲಿ ಟೀಂ ಇಂಡಿಯಾದ ಪ್ರದರ್ಶನ

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 23 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ 7 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 13 ಪಂದ್ಯಗಳು ಡ್ರಾಗೊಂಡಿವೆ. 1983ರಲ್ಲಿ ಈ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತು. ಆಗ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿತು.

ಸತತ 18ನೇ ಸರಣಿ ಗೆಲ್ಲುವ ಅವಕಾಶ

ಕಳೆದ ಕೆಲವು ವರ್ಷಗಳಿಂದ ತವರಿನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಸಾಕಷ್ಟು ಉತ್ತಮವಾಗಿದೆ. ಭಾರತ ತಂಡವನ್ನು ತನ್ನದೇ ಮನೆಯಲ್ಲಿ ಸೋಲಿಸುವುದು ಪ್ರತಿ ದೊಡ್ಡ ತಂಡಕ್ಕೆ ಕನಸಾಗಿ ಪರಿಣಮಿಸಿದೆ. ಟೀಂ ಇಂಡಿಯಾ ಇದುವರೆಗೆ ತವರಿನಲ್ಲಿ ಸತತ 17 ಸರಣಿಗಳನ್ನು ಗೆದ್ದಿದೆ. ಇದೀಗ ಕಾನ್ಪುರ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆಗೆ ತವರಿನಲ್ಲಿ ಸತತ 18 ನೇ ಸರಣಿಯನ್ನು ಗೆಲ್ಲುವ ಅವಕಾಶವಿದೆ.

Published On - 10:05 am, Fri, 27 September 24

ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್