IND vs BAN 3rd T20I: ಭಾರತ ಮೊದಲು ಬ್ಯಾಟಿಂಗ್; ತಂಡದಲ್ಲಿ 1 ಬದಲಾವಣೆ ಮಾಡಿದ ಸೂರ್ಯ

IND vs BAN 3rd T20I: ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡದಲ್ಲಿ 1 ಬದಲಾವಣೆಯಾಗಿದ್ದರೆ, ಬಾಂಗ್ಲಾ ತಂಡದಲ್ಲಿ 2 ಬದಲಾವಣೆಗಳಾಗಿವೆ.

IND vs BAN 3rd T20I: ಭಾರತ ಮೊದಲು ಬ್ಯಾಟಿಂಗ್; ತಂಡದಲ್ಲಿ 1 ಬದಲಾವಣೆ ಮಾಡಿದ ಸೂರ್ಯ
ಭಾರತ- ಬಾಂಗ್ಲಾದೇಶ
Follow us
|

Updated on:Oct 12, 2024 | 6:53 PM

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಗ್ವಾಲಿಯರ್ ಮತ್ತು ದೆಹಲಿಯಲ್ಲಿ ನಡೆದ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಹೈದರಾಬಾದ್‌ನಲ್ಲಿ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಇತ್ತ ಸರಣಿಯ ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಮೂಲಕ ಭಾರತ ಪ್ರವಾಸವನ್ನು ಕೊನೆಗೊಳಿಸುವ ಇರಾದೆಯಲ್ಲಿ ಬಾಂಗ್ಲಾದೇಶ ತಂಡವಿದೆ. ಅಲ್ಲದೆ ತಂಡದ ಪರ ಕೊನೆಯ ಟಿ20 ಪಂದ್ಯವನ್ನಾಡುತ್ತಿರುವ ಅನುಭವಿ ಮಹಮ್ಮದುಲ್ಲಾ ಅವರಿಗೆ ಗೆಲುವಿನ ವಿದಾಯ ಹೇಳಲು ಬಾಂಗ್ಲಾ ತಂಡ ಬಯಸಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡದಲ್ಲಿ 1 ಬದಲಾವಣೆಯಾಗಿದ್ದರೆ, ಬಾಂಗ್ಲಾ ತಂಡದಲ್ಲಿ 2 ಬದಲಾವಣೆಗಳಾಗಿವೆ.

ಹರ್ಷಿತ್​ಗೆ ಅನಾರೋಗ್ಯ

ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಯುವ ವೇಗಿ ಹರ್ಷಿತ್ ರಾಣಾಗೆ ಅವಕಾಶ ಸಿಗುವ ಬಗ್ಗೆ ಎಲ್ಲೆಡೆ ಸುದ್ದಿ ಹಬ್ಬಿತ್ತು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಪ್ಲೇಯಿಂಗ್ 11 ಪ್ರಕಟಿಸಿದ್ದ ಸೂರ್ಯ ತಂಡದಲ್ಲಿ ಕೇವಲ 1 ಬದಲಾವಣೆ ಮಾಡಿದ್ದರು. ಅದರಂತೆ ವೇಗಿ ಅರ್ಷದೀಪ್ ಸಿಂಗ್ ಬದಲು ಗೂಗ್ಲಿ ಸ್ಪಿನ್ನರ್ ರವಿ ಬಿಷ್ಣೋಯ್​ಗೆ ಅವಕಾಶ ನೀಡಿದ್ದರು.

ಮೇಲೆ ಹೇಳಿದಂತೆ ಹರ್ಷಿತ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳಿದ್ದವು. ಆದರೆ ಈ ಪಂದ್ಯಕ್ಕೂ ಮುನ್ನ ಅನಾರೋಗ್ಯಕ್ಕೆ ತುತ್ತಾದ ಹರ್ಷಿತ್ ರಾಣಾ ತಂಡದೊಂದಿಗೆ ಕ್ರೀಡಾಂಗಣಕ್ಕೂ ಬಂದಿಲ್ಲ ಎಂದು ವರದಿಯಾಗಿದೆ.  ಹರ್ಷಿತ್ ರಾಣಾ ಕಳೆದ ಕೆಲವು ಸರಣಿಗಳಿಗೆ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಅವರಿಗೆ ಇನ್ನೂ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ.

ಉಭಯ ತಂಡಗಳು

ಬಾಂಗ್ಲಾದೇಶ ತಂಡ: ಪರ್ವೇಜ್ ಹೊಸೈನ್ ಎಮನ್, ಲಿಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಂಜೀದ್ ಹಸನ್, ತೌಹೀದ್ ಹೃದಯೋಯ್, ಮಹ್ಮುದುಲ್ಲಾ, ಮಹೇದಿ ಹಸನ್, ತಸ್ಕಿನ್ ಅಹ್ಮದ್, ರಿಶಾದ್ ಹೊಸೈನ್, ಮುಸ್ತಫಿಜುರ್ ರಹಮಾನ್, ತೈಜುರ್ ರಹಮಾನ್. ಸಾಕಿಬ್

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Sat, 12 October 24

ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ