ಟೀಮ್ ಇಂಡಿಯಾ ಮೀಸಲು ಆಟಗಾರರಾಗಿ ನಾಲ್ವರು ಆಯ್ಕೆ

India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅಕ್ಟೋಬರ್ 24 ರಿಂದ ಶುರುವಾಗಲಿರುವ 2ನೇ ಪಂದ್ಯಕ್ಕೆ ಪುಣೆ ಎಂಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಟೀಮ್ ಇಂಡಿಯಾ ಮೀಸಲು ಆಟಗಾರರಾಗಿ ನಾಲ್ವರು ಆಯ್ಕೆ
Team India
Follow us
|

Updated on:Oct 12, 2024 | 2:29 PM

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸರಣಿಗಾಗಿ ನಾಲ್ವರು ಆಟಗಾರರನ್ನು ಮೀಸಲು ಪಟ್ಟಿಯಲ್ಲಿರಿಸಲಾಗಿದೆ. ಅಂದರೆ ಟೀಮ್ ಇಂಡಿಯಾದ ಯಾವುದಾದರು ಆಟಗಾರರು ಗಾಯಗೊಂಡರೆ, ಮೀಸಲು ಆಟಗಾರರ ಪಟ್ಟಿಯಿಂದ ಬದಲಿಯಾಗಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಮೂವರು ವೇಗಿಗಳು ಹಾಗೂ ಓರ್ವ ಆಲ್​ರೌಂಡರ್​ನನ್ನು ಮೀಸಲು ಆಟಗಾರರಾಗಿ ಹೆಸರಿಸಲಾಗಿದೆ.

ಅವರೆಂದರೆ… ಮಯಾಂಕ್ ಯಾದವ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಹಾಗೂ ನಿತೀಶ್ ಕುಮಾರ್ ರೆಡ್ಡಿ. ಇಲ್ಲಿ ಮಯಾಂಕ್, ಹರ್ಷಿತ್, ಪ್ರಸಿದ್ಧ್ ಕೃಷ್ಣ ವೇಗಿಗಳಾಗಿ ಆಯ್ಕೆಯಾದರೆ, ನಿತೀಶ್ ರೆಡ್ಡಿ ಹೆಚ್ಚುವರಿ ಆಲ್​ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಆಟಗಾರರು ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೇಳೆ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಮುಂದಿಟ್ಟುಕೊಂಡು ಈ ಬಾರಿ ಮೀಸಲು ಆಟಗಾರರ ಪಟ್ಟಿಯಲ್ಲಿ ವೇಗಿಗಳಿಗೆ ಮಣೆ ಹಾಕಲಾಗಿದೆ. ಪ್ರಸ್ತುತ ಭಾರತ ತಂಡದಲ್ಲಿ ವೇಗದ ಬೌಲರ್​ಗಳಾಗಿ ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಕಾಣಿಸಿಕೊಂಡಿದ್ದಾರೆ. ಇದೀಗ ಮೀಸಲು ವೇಗದ ಬೌಲರ್​ಗಳಾಗಿ ಹರ್ಷಿತ್ ರಾಣಾ, ಮಯಾಂಕ್ ಯಾದವ್, ಪ್ರಸಿದ್ಧ್ ಕೃಷ್ಣಗೆ ಚಾನ್ಸ್ ನೀಡಲಾಗಿದೆ. ಹಾಗೆಯೇ ಆಲ್​ರೌಂಡರ್ ಆಗಿ ರಿಸರ್ವ್ ಪಟ್ಟಿಯಲ್ಲಿ ಆಯ್ಕೆಯಾಗಿರುವ ನಿತೀಶ್ ರೆಡ್ಡಿ ಕೂಡ ವೇಗದ ಬೌಲಿಂಗ್ ಆಲ್​ರೌಂಡರ್ ಎಂಬುದು ವಿಶೇಷ. ಅಂದರೆ ಇಲ್ಲಿ ವೇಗಿಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಒತ್ತು ನೀಡಿರುವುದು ಸ್ಪಷ್ಟ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್ (ವಿಕೆಟ್ ಕೀಪರ್), ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಮೀಸಲು ಆಟಗಾರರು:- ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಮಯಾಂಕ್ ಯಾದವ್ ಹಾಗೂ ನಿತೀಶ್ ಕುಮಾರ್ ರೆಡ್ಡಿ.

ಇದನ್ನೂ ಓದಿ: ಸಿರಾಜ್ ಈಗ ಡಿಎಸ್​ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?

ಭಾರತ ಮತ್ತು ನ್ಯೂಝಿಲೆಂಡ್ ಸರಣಿ ಯಾವಾಗ ಶುರು?

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅಕ್ಟೋಬರ್ 24 ರಿಂದ ಶುರುವಾಗಲಿರುವ 2ನೇ ಪಂದ್ಯಕ್ಕೆ ಪುಣೆ ಎಂಸಿಎ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಹಾಗೆಯೇ ನವೆಂಬರ್ 1 ರಿಂದ ಆರಂಭವಾಗಲಿರುವ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

Published On - 2:28 pm, Sat, 12 October 24

ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್