AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತವನ್ನು ಸೋಲಿನಿಂದ ಪಾರು ಮಾಡುತ್ತಾ ಮಳೆ? ಇಂದು ಹೆಡಿಂಗ್ಲಿ ಹವಾಮಾನ ಹೇಗಿರಲಿದೆ?

Leeds Weather Report for Day 5: ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ಐದನೇ ದಿನ ಇಂಗ್ಲೆಂಡ್‌ ಉತ್ತಮ ಆರಂಭ ಪಡೆದಿದೆ. ಭಾರತ 371ಕ್ಕೆ ಆಲೌಟ್ ಆಗಿದೆ. ಇಂಗ್ಲೆಂಡ್‌ ವಿಕೆಟ್‌ ನಷ್ಟವಿಲ್ಲದೆ ಶತಕದ ಗಡಿ ದಾಟಿದೆ. ಭಾರತಕ್ಕೆ ಗೆಲ್ಲಲು ಇಂಗ್ಲೆಂಡ್‌ ವಿಕೆಟ್‌ಗಳು ಅಥವಾ ಮಳೆಯ ಅವಶ್ಯಕತೆಯಿದೆ. ಮಳೆಯ ಮುನ್ಸೂಚನೆ ಇದ್ದು, ಭಾರತೀಯ ಅಭಿಮಾನಿಗಳು ಮಳೆಯನ್ನು ಆಶಿಸುತ್ತಿದ್ದಾರೆ. ಡ್ರಾ ಆದರೆ ಎರಡೂ ತಂಡಗಳಿಗೆ ಒಂದೊಂದು ಅಂಕ ಸಿಗಲಿದೆ.

IND vs ENG: ಭಾರತವನ್ನು ಸೋಲಿನಿಂದ ಪಾರು ಮಾಡುತ್ತಾ ಮಳೆ? ಇಂದು ಹೆಡಿಂಗ್ಲಿ ಹವಾಮಾನ ಹೇಗಿರಲಿದೆ?
Ind Vs Eng
ಪೃಥ್ವಿಶಂಕರ
|

Updated on:Jun 24, 2025 | 5:43 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟ ಆರಂಭವಾಗಿದೆ. ಟೀಂ ಇಂಡಿಯಾವನ್ನು (Team India) 371 ರನ್​ಗಳಿಗೆ ಆಲೌಟ್ ಮಾಡಿ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಕ್ಕಿದೆ. ಇಂಗ್ಲೆಂಡ್‌ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದು, ವಿಕೆಟ್ ನಷ್ಟವಿಲ್ಲದೆ ಶತಕದ ಗಡಿ ದಾಟಿಸಿದ್ದಾರೆ. ಈ ಹಂತದಲ್ಲಿ ಬೆನ್ ಡಕೆಟ್ ಅರ್ಧಶತಕ ಸಿಡಿಸಿದ್ದರೆ, ಮತ್ತೊಬ್ಬ ಆರಂಭಿಕ ಕ್ರೌಲಿ ಕೂಡ ಅರ್ಧಶತಕದಂಚಿನಲ್ಲಿದ್ದಾರೆ. ಸಧ್ಯದ ಪರಿಸ್ಥಿತಿಯನ್ನು ನೋಡಿದರೆ, ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ ಎನ್ನ ಬಹುದು. ಭಾರತದ ಬೌಲರ್​ಗಳು ವಿಕೆಟ್ ತೆಗೆಯದಿದ್ದರೆ, ಇಂಗ್ಲೆಂಡ್​ಗೆ ಗೆಲುವು ಖಚಿತ. ಹೀಗಾಗಿ ಟೀಂ ಇಂಡಿಯಾಕ್ಕೆ ಪ್ರಕೃತಿಯೇ ವರವಾಗಬೇಕಿದೆ. ಅಂದರೆ ಟೀಂ ಇಂಡಿಯಾ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾದರೆ, ಒಂದು ಇಂಗ್ಲೆಂಡ್‌ ತಂಡವನ್ನು ಗುರಿ ಬೆನ್ನಟ್ಟದಂತೆ ತಡೆಯಬೇಕು. ಇನ್ನೊಂದು ಹೆಡಿಂಗ್ಲಿಯಲ್ಲಿ (Headingley) ಮಳೆ ಸುರಿಯಬೇಕು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಬೇಕು

ಪ್ರಸ್ತುತ ಇಂಗ್ಲೆಂಡ್‌ ತಂಡದ ಬ್ಯಾಟಿಂಗ್ ನೋಡಿದರೆ, ಅವರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಕಾಣುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾ ಈ ಪಂದ್ಯದಲ್ಲಿ ಸೋಲಿನಿಂದ ಪಾರಾಗಬೇಕಾದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಬೇಕು. ಇದರಿಂದ ಪಂದ್ಯವನ್ನು ರದ್ದುಗೊಳಿಸಬಹುದಾಗಿದ್ದು, ಡ್ರಾದಲ್ಲಿ ಅಂತ್ಯಗೊಳಿಸಬಹುದು. ಹೀಗಾದ್ದಲ್ಲಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇದು ಟೀಂ ಇಂಡಿಯಾಕ್ಕೆ ಕೊಂಚ ನಿರಾಳ ತರಲಿದೆ. ಏಕೆಂದರೆ ಈ ಟೆಸ್ಟ್ ಪಂದ್ಯದೊಂದಿಗೆ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಿಸಿವೆ.

ಗೆದ್ದ ತಂಡಕ್ಕೆ 2 ಅಂಕ

ಇದರ ನಿಯಮದ ಪ್ರಕಾರ, ಪಂದ್ಯ ಡ್ರಾಗೊಂಡರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಅದರೆ ಪಂದ್ಯದ ಫಲಿತಾಂಶ ಹೊರಬಿದ್ದರೆ, ಗೆದ್ದ ತಂಡಕ್ಕೆ 2 ಅಂಕ ಸಿಕ್ಕರೆ, ಸೋತ ತಂಡಕ್ಕೆ ಏನು ಸಿಗುವುದಿಲ್ಲ. ಇದು ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ ಹೊಡೆತ ನೀಡಲಿದೆ. ಹೀಗಾಗಿ ಟೀಂ ಇಂಡಿಯಾ ಬೌಲರ್​ಗಳು ಈ ದಿನದಂದು 10 ವಿಕೆಟ್ ಪಡೆಯುವಲ್ಲಿ ವಿಫಲರಾದರೆ, ಮಳೆ ಬಂದು ಪಂದ್ಯ ನಿಲ್ಲಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

IND vs ENG Test: ಲೀಡ್ಸ್ ಟೆಸ್ಟ್‌ನ ಕೊನೆಯ ದಿನದಂದು ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ?: ಇಲ್ಲಿದೆ ಕಾರಣ

ಹವಾಮಾನ ವರದಿ ಹೀಗಿದೆ

ಇನ್ನು ಹೆಡಿಂಗ್ಲಿಯಲ್ಲಿ ಇಂದಿನ ದಿನದ ಹವಾಮಾನ ವರದಿಯನ್ನು ನೋಡುವುದಾದರೆ.. ಅಕ್ಯೂವೆದರ್ ವರದಿಯ ಪ್ರಕಾರ, ಹೆಡಿಂಗ್ಲಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೊನೆಯ ದಿನ ಅಂದರೆ ಪಂದ್ಯದ ಐದನೇ ದಿನ ಮೋಡ ಕವಿದ ವಾತಾವರಣವಿರಲಿದ್ದು, ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಯ ನಂತರ (ಭಾರತೀಯ ಸಮಯ ಸಂಜೆ 6:30) ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವರದಿಯಂತೆ ಮಳೆ ಬಂದು ಪಂದ್ಯದ ನಿಲ್ಲಲಿ ಅಥವಾ ಟೀಂ ಇಂಡಿಯಾ ವೇಗಿಗಳು 10 ವಿಕೆಟ್ ಉರುಳಿಸಿ ಇಂಗ್ಲೆಂಡ್‌ ತಂಡವನ್ನು ಆಲೌಟ್ ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Tue, 24 June 25