IND vs NZ: ಭಾರತ-ನ್ಯೂಜಿಲೆಂಡ್ ಸರಣಿಯ ವೇಳಾಪಟ್ಟಿ ಪ್ರಕಟ
India vs New zealand Schedule: ವೆಲ್ಲಿಂಗ್‌ಟನ್, ಟೌರಂಗಾ ಮತ್ತು ನೇಪಿಯರ್‌ನಲ್ಲಿ ಮೂರು T20 ಪಂದ್ಯಗಳು ನಡೆದರೆ, ಆಕ್ಲೆಂಡ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಇನ್ನು ಈ ಸರಣಿಯ ಕೊನೆಯ ಪಂದ್ಯವು ನವೆಂಬರ್ 30 ರಂದು ನಡೆಯಲಿದೆ.

ಐರ್ಲೆಂಡ್ ವಿರುದ್ದದ (India vs Ireland T20) ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾ (Team India) ಇಂಗ್ಲೆಂಡ್ ವಿರುದ್ದ ಸೀಮಿತ ಓವರ್ಗಳ ಸರಣಿ ಆಡಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇನ್ನು ಈ ವರ್ಷ ಏಷ್ಯಾಕಪ್ ಕೂಡ ಆಡಲಿದ್ದು, ಇದಾದ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ20 ಸರಣಿಯನ್ನು ಆಡಲಿದೆ. ಆ ನಂತರ ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಮತ್ತೊಂದು ವಿದೇಶಿ ಪ್ರಸಾಸ ಕೈಗೊಳ್ಳಲಿರುವ ಮಾಹಿತಿ ಹೊರಬಿದ್ದಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ತೆರಳಲಿದ್ದು ಕಿವೀಸ್ ವಿರುದ್ದ ಸೀಮಿತ ಓವರ್ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ ತಂಡವು 3 ಟಿ20 ಪಂದ್ಯಗಳು ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ನವೆಂಬರ್ 13 ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಇದರ ಬೆನ್ನಲ್ಲೇ ಭಾರತ-ನ್ಯೂಜಿಲೆಂಡ್ ನಡುವಣ ಸರಣಿ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ನವೆಂಬರ್ 18 ರಂದು ಜರುಗಲಿದೆ.
ವೆಲ್ಲಿಂಗ್‌ಟನ್, ಟೌರಂಗಾ ಮತ್ತು ನೇಪಿಯರ್‌ನಲ್ಲಿ ಮೂರು T20 ಪಂದ್ಯಗಳು ನಡೆದರೆ, ಆಕ್ಲೆಂಡ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಇನ್ನು ಈ ಸರಣಿಯ ಕೊನೆಯ ಪಂದ್ಯವು ನವೆಂಬರ್ 30 ರಂದು ನಡೆಯಲಿದೆ. ನ್ಯೂಜಿಲೆಂಡ್ ವಿರುದ್ದದ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.
ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ:
ಟಿ20 ಸರಣಿ ವೇಳಾಪಟ್ಟಿ:
- ಮೊದಲ T20 – 18 ನವೆಂಬರ್
- ಎರಡನೇ T20 – 20 ನವೆಂಬರ್
- ಮೂರನೇ T20 – 22 ನವೆಂಬರ್
ಏಕದಿನ ಸರಣಿ ವೇಳಾಪಟ್ಟಿ:
- ಮೊದಲ ODI – 25 ನವೆಂಬರ್
- ಎರಡನೇ ODI – 27 ನವೆಂಬರ್
- ಮೂರನೇ ODI – 30 ನವೆಂಬರ್
ಭಾರತ ಮುಂದಿನ ಶುಕ್ರವಾರದಿಂದ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಕೊರೋನಾ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಈ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಾಗುತ್ತಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ. ಆ ನಂತರ ಭಾರತ ತಂಡವು ನಂತರ ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಕೆರಿಬಿಯನ್ ನಾಡಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ ಹೀಗಿದೆ:
- ಜುಲೈ 1 – 5: ಏಕೈಕ ಟೆಸ್ಟ್ ಪಂದ್ಯ (ಎಡ್ಜ್‌ಬಾಸ್ಟನ್)
- ಜುಲೈ 7: ಮೊದಲ ಟಿ20 ಪಂದ್ಯ (ಏಜಿಯಾಸ್ ಬೌಲ್)
- ಜುಲೈ 9: 2ನೇ ಟಿ20 ಪಂದ್ಯ (ಎಡ್ಜ್‌ಬಾಸ್ಟನ್)
- ಜುಲೈ 10: 3ನೇ ಟಿ20 ಪಂದ್ಯ (ಟ್ರೆಂಟ್ ಬ್ರಿಡ್ಜ್)
ಏಕದಿನ ಸರಣಿ ವೇಳಾಪಟ್ಟಿ:
- ಜುಲೈ 12- ಮೊದಲ ಏಕದಿನ ಪಂದ್ಯ (ಕಿಯಾ ಓವಲ್)
- ಜುಲೈ 14- 2ನೇ ಏಕದಿನ ಪಂದ್ಯ (ಲಾರ್ಡ್ಸ್)
- ಜುಲೈ 17- 3ನೇ ಏಕದಿನ ಪಂದ್ಯ (ಮ್ಯಾಂಚೆಸ್ಟರ್)
Published On - 12:30 pm, Tue, 28 June 22




