AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ‘ಹ್ಯಾರಿಸ್ ರೌಫ್ ಭಾರತೀಯ ಗೂಢಚಾರ’; ತನಿಖೆಗೆ ಒತ್ತಾಯಿಸಿದ ಬಾಬರ್ ಆಝಂ

Asia Cup Final Haris Rauf RAW Agent: ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಹ್ಯಾಟ್ರಿಕ್ ಜಯ ಸಾಧಿಸಿತು. ಇದೀಗ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದಾರೆ. ಈ ಮಧ್ಯೆ, ಬಾಬರ್ ಆಝಂ ಹೆಸರಿನಲ್ಲಿ ರೌಫ್ ಭಾರತೀಯ ಗೂಢಚಾರ ಎಂದು ಆರೋಪಿಸುವ ಪೋಸ್ಟ್ ವೈರಲ್ ಆಗಿದೆ. ಆದರೆ, ಫ್ಯಾಕ್ಟ್ ಚೆಕ್‌ನಲ್ಲಿ ಇದು ನಕಲಿ ಮತ್ತು ಭಾರತೀಯ ಬಳಕೆದಾರರಿಂದ ಮಾಡಿದ ಎಡಿಟೆಡ್ ಪೋಸ್ಟ್ ಎಂದು ಬಹಿರಂಗವಾಗಿದೆ.

Asia Cup 2025: ‘ಹ್ಯಾರಿಸ್ ರೌಫ್ ಭಾರತೀಯ ಗೂಢಚಾರ’; ತನಿಖೆಗೆ ಒತ್ತಾಯಿಸಿದ ಬಾಬರ್ ಆಝಂ
Haris Rauf
ಪೃಥ್ವಿಶಂಕರ
|

Updated on: Sep 29, 2025 | 9:09 PM

Share

ಕೇವಲ 14 ದಿನಗಳಲ್ಲಿ ಪಾಕಿಸ್ತಾನ ತಂಡ ಭಾರತದ (India vs Pakistan) ಎದುರು ಮೂರು ಬಾರಿ ಮಂಡಿಯೂರಿದೆ. ವಿವಾದ ಮತ್ತು ಉದ್ವಿಗ್ನತೆಯ ನಡುವೆ ನಡೆದ ಏಷ್ಯಾಕಪ್ 2025 (Asia Cup Final) ರಲ್ಲಿ ಟೀಂ ಇಂಡಿಯಾ ತನ್ನ ಪಾರುಪತ್ಯವನ್ನು ಮುಂದುವರೆಸಿ ಫೈನಲ್‌ನಲ್ಲಿಯೂ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಹ್ಯಾಟ್ರಿಕ್ ಜಯವಾಗಿತ್ತು. ಇದೀಗ ಫೈನಲ್‌ನಲ್ಲಿ ಪಾಕಿಸ್ತಾನದ ಸೋಲಿಗೆ ಒಂದು ರೀತಿಯಲ್ಲಿ ಕಾರಣರಾಗಿದ್ದ ವೇಗಿ ಹ್ಯಾರಿಸ್ ರೌಫ್ (Haris Rauf) ಅಭಿಮಾನಿಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅವರನ್ನು ತಂಡದಿಂದ ಹೊರಹಾಕಬೇಕು ಎಂಬ ಕೂಗು ಜೋರಾಗಿದೆ. ಇದೆಲ್ಲದರ ನಡುವೆ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam ), ರೌಫ್ ಅವರನ್ನು ಭಾರತೀಯ ಗೂಢಚಾರ ಎಂದು ಕರೆದಿದ್ದಾರೆ.ಇದೀಗ ಅದರ ಸೋಶಿಯಲ್ ಮೀಡಿಯಾ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ.

ಸರಾಗವಾಗಿ ರನ್ ನೀಡಿದ ರೌಫ್

ಸೆಪ್ಟೆಂಬರ್ 28 ರ ಭಾನುವಾರ ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇದರೊಂದಿಗೆ ಟೀಂ ಇಂಡಿಯಾ 9 ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಸ್ತವವಾಗಿ ಫೈನಲ್‌ನಲ್ಲಿ ಪಾಕಿಸ್ತಾನದ ಇತರ ಬೌಲರ್‌ಗಳು ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಟೀಂ ಇಂಡಿಯಾಗೆ ಸಮಸ್ಯೆಗಳನ್ನು ಸೃಷ್ಟಿಸಿದರೆ, ವೇಗಿ ರೌಫ್ ಮಾತ್ರ ಸರಾಗವಾಗಿ ರನ್ ಬಿಟ್ಟುಕೊಟ್ಟರು. ರೌಫ್ ಕೇವಲ 3.4 ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟಿದ್ದು ಮಾತ್ರವಲ್ಲದೆ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಅಲ್ಲದೆ ಕೊನೆಯ ಓವರ್‌ನಲ್ಲಿ 10 ರನ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೆ ತಂಡವನ್ನು ಸೋಲಿಗೆ ದವಡೆಗೆ ತಳ್ಳಿದರು.

ರೌಫ್‌ ರಾ ಏಜೆಂಟ್ ಎಂದ ಬಾಬರ್?

ಫೈನಲ್ ಪಂದ್ಯದ ಸೋಲಿನ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ರೌಫ್ ಭಾರತೀಯ ಗುಪ್ತಚರ ಸಂಸ್ಥೆಯ ಗೂಢಚಾರ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸುವಂತೆ ನಾನು ಪಾಕಿಸ್ತಾನ ಸರ್ಕಾರವನ್ನು ವಿನಂತಿಸುತ್ತೇನೆ. ಅವರು ಯಾವಾಗಲೂ ಭಾರತದ ವಿರುದ್ಧ ಕೊನೆಯ ಎರಡು ಓವರ್‌ಗಳನ್ನು ಬೌಲ್ ಮಾಡುತ್ತಾರೆ ಮತ್ತು ಭಾರತ ಗೆಲ್ಲಲು ಸಹಾಯ ಮಾಡುತ್ತಾರೆ. ನಾನು ನಾಯಕನಾಗಿದ್ದಾಗ MCG (T20 ವಿಶ್ವಕಪ್ 2022) ನಲ್ಲಿ ನಡೆದ ಪಂದ್ಯದಲ್ಲಿ ರೌಫ್ ಅದೇ ರೀತಿ ಮಾಡಿದರು. ಇದೀಗ ದುಬೈನಲ್ಲಿ ರೌಫ್ ಅದನ್ನು ಪುನರಾವರ್ತಿಸಿದ್ದಾರೆ. ಶಿವಂ ದುಬೆ ಮತ್ತು ತಿಲಕ್ ವರ್ಮಾ ಹೊಸ ಆಟಗಾರರಾಗಿದ್ದರೂ ಅವರ ವಿರುದ್ಧವೂ ರೌಫ್ ಸುಲಭವಾಗಿ ರನ್ ನೀಡಿದ್ದಾರೆ. ಹೀಗಾಗಿ ಅವರು ಖಂಡಿತವಾಗಿಯೂ RAW ಏಜೆಂಟ್’ ಎಂದು ಬರೆದಿದ್ದಾರೆ.

ವೈರಲ್ ಪೋಸ್ಟ್ ಹಿಂದಿನ ಸತ್ಯವೇನು?

ಈಗ ಪ್ರಶ್ನೆ ಏನೆಂದರೆ, ಬಾಬರ್ ಆಝಂ ನಿಜವಾಗಿಯೂ ಇದನ್ನು ಪೋಸ್ಟ್ ಮಾಡಿದ್ದಾರಾ? ಎಂಬುದು. ವೈರಲ್ ಪೋಸ್ಟ್‌ನ ಫ್ಯಾಕ್ಟ್ ಚೆಕ್ ಮಾಡಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಬಾಬರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯ ಯಾವುದನ್ನೂ ಪೋಸ್ಟ್ ಮಾಡಿಲ್ಲ. ಪೋಸ್ಟ್ ಮಾಡಿದ ನಂತರ ಅವರು ಅದನ್ನು ಅಳಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಾಸ್ತವದಲ್ಲಿ, ಇದು ಎಡಿಟೆಡ್ ಫೋಟೋವಾಗಿದ್ದು, ಇದನ್ನು ಭಾರತೀಯ ಬಳಕೆದಾರರು ಹ್ಯಾರಿಸ್ ರೌಫ್ ಮತ್ತು ಪಾಕಿಸ್ತಾನಿ ತಂಡವನ್ನು ಅಪಹಾಸ್ಯ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​