IND vs PAK: W,W,W,W.. ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡ ಪಾಕಿಸ್ತಾನ

India vs Pakistan T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕದಿಂದ ಭಾರತ 175 ರನ್ ಗಳಿಸಿ, ಪಾಕಿಸ್ತಾನಕ್ಕೆ 176 ರನ್‌ಗಳ ಗುರಿ ನೀಡಿದೆ. ಗುರಿ ಬೆನ್ನಟ್ಟಿದ ಪಾಕಿಸ್ತಾನ ಪವರ್‌ಪ್ಲೇನಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು 38 ರನ್ ಮಾತ್ರ ಗಳಿಸಿ ತೀವ್ರ ಸಂಕಷ್ಟದಲ್ಲಿದೆ. ಭಾರತದ ಬೌಲರ್‌ಗಳ ಮಾರಕ ದಾಳಿಗೆ ಪಾಕ್ ತತ್ತರಿಸಿದೆ.

IND vs PAK: W,W,W,W.. ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡ ಪಾಕಿಸ್ತಾನ
Ind Vs Pak

Updated on: Feb 15, 2026 | 9:55 PM

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿ, ಪಾಕಿಸ್ತಾನಕ್ಕೆ 176 ರನ್​ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪವರ್‌ಪ್ಲೇನಲ್ಲಿಯೇ ತನ್ನ ಪವರ್ ಕಳೆದುಕೊಂಡಿದೆ. ಭಾರತದ ಬೌಲರ್​ಗಳ ದಾಳಿಗೆ ನಲುಗಿರುವ ಪಾಕಿಸ್ತಾನ ಮೊದಲ 6 ಓವರ್​ಗಳಲ್ಲಿ ತನ್ನ 4 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 38 ರನ್ ಕಲೆಹಾಕಿದೆ.

ಸೊನ್ನೆಗೆ ಮೊದಲ ವಿಕೆಟ್

ಭಾರತ ನೀಡಿದ 176 ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಪರ ಸ್ಯಾಮ್ ಅಯೂಬ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಭಾರತದ ಪರ ಹಾರ್ದಿಕ್ ಪಾಂಡ್ಯ ಮೊದಲ ಓವರ್​ ಬೌಲಿಂಗ್ ಮಾಡಿದರು. ಈ ಓವರ್​ನಲ್ಲಿ ಒಂದೇ ಒಂದು ರನ್ ನೀಡಿದ ಪಾಂಡ್ಯ, ಓವರ್​ನ ಮೂರನೇ ಎಸೆತದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅವರ ವಿಕೆಟ್ ಉರುಳಿಸಿದರು. ಫರ್ಹಾನ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಒಂದೇ ಓವರ್​ನಲ್ಲಿ 2 ವಿಕೆಟ್

ಆ ಬಳಿಕ ಬುಮ್ರಾ ಎರಡನೇ ಓವರ್ ಬೌಲ್ ಮಾಡಿದರು. ಈ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಸ್ಯಾಮ್ ಅಯೂಬ್ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದರು. ನಂತರದ ಎಸೆದಲ್ಲಿ ಪ್ರತೀಕಾರ ತೀರಿಸಿಕೊಂಡ ಬುಮ್ರಾ, ಅಯೂಬ್​​ರನ್ನು ಎಲ್​ಬಿ ಬಲೆಗೆ ಕೆಡುವಿದರು. ಅದೇ ಓವರ್​ನಲ್ಲಿ ಬುಮ್ರಾ, ಪಾಕ್ ನಾಯಕ ಸಲ್ಮಾನ್ ಅಘಾರನ್ನು ಪೆವಿಲಿಯನ್​ಗಟ್ಟಿದರು. ಹೀಗಾಗಿ ಪಾಕ್ ಕೇವಲ 13 ರನ್​ಗಳಿಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು.

IND vs PAK: ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಕೆಲಸಕ್ಕೆ ಬಾರದ ಬಾಬರ್

ಪಾಕ್ ತಂಡ ಬಹುಬೇಗನೇ 3 ವಿಕೆಟ್​ಗಳನ್ನು ಕಳೆದುಕೊಂಡಿದರಿಂದ ತಂಡದ ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ ಮೇಲೆ ಒಂದೊಳ್ಳೆ ಇನ್ನಿಂಗ್ಸ್​ನ ನಿರೀಕ್ಷೆ ಇತ್ತು. ಆದರೆ ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಬಾಬರ್, ಡಾಟ್ ಬಾಲ್ ಒತ್ತಡಕ್ಕೆ ಒಳಗಾಗಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಬಾಬರ್ 7 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರೆ, ಪಾಕ್ ತಂಡ ಮೊದಲ 6 ಓವರ್​ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 38 ರನ್ ಗಳಿಸಲಷ್ಟೇ ಶಕ್ತವಾಯಿತು. ಇಲ್ಲಿಂದ ಪಾಕ್ ತಂಡದ ಗೆಲುವು ಅಸಾಧ್ಯವೆಂದು ತೋರುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Sun, 15 February 26