IND vs SA 1st T20 Highlights: ಆಫ್ರಿಕಾ ವಿರುದ್ಧ 61 ರನ್‌ಗಳಿಂದ ಗೆದ್ದ ಭಾರತ
India vs South Africa 1st T20I Highlights in Kannada: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಠೀ20 ಸರಣಿಯ ಮೊದಲ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 61 ರನ್‌ಗಳಿಂದ ಸೋಲಿಸಿದೆ. 203 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 141 ರನ್ ಗಳಿಗೆ ಆಲೌಟ್ ಆಯಿತು.
ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ತಂಡವನ್ನು 61 ರನ್‌ಗಳಿಂದ ಮಣಿಸುವಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದರೊಂದಿಗೆ 4 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 202 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ಭಾರತದ ಸಾಂಘೀಕ ದಾಳಿಗೆ ನಲುಗಿ 17.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಭಾರತಕ್ಕೆ ಸ್ಫೋಟಕ ಆರಂಭ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಬಂದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ನಡುವೆ ಮೊದಲ ವಿಕೆಟ್‌ಗೆ 24 ರನ್‌ಗಳ ಜೊತೆಯಾಟವಿತ್ತು. ಆದರೆ ಅಭಿಷೇಕ್ ಅವರನ್ನು ಔಟ್ ಮಾಡುವ ಮೂಲಕ ಕೋಟ್ಜಿ ಈ ಪಾಲುದಾರಿಕೆಯನ್ನು ಮುರಿದರು. ಇದಾದ ನಂತರ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್, ಎರಡನೇ ವಿಕೆಟ್‌ಗೆ ಸಂಜು ಜೊತೆ 66 ರನ್‌ಗಳ ಜೊತೆಯಾಟ ನಡೆಸಿದರು.ಅಂತಿಮವಾಗಿ ನಾಯಕ ಸೂರ್ಯ 17 ಎಸೆತಗಳಲ್ಲಿ 21 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ತಿಲಕ್ ವರ್ಮಾ, ಸಂಜುಗೆ ಉತ್ತಮ ಸಾಥ್ ನೀಡಿದ ಕಾರಣ ಇವರಿಬ್ಬರ ನಡುವೆ 77 ರನ್‌ಗಳ ಜೊತೆಯಾಟವಿತ್ತು.
ಸಂಜು ಸಿಡಿಲಬ್ಬರದ ಶತಕ
ತಿಲಕ್ 33 ರನ್ ಗಳಿಸಿ ಔಟಾದರೆ, ಇತ್ತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಯಾಮ್ಸನ್ 47 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಸುಂಜು ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಎರಡನೇ ಶತಕವಾಗಿತ್ತು. ಅಲ್ಲದೆ ಸಂಜು ಸತತ ಎರಡನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಕೂಡ ನಿರ್ಮಿಸಿದರು. ಈ ಪಂದ್ಯದಲ್ಲಿ 214ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸಂಜು 50 ಎಸೆತಗಳಲ್ಲಿ 107 ರನ್ ಗಳಿಸಿ ಔಟಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಎರಡು, ರಿಂಕು ಸಿಂಗ್ 11, ಅಕ್ಷರ್ ಪಟೇಲ್ 7, ರವಿ ಬಿಷ್ಣೋಯ್ ಒಂದು ಹಾಗೂ ಅರ್ಷದೀಪ್ ಸಿಂಗ್ 5 ರನ್‌ಗಳ ಕಾಣಿಕೆ ನೀಡಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ ಮೂರು ವಿಕೆಟ್ ಪಡೆದರೆ ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಪೀಟರ್ ಮತ್ತು ಕ್ರುಗರ್ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾಗೆ ಆರಂಭಿಕ ಆಘಾತ
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್‌ನಲ್ಲಿಯೇ ಸತತ ಎರಡು ಬೌಂಡರಿಗಳನ್ನು ಹೊಡೆದ ನಂತರ ನಾಯಕ ಏಡೆನ್ ಮಾರ್ಕ್ರಾಮ್ ಔಟಾದರು. ಆ ಬಳಿಕವೂ ವಿಕೆಟ್ ಪತನ ಮುಂದುವರೆದ ಕಾರಣ ತಂಡದ ಅಗ್ರ-3 ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇನಲ್ಲಿ ಕೇವಲ 44 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ, ವಿಶ್ವಕಪ್ ಫೈನಲ್‌ನ ನಂತರ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು.
ಕ್ಲಾಸೆನ್ ಮತ್ತು ಮಿಲ್ಲರ್ ಕೂಡ ಬೌಂಡರಿಗಳನ್ನು ಬಾರಿಸುವ ಭಾರತದ ಗೆಲುವಿನ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿದರು. ಆದರೆ 12 ನೇ ಓವರ್‌ನಲ್ಲಿ ವರುಣ್, ಮೊದಲು ಕ್ಲಾಸೆನ್ (25) ಮತ್ತು ನಂತರ ಮಿಲ್ಲರ್ (18) ಅವರನ್ನು ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಸೋಲನ್ನು ಖಚಿತಪಡಿಸಿದರು. ಇದಾದ ಬಳಿಕ ರವಿ ಬಿಷ್ಣೋಯ್ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದು ಆಫ್ರಿಕಾ ತಂಡವನ್ನು ಅಲ್ಪ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
IND vs SA 1st T20 Live Score: ಭಾರತಕ್ಕೆ ಸುಲಭ ಜಯ
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು 61 ರನ್‌ಗಳಿಂದ ಗೆದ್ದುಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 202 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ಭಾರತದ ಸಾಂಘೀಕ ದಾಳಿಗೆ ನಲುಗಿ 17.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
-
IND vs SA 1st T20 Live Score: ರವಿಗೆ ಮೂರನೇ ವಿಕೆಟ್
ದಕ್ಷಿಣ ಆಫ್ರಿಕಾ 114 ರನ್‌ಗಳಿಗೆ 8ನೇ ವಿಕೆಟ್ ಕಳೆದುಕೊಂಡಿದೆ. ರವಿ ಬಿಷ್ಣೋಯ್ ಅವರು ಮಾರ್ಕೊ ಯಾನ್ಸನ್ ಅವರನ್ನು ವಜಾಗೊಳಿಸಿದ್ದಾರೆ. ಇದು ರವಿ ಉರುಳಿಸಿದ 3ನೇ ವಿಕೆಟ್ ಆಗಿದೆ.
-
IND vs SA 1st T20 Live Score: 7ನೇ ವಿಕೆಟ್
ಒಂದೇ ಓವರ್‌ನಲ್ಲಿ ರವಿ ಬಿಷ್ಣೋಯ್ ಎರಡನೇ ವಿಕೆಟ್ ಪಡೆದರು. ಈ ಬಾರಿ ಅವರು ಆಂಡಿಲೆ ಸಿಮೆಲೆಂಕೊ ಅವರನ್ನು ವಜಾ ಮಾಡಿದ್ದಾರೆ.
IND vs SA 1st T20 Live Score: ರವಿಗೆ ವಿಕೆಟ್
ದಕ್ಷಿಣ ಆಫ್ರಿಕಾ ಕೂಡ 87 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು. ಈ ಬಾರಿ ರವಿ ಬಿಷ್ಣೋಯ್ಗೆ ವಿಕೆಟ್ ಸಿಕ್ಕಿದ್ದು, ಅವರು ಪ್ಯಾಟ್ರಿಕ್ ಕ್ರುಗರ್ ಅವರನ್ನು ವಜಾಗೊಳಿಸಿದ್ದಾರೆ.
IND vs SA 1st T20 Live Score: ಹೆನ್ರಿಕ್ ಕ್ಲಾಸೆನ್ ಔಟ್
ವರುಣ್ ಚಕ್ರವರ್ತಿ ಟೀಂ ಇಂಡಿಯಾಗೆ ದೊಡ್ಡ ಯಶಸ್ಸನ್ನು ನೀಡಿದ್ದಾರೆ. ಹೆನ್ರಿಕ್ ಕ್ಲಾಸೆನ್ 22 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ಇದೀಗ ದಕ್ಷಿಣ ಆಫ್ರಿಕಾ 86 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.
IND vs SA 1st T20 Live Score: ಒಂಬತ್ತು ಓವರ್ ಪೂರ್ಣ
ಒಂಬತ್ತು ಓವರ್‌ಗಳ ಆಟ ಮುಗಿದಿದೆ. ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 32* ರನ್‌ಗಳ ಜೊತೆಯಾಟವಿದ್ದು ಸ್ಕೋರ್ 76/3 ಆಗಿದೆ.
IND vs SA 1st T20 Live Score: ವರುಣ್ಗೆ ಮೊದಲ ವಿಕೆಟ್
ದಕ್ಷಿಣ ಆಫ್ರಿಕಾ 44 ರನ್ ಗಳಿಸುವಷ್ಟರಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. 21 ರನ್ ಗಳಿಸಿ ಔಟಾದ ರಿಯಾನ್ ರಿಕಲ್ಟನ್ಗೆ ವರುಣ್ ಚಕ್ರವರ್ತಿ ಪೆವಿಲಿಯನ್ ಹಾದಿ ತೋರಿಸಿದರು.
IND vs SA 1st T20 Live Score: ಸ್ಟಬ್ಸ್ ಔಟ್
ದಕ್ಷಿಣ ಆಫ್ರಿಕಾ ಟ್ರಿಸ್ಟಾನ್ ಸ್ಟಬ್ಸ್ ವಿಕೆಟ್ ಕಳೆದುಕೊಂಡಿದೆ. ಸ್ಟಬ್ಸ್ 11 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಹೆನ್ರಿಕ್ ಕ್ಲಾಸೆನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲ ನೀಡಲು ರಿಯಾನ್ ರಿಕೆಲ್ಟನ್ ಕ್ರೀಸ್‌ನಲ್ಲಿದ್ದಾರೆ.
IND vs SA 1st T20 Live Score: ಮೂರು ಓವರ್ ಪೂರ್ಣ
ರಿಯಾನ್ ರಿಕೆಲ್ಟನ್ 10 ರನ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಮೂರು ಓವರ್‌ಗಳ ನಂತರ ಸ್ಕೋರ್ 28/1.
IND vs SA 1st T20 Live Score: ನಾಯಕ ಏಡೆನ್ ಮಾರ್ಕ್ರಾಮ್ ಔಟ್
ದಕ್ಷಿಣ ಆಫ್ರಿಕಾ 8 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಏಡೆನ್ ಮಾರ್ಕ್ರಾಮ್ 8 ರನ್ ಗಳಿಸಿ ಅರ್ಷದೀಪ್ ಸಿಂಗ್ಗೆ ಬಲಿಯಾದರು.
IND vs SA 1st T20 Live Score: 203 ರನ್ ಟಾರ್ಗೆಟ್
ಟೀಂ ಇಂಡಿಯಾ ಇನ್ನಿಂಗ್ಸ್ ಪೂರ್ಣಗೊಂಡಿದೆ. ಸಂಜು ಸ್ಯಾಮ್ಸನ್ ಅವರ ಅಮೋಘ ಆಟದಿಂದಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ. ತಂಡದ ಪರ ಸಂಜು ಕೇವಲ 50 ಎಸೆತಗಳಲ್ಲಿ 107 ರನ್ ಗಳಿಸಿದರೆ, ತಿಲಕ್ ವರ್ಮಾ 33 ರನ್‌ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ ಗರಿಷ್ಠ 3 ವಿಕೆಟ್ ಪಡೆದರು.
IND vs SA 1st T20 Live Score: 7ನೇ ಹೊಡೆತ
199 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ 7ನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್ 7 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.
IND vs SA 1st T20 Live Score: ಆರನೇ ವಿಕೆಟ್
ಟೀಂ ಇಂಡಿಯಾ ಆರನೇ ವಿಕೆಟ್ ಕೂಡ ಕಳೆದುಕೊಂಡಿದೆ. ರಿಂಕು ಸಿಂಗ್ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.
IND vs SA 1st T20 Live Score: ಪಾಂಡ್ಯ ಔಟ್
ಭಾರತ ತಂಡ 181 ರನ್ ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಇದೀಗ ಅಕ್ಷರ್ ಪಟೇಲ್ ಕ್ರೀಸ್‌ಗೆ ಬಂದಿದ್ದಾರೆ.
IND vs SA 1st T20 Live Score: ಸಂಜು ಔಟ್
ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 107 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು.
IND vs SA 1st T20 Live Score: ಮೂರನೇ ವಿಕೆಟ್
ಟೀಂ ಇಂಡಿಯಾ 167 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿದೆ. ತಿಲಕ್ ವರ್ಮಾ 18 ಎಸೆತಗಳಲ್ಲಿ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
IND vs SA 1st T20 Live Score: ಸಂಜು ಶತಕ
ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅವರು 7 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದು ಟಿ20ಯಲ್ಲಿ ಅವರ ಸತತ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧವೂ ಶತಕ ಬಾರಿಸಿದ್ದರು.
IND vs SA 1st T20 Live Score: 12 ಓವರ್ ಪೂರ್ಣ
12 ಓವರ್‌ಗಳ ಆಟದಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 77 ರನ್ ಹಾಗೂ ತಿಲಕ್ ವರ್ಮಾ 14 ರನ್ ಗಳಿಸಿ ಆಡುತ್ತಿದ್ದಾರೆ.
IND vs SA 1st T20 Live Score: ಸೂರ್ಯ ಔಟ್
ಟೀಂ ಇಂಡಿಯಾ 90 ರನ್‌ಗಳ ಅಂತರದಲ್ಲಿ 2ನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ ಕ್ರೀಸ್‌ಗೆ ಬಂದಿದ್ದಾರೆ.
IND vs SA 1st T20 Live Score: ಸಂಜು 27 ಎಸೆತಗಳಲ್ಲಿ ಅರ್ಧಶತಕ
ಸಂಜು ಸ್ಯಾಮ್ಸನ್ ಕೇವಲ 27 ಎಸೆತಗಳಲ್ಲಿ ತಮ್ಮ ವೃತ್ತಿ ಜೀವನದ ಮೂರನೇ ಅರ್ಧಶತಕ ದಾಖಲಿಸಿದರು. ಸೂರ್ಯ ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಎಂಟು ಓವರ್‌ಗಳ ನಂತರ ಭಾರತದ ಸ್ಕೋರ್ 75/1.
IND vs SA 1st T20 Live Score: 50 ರನ್ ಪೂರ್ಣ
ಪವರ್ ಪ್ಲೇ ನಂತರ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 35 ರನ್ ಹಾಗೂ ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs SA 1st T20 Live Score: 5 ಓವರ್‌ಗಳ ಆಟ ಪೂರ್ಣ
ಟೀಂ ಇಂಡಿಯಾ ಇನ್ನಿಂಗ್ಸ್‌ನಲ್ಲಿ 5 ಓವರ್‌ಗಳು ಕಳೆದಿವೆ. ಭಾರತದ ಬ್ಯಾಟ್ಸ್‌ಮನ್‌ಗಳು ಒಂದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ 28 ರನ್ ಹಾಗೂ ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿ ಆಡುತ್ತಿದ್ದಾರೆ.
IND vs SA 1st T20 Live Score: ಅಭಿಷೇಕ್ ಶರ್ಮಾ ಔಟ್
ಟೀಂ ಇಂಡಿಯಾ 24 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 8 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.
IND vs SA 1st T20 Live Score: 2 ಓವರ್ ಪೂರ್ಣ
ಮೊದಲ ಎರಡು ಓವರ್‌ಗಳಲ್ಲಿ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ತಲಾ 6 ರನ್‌ಗಳೊಂದಿಗೆ ಆಡುತ್ತಿದ್ದಾರೆ.
IND vs SA 1st T20 Live Score: ಭಾರತದ ಬ್ಯಾಟಿಂಗ್ ಆರಂಭ
ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
IND vs SA 1st T20 Live Score: ಭಾರತ ತಂಡ
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ವರುಣ್ ಚಕ್ರವರ್ತಿ.
IND vs SA 1st T20 Live Score: ದಕ್ಷಿಣ ಆಫ್ರಿಕಾ ತಂಡ
ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಏಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಪ್ಯಾಟ್ರಿಕ್ ಕ್ರುಗರ್, ಮಾರ್ಕೊ ಯಾನ್ಸೆನ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ನಕಬಯೋಮ್ಜಿ ಪೀಟರ್.
IND vs SA 1st T20 Live Score: ಟಾಸ್ ಗೆದ್ದ ಆಫ್ರಿಕಾ
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
IND vs SA 1st T20 Live Score: ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವೈಶಾಖ್ ವಿಜಯಕುಮಾರ್, ಅವೇಶ್ ಖಾನ್, ಯಶ್ ದಯಾಳ್.
IND vs SA 1st T20 Live Score: ಡರ್ಬನ್‌ನಲ್ಲಿ ಸರಣಿಯ ಮೊದಲ ಪಂದ್ಯ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 2024ರ ಟಿ20 ವಿಶ್ವಕಪ್ ಬಳಿಕ ಉಭಯ ತಂಡಗಳ ನಡುವಿನ ಮೊದಲ ಹಣಾಹಣಿ ಇದಾಗಿದೆ.
Published On - Nov 08,2024 7:50 PM