AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಔಟಾದ ಟೆನ್ಶನ್​ನಲ್ಲಿ ದಾರಿ ತಪ್ಪಿದ ರಿಷಭ್ ಪಂತ್..!

India vs South Africa: ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (58), ಚೇತೇಶ್ವರ ಪೂಜಾರ (54) ತಂಡಕ್ಕೆ ಆಸರೆಯಾದರು. ಉಳಿದ ಆಟಗಾರರ ನೀರಸ ಪ್ರದರ್ಶನದ ಹೊರತಾಗಿಯೂ ಹನುಮ ವಿಹಾರಿ ಅವರ ರಕ್ಷಣಾತ್ಮಕ ಆಟದೊಂದಿಗೆ ಅಜೇಯ 40 ರನ್​ಗಳಿಸಿ ತಂಡದ ಮೊತ್ತವನ್ನು 250 ರನ್​ಗಳ ಗಡಿದಾಟಿಸಿದರು.

Viral Video: ಔಟಾದ ಟೆನ್ಶನ್​ನಲ್ಲಿ ದಾರಿ ತಪ್ಪಿದ ರಿಷಭ್ ಪಂತ್..!
Rishabh Pant
TV9 Web
| Updated By: ಝಾಹಿರ್ ಯೂಸುಫ್|

Updated on:Jan 05, 2022 | 7:41 PM

Share

ಭಾರತ – ದಕ್ಷಿಣ ಆಫ್ರಿಕಾ ನಡುವಣ 2ನೇ ಟೆಸ್ಟ್​ ಪಂದ್ಯದ ಮೂರನೇ ದಿನ ರಿಷಭ್ ಪಂತ್ ಹಾಗೂ ರಸ್ಸಿ ವಂಡೆರ್ ಡುಸ್ಸೆನ್ ನಡುವೆ ಮಾತಿನ ಚಕಮಕಿ ನಡೆಯಿತು. ಪಂತ್ ಬ್ಯಾಟಿಂಗ್‌ಗೆ ಇಳಿದಾಗ ಭಾರತ 163 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಅದಾಗಲೇ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ್ದರು. ಇಂತಹ ಸಂದರ್ಭದಲ್ಲೇ ಟೀಮ್ ಇಂಡಿಯಾಗೆ ರಕ್ಷಣಾತ್ಮಕ ಆಟದೊಂದಿಗೆ ಮತ್ತೊಂದು ಜೊತೆಯಾಟದ ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾ ಆಟಗಾರರು ಕೆಣಕುತ್ತಿದ್ದಂತೆ ರಿಷಭ್ ಪಂತ್ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದ್ದ ದಕ್ಷಿಣ ಆಫ್ರಿಕಾಗೆ ರಿಷಭ್ ಪಂತ್ ಅವರ ವಿಕೆಟ್ ನಿರ್ಣಾಯಕವಾಗಿತ್ತು. ಹೀಗಾಗಿ ಪಂತ್ ಆಗಮಿಸುತ್ತಿದ್ದಂತೆ ರಸ್ಸಿ ವಂಡೆರ್ ಡುಸ್ಸೆನ್ ಕೆಣಕಲು ಆರಂಭಿಸಿದ್ದರು. ಮೊದಲ ಎರಡು ಎಸೆತಗಳನ್ನು ಪಂತ್ ಆ ಬಳಿಕ ಮುನ್ನುಗ್ಗಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್​​ಗೆ ಕ್ಯಾಚ್ ನೀಡಿದರು. ಪಂತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ರಬಾಡ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.

ಹೀಗೆ ಬೇಜವಾಬ್ದಾರಿಯಿಂದ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ಪೆವಿಲಿಯನ್​ನತ್ತ ಟೆನ್ಶನ್​ನಲ್ಲೇ ಹೆಜ್ಜೆ ಹಾಕಿದರು. ಇದೇ ಟೆನ್ಶನ್​ನಲ್ಲಿ ಪಂತ್ ಟೀಮ್ ಇಂಡಿಯಾ ಬದಲಿಗೆ ದಕ್ಷಿಣ ಆಫ್ರಿಕಾದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದರು. ಇತ್ತ ಮೈದಾನದಲ್ಲಿದ್ದ ದಕ್ಷಿಣ ಆಫ್ರಿಕಾ ಆಟಗಾರರಿಗೂ ಶಾಕ್. ಏಕೆಂದರೆ ರಿಷಭ್ ಪಂತ್ ಯಾಕಾಗಿ ನಮ್ಮ ಡ್ರೆಸ್ಸಿಂಗ್ ರೂಮ್​ಗೆ ಹೋಗುತ್ತಿದ್ದಾರೆ ಎಂದು ಚರ್ಚಿಸಿದರು. ಕ್ಷಣಾರ್ಧದಲ್ಲೇ ಪಂತ್ ರೂಮ್ ಬದಲಾಗಿರುವುದು ತಿಳಿದು ಮರಳಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನತ್ತ ಹೆಜ್ಜೆಹಾಕಿದರು. ಇದೀಗ ರಿಷಭ್ ಪಂತ್ ಅವರ ವಿಡಿಯೋ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಅಶ್ವಿನ್ ಅವರ 46 ರನ್​ಗಳ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 202 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಶಾರ್ದೂಲ್ ಠಾಕೂರ್ (7 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿ 229 ರನ್​ಗೆ ಸರ್ವಪತನ ಕಂಡಿತು. ಇದರ ಬೆನ್ನಲ್ಲೇ 2ನೇ ಇನಿಂಗ್ಸ್​ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (58), ಚೇತೇಶ್ವರ ಪೂಜಾರ (54) ತಂಡಕ್ಕೆ ಆಸರೆಯಾದರು. ಉಳಿದ ಆಟಗಾರರ ನೀರಸ ಪ್ರದರ್ಶನದ ಹೊರತಾಗಿಯೂ ಹನುಮ ವಿಹಾರಿ ಅವರ ರಕ್ಷಣಾತ್ಮಕ ಆಟದೊಂದಿಗೆ ಅಜೇಯ 40 ರನ್​ಗಳಿಸಿ ತಂಡದ ಮೊತ್ತವನ್ನು 250 ರನ್​ಗಳ ಗಡಿದಾಟಿಸಿದರು. ಕಗಿಸೊ ರಬಾಡ, ಲುಂಗಿ ಎನ್​ಗಿಡಿ ಹಾಗೂ ಮಾರ್ಕೊ ಜಾನ್ಸನ್ ಅವರ ಮಾರಕ ದಾಳಿಯಿಂದಾಗಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್​ ಅನ್ನು 266 ರನ್​ಗಳಿಗೆ ಅಂತ್ಯಗೊಳಿಸಿತು. ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ಇದೀಗ 240 ರನ್​ಗಳ ಟಾರ್ಗೆಟ್ ಪಡೆದಿರುವ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ಆರಂಭಿಸಿದೆ. ಇದೀಗ 3ನೇ ದಿನದಾಟ ನಡೆಯುತ್ತಿದ್ದು, ಇನ್ನೂ ಕೂಡ 2 ದಿನಗಳ ಆಟ ಬಾಕಿಯಿದೆ. ಹೀಗಾಗಿ ದಕ್ಷಿಣ ಆಫ್ರಿಕಾಗೆ ಗೆಲ್ಲುವ ಅವಕಾಶ ಹೆಚ್ಚಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(India vs south africa 2nd test: Rishabh Pant went to the wrong dressing room after dismissal)

Published On - 7:15 pm, Wed, 5 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ