IND vs SA: ‘ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಮಣಿಸುತ್ತೇವೆ’; ಗಿಲ್ ಪಡೆಗೆ ಮಹಾರಾಜರ ಎಚ್ಚರಿಕೆ
India vs South Africa Test: ಆರು ವರ್ಷಗಳ ನಂತರ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಟೆಸ್ಟ್ ಕ್ರಿಕೆಟ್ ಮರಳುತ್ತಿದೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 14 ರಂದು ಪಂದ್ಯ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್, ಭಾರತದಲ್ಲಿ ಟೆಸ್ಟ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿಲ್ಲ, ಬದಲಿಗೆ ಸಾಂಪ್ರದಾಯಿಕ ಟೆಸ್ಟ್ ವಿಕೆಟ್ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಆರು ವರ್ಷಗಳ ಕಾಯುವಿಕೆಯ ನಂತರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಟೆಸ್ಟ್ ಕ್ರಿಕೆಟ್ ಮರಳುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟೆಸ್ಟ್ ಸರಣಿಯು ನವೆಂಬರ್ 14, ಶುಕ್ರವಾರ ಈ ಐತಿಹಾಸಿಕ ಮೈದಾನದಲ್ಲಿ ಪ್ರಾರಂಭವಾಗಲಿದೆ. ಅಲ್ಲದೆ ಭಾರತ ಮತ್ತು ದಕ್ಷಿಣ ಆಫ್ರಿಕಾ 15 ವರ್ಷಗಳ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಜಯ ಸಾಧಿಸಿತ್ತು. ಆದರೆ ಈ ಬಾರಿ ಅದು ಅಷ್ಟು ಸುಲಭವಲ್ಲ ಎಂದು ತೋರುತ್ತಿದೆ. ಇದಕ್ಕೆ ಕಾರಣ ಸರಣಿ ಆರಂಭಕ್ಕೂ ಮುನ್ನವೇ ಭಾರತ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿರುವ ಸ್ಪಿನ್ನರ್ ಕೇಶವ್ ಮಹಾರಾಜ್ (Keshav Maharaj) ನೀಡಿರುವ ಹೇಳಿಕೆ.
ಭಾರತವನ್ನು ಸೋಲಿಸಲು ಎದುರು ನೋಡುತ್ತಿದೆ
ವಾಸ್ತವವಾಗಿ ದಕ್ಷಿಣ ಆಫ್ರಿಕಾ ತಂಡವು 15 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಹೀಗಾಗಿ ಈ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಬೇಕೆಂಬ ಇರಾದೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ತಂಡದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿಕೆ ಮತ್ತಷ್ಟು ಬಲ ತುಂಬಿದೆ. ಈ ಸರಣಿಗ ಬಗ್ಗೆ ಮಾತನಾಡಿರುವ ಮಹಾರಾಜ್, ‘ನಮ್ಮ ತಂಡವು ಭಾರತದಲ್ಲಿ ಭಾರತವನ್ನು ಸೋಲಿಸಲು ನಿಜವಾಗಿಯೂ ಎದುರು ನೋಡುತ್ತಿದೆ. ಇದು ಬಹುಶಃ ಅತ್ಯಂತ ಕಠಿಣ ಪ್ರವಾಸಗಳಲ್ಲಿ ಒಂದಾಗಿದೆ. ಇದು ನಮ್ಮ ಅತಿದೊಡ್ಡ ಟೆಸ್ಟ್ ಸರಣಿಗಳಲ್ಲಿ ಒಂದಾಗಿದೆ ಎಂದು ನಾವು ಭಾವಿಸುತ್ತೇವೆ. ನಮ್ಮನ್ನು ನಾವು ನಿರ್ಣಯಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿರುತ್ತದೆ. ನಾವು ಎಲ್ಲಿದ್ದೇವೆ ಎಂಬುದನ್ನು ಕಂಡುಹಿಡಿಯಲು ಇದು ನಮಗೆ ಅವಕಾಶವನ್ನು ನೀಡುತ್ತದೆ.
ಸ್ಪಿನ್ ಬೌಲರ್‌ಗಳಿಗೆ ಸಹಾಯ
‘ನಾವು ಉಪಖಂಡದ ಇತರ ಭಾಗಗಳಲ್ಲಿ ಗೆಲ್ಲಲು ಪ್ರಾರಂಭಿಸಿದ್ದೇವೆ ಮತ್ತು ನಮ್ಮ ತಂಡದಲ್ಲಿ ಭಾರತದಲ್ಲಿ ನಿಜವಾಗಿಯೂ ಗೆಲ್ಲಬೇಕೆಂಬ ಬಲವಾದ ಹಸಿವು ಮತ್ತು ಬಯಕೆ ಇದೆ. ನಾವು ಪಾಕಿಸ್ತಾನದಲ್ಲಿ ನೋಡಿದಂತೆ ಇಲ್ಲಿನ ಪರಿಸ್ಥಿತಿಗಳು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತವೆ ಎಂದು ನಾನು ಭಾವಿಸುವುದಿಲ್ಲ. ವಿಕೆಟ್‌ಗಳು ಉತ್ತಮವಾಗಿರುತ್ತವೆ ಮತ್ತು ಆಟ ಮುಂದುವರೆದಂತೆ ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನೋಡಬಹುದಾದಂತೆ, ಭಾರತವು ಬಹುಶಃ ಸಾಂಪ್ರದಾಯಿಕ ಟೆಸ್ಟ್ ವಿಕೆಟ್‌ಗೆ ಆದ್ಯತೆ ನೀಡುತ್ತದೆ. ನೀವು ವೆಸ್ಟ್ ಇಂಡೀಸ್ ಮತ್ತು ಭಾರತ ಸರಣಿಗಳನ್ನು ವೀಕ್ಷಿಸಿದ್ದರೆ, ಆ ಸರಣಿಗೆ ಉತ್ತಮ ವಿಕೆಟ್‌ಗಳನ್ನು ಸಿದ್ಧಪಡಿಸಲಾಗಿತ್ತು. ಪಂದ್ಯಗಳು ನಾಲ್ಕನೇ ಮತ್ತು ಐದನೇ ದಿನಕ್ಕೆ ಹೋದವು. ಆದ್ದರಿಂದ ವಿಕೆಟ್‌ಗಳ ವಿಧಾನ ಬದಲಾಗುತ್ತಿದೆ ಎಂದು ನಾನು ನಂಬುತ್ತೇನೆ.
IND vs SA: ಮೊದಲ ಟೆಸ್ಟ್‌ಗಾಗಿ ಕೋಲ್ಕತ್ತಾಗೆ ಬಂದಿಳಿದ ಭಾರತ- ಆಫ್ರಿಕಾ ಆಟಗಾರರು
‘ಇತ್ತ ಭಾರತ ತಂಡ ಕೂಡ ಪರಿವರ್ತನೆಯ ಅವಧಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ನಾವು ನೋಡಿದಂತೆ ಅವರು ಉತ್ತಮ ವಿಕೆಟ್‌ಗಳಲ್ಲಿ ಆಡುವುದನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆ ವೇಗವನ್ನು ಕಾಯ್ದುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಟಾಸ್‌ನ ಫಲಿತಾಂಶ ಏನೇ ಇರಲಿ, ಪಂದ್ಯವನ್ನು ನಮ್ಮ ಪರವಾಗಿ ಪಡೆಯಲು ನಾವು ಯಾವುದೇ ಅವಕಾಶವನ್ನು ಬಿಡುವುದಿಲ್ಲ’ ಎಂದು ಕೇಶವ್ ಮಹಾರಾಜ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
