IND vs USA, U19 World Cup: ಅಂಡರ್-19 ವಿಶ್ವಕಪ್​ನಲ್ಲಿಂದು ಭಾರತಕ್ಕೆ ಅಮೇರಿಕ ಸವಾಲು: ಹ್ಯಾಟ್ರಿಕ್ ಜಯ ಸಾಧಿಸುತ್ತಾ ಉದಯ್ ಪಡೆ?

|

Updated on: Jan 28, 2024 | 9:15 AM

IND vs USA Live Streaming: ಟೀಮ್ ಇಂಡಿಯಾ ಎ ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡವನ್ನು ಸೋಲಿಸಿ ಭಾರತ ಸತತ ಎರಡು ಗೆಲುವು ಸಾಧಿಸಿದೆ. ಹೀಗಾಗಿ ಇದೀಗ ಟೀಮ್ ಇಂಡಿಯಾಗೆ ಅಮೆರಿಕ ವಿರುದ್ಧ ಹ್ಯಾಟ್ರಿಕ್ ಗೆಲ್ಲುವ ಅವಕಾಶವಿದೆ.

IND vs USA, U19 World Cup: ಅಂಡರ್-19 ವಿಶ್ವಕಪ್​ನಲ್ಲಿಂದು ಭಾರತಕ್ಕೆ ಅಮೇರಿಕ ಸವಾಲು: ಹ್ಯಾಟ್ರಿಕ್ ಜಯ ಸಾಧಿಸುತ್ತಾ ಉದಯ್ ಪಡೆ?
USA vs IND
Follow us on

ಐಸಿಸಿ ಅಂಡರ್- 19 ವಿಶ್ವಕಪ್ 2024 ಟೂರ್ನಿಯಲ್ಲಿ ಇದುವರೆಗೆ 22 ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಟೂರ್ನಿಯ 23ನೇ ಪಂದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಅಮೆರಿಕ (India vs USA) ನಡುವೆ ನಡೆಯಲಿದೆ. ಉದಯ್ ಸಹರಾನ್ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರಿಷಿ ರಮೇಶ್ ಅಮೆರಿಕದ ನಾಯಕರಾಗಿದ್ದಾರೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಹ್ಯಾಟ್ರಿಕ್ ಜಯವನ್ನು ಎದುರು ನೋಡುತ್ತಿದೆ. ಹಾಗಾದರೆ ಈ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದನ್ನು ವಿವರವಾಗಿ ನೋಡೋಣ.

ಟೀಮ್ ಇಂಡಿಯಾ vs USA ಪಂದ್ಯ ಯಾವಾಗ?
ಜನವರಿ 28 ರ ಭಾನುವಾರದಂದು ಟೀಮ್ ಇಂಡಿಯಾ ಮತ್ತು ಯುಎಸ್ಎ ನಡುವಿನ ಪಂದ್ಯ ನಡೆಯಲಿದೆ.

ಟೀಮ್ ಇಂಡಿಯಾ vs USA ಪಂದ್ಯ ಎಲ್ಲಿ ನಡೆಯಲಿದೆ?
ಟೀಂ ಇಂಡಿಯಾ ಮತ್ತು ಯುಎಸ್ಎ ನಡುವಿನ ಪಂದ್ಯವು ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ
ರೋಹಿತ್ ಕಾಲು ಮುಟ್ಟಿ ಸಮಸ್ಕರಿಸಿದ ಕೊಹ್ಲಿ ಅಭಿಮಾನಿ ಜೈಲು ಪಾಲು
ಆಂಗ್ಲರಿಗೆ ಪೋಪ್ ಆಸರೆ: ರೋಚಕತೆ ಸೃಷ್ಟಿಸಿದ ಇಂದಿನ ನಾಲ್ಕನೇ ದಿನದಾಟ
ಆರ್​ಸಿಬಿಗೆ ಬಿಗ್ ಶಾಕ್; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವಿದೇಶಿ ಪ್ಲೇಯರ್
ವಿಂಡೀಸ್ ಆಟಗಾರನ ಕಾಲ್ಬೆರಳನ್ನು ಮುರಿದ ಸ್ಟಾರ್ಕ್​ ಎಸೆದ ಬೆಂಕಿ ಚೆಂಡು!

ಟೀಮ್ ಇಂಡಿಯಾ vs USA ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಟೀಂ ಇಂಡಿಯಾ vs USA ಪಂದ್ಯ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಟಾಸ್ 1 ಗಂಟೆಗೆ ನಡೆಯಲಿದೆ.

ಆರ್​ಸಿಬಿಗೆ ಬಿಗ್ ಶಾಕ್; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವಿದೇಶಿ ಪ್ಲೇಯರ್..!

ಟೀಮ್ ಇಂಡಿಯಾ vs USA ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬಹುದು?
ಟೀಮ್ ಇಂಡಿಯಾ vs USA ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.

ಟೀಮ್ ಇಂಡಿಯಾ vs USA ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ನೋಡಬೇಕು?
ಟೀಮ್ ಇಂಡಿಯಾ vs USA ಪಂದ್ಯವನ್ನು ಮೊಬೈಲ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಟೀಮ್ ಇಂಡಿಯಾ ನಂಬರ್ 1

ಟೀಮ್ ಇಂಡಿಯಾ ಎ ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡವನ್ನು ಸೋಲಿಸಿ ಭಾರತ ಸತತ ಎರಡು ಗೆಲುವು ಸಾಧಿಸಿದೆ. ಹೀಗಾಗಿ ಇದೀಗ ಟೀಮ್ ಇಂಡಿಯಾಗೆ ಅಮೆರಿಕ ವಿರುದ್ಧ ಹ್ಯಾಟ್ರಿಕ್ ಗೆಲ್ಲುವ ಅವಕಾಶವಿದೆ.

ಟೀಮ್ ಇಂಡಿಯಾ: ಉದಯ್ ಸಹರನ್ (ನಾಯಕ), ಅರವೇಲಿ ಅವನೀಶ್ (ವಿಕೆಟ್ ಕೀಪರ್), ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುರುಗನ್ ಅಭಿಷೇಕ್, ಧನುಷ್ ಗೌಡ, ಸೌಮ್ಯ ಪಾಂಡೆ, ನಮನ್ ತಿವಾರಿ, ಆರಾಧ್ಯ ಶುಕ್ಲಾ, ಪ್ರೇ ರುದ್ರಾ ಪಟೇಲ್ ಮೊಹಮ್ಮದ್ ಎ. , ಇನೇಶ್ ಮಹಾಜನ್, ರಾಜ್ ಲಿಂಬಾನಿ ಮತ್ತು ಅಂಶ್ ಗೋಸಾಯಿ.

ಯುನೈಟೆಡ್ ಸ್ಟೇಟ್ಸ್: ರಿಷಿ ರಮೇಶ್ (ನಾಯಕ), ಪ್ರಣವ್ ಚೆಟ್ಟಿಪಾಳ್ಯಂ (ವಿಕೆಟ್ ಕೀಪರ್), ಭವ್ಯ ಮೆಹ್ತಾ, ಸಿದ್ಧಾರ್ಥ್ ಕಪ್ಪಾ, ಉತ್ಕರ್ಷ್ ಶ್ರೀವಾಸ್ತವ, ಅಮೋಘ್ ಅರೆಪಲ್ಲಿ, ಪಾರ್ಥ್ ಪಟೇಲ್, ಖುಷ್ ಭಲಾಲ, ಅರಿನ್ ನಾಡಕರ್ಣಿ, ಈತೇಂದ್ರ ಸುಬ್ರಮಣ್ಯಂ, ಆರ್ಯ ಗರ್ಗ್, ಮಾನವ್ ನಾಯಕ್, ಆರ್ಯಮಾನ್ ಸೂರಿ, ಅರ್ಜುನ್, ಮಹೇಶ್, ಅರ್ಜುನ್ , ಆರ್ಯನ್ ಬಾತ್ರಾ ಮತ್ತು ರಯಾನ್ ಭಗಾನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ