IND vs WI: ಇಡೀ ಸರಣಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ದಿಟ್ಟ ಪ್ರತಿರೋಧ ಒಡ್ಡಿದ ವಿಂಡೀಸ್
IND vs WI 2nd Test: ದೆಹಲಿಯಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್‌ನ ಮೂರನೇ ದಿನದಾಟ ಅಂತ್ಯವಾಗಿದೆ. ಫಾಲೋ ಆನ್ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್, 173/2 ರನ್ ಗಳಿಸಿ ಭಾರತಕ್ಕೆ ದಿಟ್ಟ ಪ್ರತಿರೋಧ ಒಡ್ಡಿದೆ. ಕ್ಯಾಂಪ್‌ಬೆಲ್ ಹಾಗೂ ಹೋಪ್ ಅಜೇಯ 138 ರನ್ ಜೊತೆಯಾಟ ನಡೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದ್ದರು.

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟ ಮುಗಿದಿದೆ. ಫಾಲೋ ಆನ್ ಹೊತ್ತು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ಎರಡು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದೆ. ತಂಡವು ಇನ್ನೂ ಭಾರತಕ್ಕಿಂತ 97 ರನ್ ಹಿಂದಿದೆ. ಈ ಟೆಸ್ಟ್ ಅಥವಾ ಈ ಸರಣಿಯಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್, ಭಾರತಕ್ಕೆ ಪ್ರತಿರೋಧ ತೋರುವ ಕೆಲಸ ಮಾಡುತ್ತಿದೆ. 35 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡ ನಂತರ ಜೊತೆಯಾದ ಜಾನ್ ಕ್ಯಾಂಪ್ ಬೆಲ್ ಮತ್ತು ಶೈ ಹೋಪ್ ಈಗ ಮೂರನೇ ವಿಕೆಟ್ಗೆ 207 ಎಸೆತಗಳಲ್ಲಿ ಅಜೇಯ 138 ರನ್ಗಳ ಜೊತೆಯಾಟ ನೀಡಿದ್ದಾರೆ. ಕ್ಯಾಂಪ್ ಬೆಲ್ 87 ರನ್ ಮತ್ತು ಹೋಪ್ 66 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್
518 ರನ್ಗಳ ಗುರಿ ಬೆನ್ನಟ್ಟಿದ ವಿಂಡೀಸ್ 248 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. 140 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಆರಂಭಿಸಿದ ವೆಸ್ಟ್ ಇಂಡೀಸ್ ಉಳಿದ ಆರು ವಿಕೆಟ್‌ಗಳನ್ನು ಕೇವಲ 108 ರನ್ಗಳಿಗೆ ಕಳೆದುಕೊಂಡಿತು. ಕುಲ್ದೀಪ್ ಯಾದವ್ ಮಾರಕ ಬೌಲಿಂಗ್ ಮಾಡಿ ಐದು ವಿಕೆಟ್‌ಗಳನ್ನು ಪಡೆದರು.
That’s stumps on Day 3️⃣!
A wicket each for Mohd. Siraj and Washington Sundar 👍
West Indies trail #TeamIndia by 9️⃣7️⃣ runs (f/o)
Scorecard ▶️ https://t.co/GYLslRzj4G#INDvWI | @IDFCFIRSTBank pic.twitter.com/UVnrWKJ3Zb
— BCCI (@BCCI) October 12, 2025
ಕುಲ್ದೀಪ್ ಯಾದವ್ ಮೊದಲು, ಶೈ ಹೋಪ್ (36), ಟೆವಿನ್ ಇಮ್ಲಾಚ್ (21) ಮತ್ತು ಜಸ್ಟಿನ್ ಗ್ರೀವ್ಸ್ (17) ಅವರನ್ನು ಔಟ್ ಮಾಡಿದರು. ನಂತರ ಸಿರಾಜ್ ಕೇವಲ ಒಂದು ರನ್ ಗಳಿಸಿದ ಜೋಮೆಲ್ ವಾರಿಕನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ಬುಮ್ರಾ, ಕೇವಲ 23 ರನ್ ಗಳಿಸಿದ ಖಾರಿ ಪಿಯರೆ ಅವರನ್ನು ಬೌಲ್ಡ್ ಮಾಡಿದರು. ಕೊನೆಯಲ್ಲಿ ಕುಲ್ದೀಪ್, ಜೇಡನ್ ಸೀಲ್ಸ್ (13) ರನ್ನು ಔಟ್ ಮಾಡಿದರು. ಆಂಡರ್ಸನ್ ಫಿಲಿಪ್ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಜಾನ್ ಕ್ಯಾಂಪ್ಬೆಲ್ 10 ರನ್, ತೇಜ್ನಾರಾಯಣ್ ಚಂದ್ರಪಾಲ್ 34 ರನ್, ಅಲಿಕ್ ಅಥನಾಜೆ 41 ರನ್ ಹಾಗೂ ನಾಯಕ ರೋಸ್ಟನ್ ಚೇಸ್ 10 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Sun, 12 October 25
