AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು: ರೋಹಿತ್ ಪಡೆಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ

India vs Bangladesh, T20 World Cup: ಪಾಯಿಂಟ್ ಟೇಬಲ್​ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ಬಾರತ ತಂಡಕ್ಕೆ ಇಂದಿನ ಬಾಂಗ್ಲಾದೇಶ ವಿರುದ್ಧದ ಪಂದ್ಯ ಮುಖ್ಯವಾಗಿದೆ. ಗೆದ್ದರಷ್ಟೆ ಸೆಮಿ ಫೈನಲ್ ಆಸೆಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಬಹುದು.

IND vs BAN: ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು: ರೋಹಿತ್ ಪಡೆಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ
IND vs BAN
TV9 Web
| Updated By: Vinay Bhat|

Updated on:Nov 02, 2022 | 9:43 AM

Share

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿಂದು (ICC T20 World Cup 2022) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಮ್ಯಾಚ್​ನಲ್ಲಿ ಜಿಂಬಾಬ್ವೆ ಹಾಗೂ ನೆದರ್​ಲೆಂಡ್ಸ್ ತಂಡ ಮುಖಾಮುಖಿ ಆದರೆ, ಮಧ್ಯಾಹ್ನ 1:30ಕ್ಕೆ ಶುರುವಾಗಲಿರುವ ದ್ವಿತೀಯ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶವನ್ನು (India vs Bangladesh) ಎದುರಿಸಲಿದೆ. ಇಂಡೋ-ಬಾಂಗ್ಲಾ ಕದನ ಅಡಿಲೇಡ್​ನ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪಾಯಿಂಟ್ ಟೇಬಲ್​ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ರೋಹಿತ್ (Rohit Sharma) ಪಡೆಗೆ ಈ ಪಂದ್ಯ ಮುಖ್ಯವಾಗಿದೆ. ಗೆದ್ದರಷ್ಟೆ ಸೆಮಿ ಫೈನಲ್ ಆಸೆಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಬಹುದು. ಸೋತರೆ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಹಾದಿ ಕಷ್ಟವಾಗಲಿದೆ. ಅತ್ತ ಬಾಂಗ್ಲಾದೇಶ ಸ್ಥಿತಿ ಕೂಡ ಭಾರತದ ರೀತಿಯಲ್ಲೇ ಇದೆ. ದೊಡ್ಡ ಅಂತರದ ಗೆಲುವು ಶಕಿಬ್ ಪಡೆಗೆ ಅನಿವಾರ್ಯ. ಹೀಗಾಗಿ ಅಡಿಲೇಡ್​ನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಭಾರತಕ್ಕೆ ಪ್ಲೇಯಿಂಗ್ XI ಚಿಂತೆ:

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ IXನಲ್ಲಿ ಬದಲಾವಣೆ ಖಚಿತ. ಇಂಜುರಿ ಸಮಸ್ಯೆ ಕೂಡ ಟೀಮ್ ಇಂಡಿಯಾಕ್ಕೆ ಕಾಡುತ್ತಿದೆ. ಮೊದಲನೆಯದಾಗಿ ಕೆಎಲ್ ರಾಹುಲ್ ಫಾರ್ಮ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂದು ಪಂದ್ಯದಲ್ಲಿ ತಂಡ ಉತ್ತಮ ಆರಂಭ ಪಡೆದುಕೊಳ್ಳುವುದು ಮುಖ್ಯ. ಆದರೆ, ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಓಪನರ್​ಗಳು ಸಂಪೂರ್ಣ ವಿಫರಾಗಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಕಡೆಯಿಂದ ರನ್ ಬರುತ್ತಿಲ್ಲ. ಹೀಗಿದ್ದರೂ ರಾಹುಲ್​ಗೆ ಕೊನೆಯ ಅವಕಾಶ ನೀಡುವ ಸಾಧ್ಯತೆ ಇದೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು ನಂತರದ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತುಂಬಲಿದ್ದಾರೆ.

ಇದನ್ನೂ ಓದಿ
Image
ENG vs NZ: 152 ಕಿ.ಮೀ ವೇಗದ ಎಸೆತವನ್ನು ಅಷ್ಟೇ ವೇಗವಾಗಿ ಸಿಕ್ಸರ್​ಗಟ್ಟಿದ ಕಿವೀಸ್ ಬ್ಯಾಟರ್..! ವಿಡಿಯೋ
Image
IND vs BAN: ಭಾರತ- ಬಾಂಗ್ಲಾ ಪಂದ್ಯಕ್ಕೆ ಮಳೆ ಕಾಟ ಖಚಿತ! ಮ್ಯಾಚ್ ರದ್ದಾದರೆ ಉಭಯ ತಂಡಗಳಿಗೂ ಸಂಕಷ್ಟ
Image
ENG vs NZ: ಕಿವೀಸ್ ಕಿವಿ ಹಿಂಡಿದ ಆಂಗ್ಲರು; ಕಾಂಗರೂಗಳು ಕೊನೆಯ ಪಂದ್ಯ ಗೆದ್ದರೂ ಸೇಮಿಸ್​ಗೇರುವುದು ಕಷ್ಟ..!
Image
ಗಿಲ್ ಸಿಡಿಲಬ್ಬರದ ಶತಕ; ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್..!

ಭಾರತದ 6ನೇ ಹಾಗೂ 7ನೇ ಕ್ರಮಾಂಕಕ್ಕೆ ಯಾವ ಪ್ಲೇಯರ್ ಎಂಬ ಗೊಂದಲ ಮೂಡಿದೆ. ಯಾಕೆಂದರೆ ದಿನೇಶ್ ಕಾರ್ತಿಕ್ ಇಂಜುರಿಗೆ ತುತ್ತಾದ ಪರಿಣಾಮ ಬಾಂಗ್ಲಾ ವಿರುದ್ಧ ಆಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಇವರ ಬದಲು ರಿಷಭ್ ಪಂತ್ ವಿಕೆಟ್ ಕೀಪಿಂಗ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಅಂತೆಯೆ ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದಿದ್ದ ದೀಪಕ್ ಹೂಡ ಯಾವುದೇ ಕಮಾಲ್ ಮಾಡಲಿಲ್ಲ. ಹೀಗಾಗಿ ಅಕ್ಷರ್ ಪ್ಲೇಯಿಂಗ್ ಇಲೆವೆನ್​ಗೆ ಮರಳುವ ಸಾಧ್ಯತೆ ಹೆಚ್ಚಿದೆ. ರವಿಚಂದ್ರನ್ ಅಶ್ವಿನ್ ಜಾಗಕೂಡ ಭದ್ರವಿಲ್ಲ. ಯುಜ್ವೇಂದ್ರ ಚಹಲ್ ಅವರು ಅಶ್ವಿನ್ ಜಾಗದಲ್ಲಿ ಆಡಿದರೆ ಅಚ್ಚರಿ ಪಡಬೇಕಿಲ್ಲ. ವೇಗಿಗಳಾಗಿ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಅರ್ಶ್​ದೀಪ್ ಸಿಂಗ್ ಇರಲಿದ್ದಾರೆ.

ಇತ್ತ ಬಾಂಗ್ಲಾದೇಶ ತಂಡವನ್ನು ಕಡೆಗಣಿಸುವಂತಿಲ್ಲ. ಅಂಕಿ-ಅಂಶ ಗಮನಿಸಿದರೆ ಭಾರತ ಮೇಲುಗೈ ಸಾಧಿಸಿರಬಹುದು. ಆದರೆ, ಬಹುತೇಕ ಎಲ್ಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ಬಾಂಗ್ಲಾ ಕಠಿಣ ಪೈಪೋಟಿ ನೀಡಿದೆ. ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್ ಶಾಕಿಬ್ ಅಲ್ ಹಸನ್ ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ಮುಸ್ತಫಿಜುರ್ ರೆಹಮಾನ್​ರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದಾರೆ.

ಮಳೆ ಇದೆಯೇ?:

ಅಡಿಲೇಡ್​ನಲ್ಲಿ ಮಂಗಳವಾರ ನಿರಂತರವಾಗಿ ಮಳೆಯಾಗಿದ್ದು ಬುಧವಾರವೂ ಸಹ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬುಧವಾರ ಸಂಜೆ ಶೇಕಡ 60 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಕಾಲಮಾನಾದ ಪ್ರಕಾರ ಪಂದ್ಯ ಸಂಜೆ 6:30ಕ್ಕೆ ಆರಂಭವಾಗುವುದರಿಂದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ಅಷ್ಟೇ ಅಲ್ಲದೆ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗಾಳಿ ಕೂಡ 20ರಿಂದ 30 ಕಿ.ಮೀ ವೇಗದಲ್ಲಿ ಬೀಸಲಿದೆಯಂತೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್.

ಬಾಂಗ್ಲಾದೇಶ ತಂಡ: ಶಕಿಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಹಸನ್ ಮಹ್ಮದ್, ಎಬಾಡೋತ್ ಇಸ್ಲಾಮ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಯಾಸಿರ್ ಅಲಿ, ಇಬಾಡೋತ್ ಇಸ್ಲಾಮಿನ್, ಮುಸ್ತಫಿಜುರ್ ರೆಹಮಾನ್.

Published On - 7:35 am, Wed, 2 November 22