IPL 2021: ವಾರ್ನರ್​ಗೆ ಕೋಕ್, ಜೇಸನ್ ರಾಯ್​ಗೆ ಅವಕಾಶ; ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ ಹೀಗಿದೆ

TV9 Digital Desk

| Edited By: ಪೃಥ್ವಿಶಂಕರ

Updated on: Sep 27, 2021 | 7:23 PM

IPL 2021: ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ, ಇಂಗ್ಲೆಂಡಿನ ಜೇಸನ್ ರಾಯ್ ಕೊನೆಯ -11 ರಲ್ಲಿ ಸ್ಥಾನ ಪಡೆದಿದ್ದಾರೆ. ವಾರ್ನರ್ ಅವರ ಇತ್ತೀಚಿನ ಫಾರ್ಮ್ ಕಳಪೆಯಾಗಿದೆ.

IPL 2021: ವಾರ್ನರ್​ಗೆ ಕೋಕ್, ಜೇಸನ್ ರಾಯ್​ಗೆ ಅವಕಾಶ; ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ ಹೀಗಿದೆ
ರಾಜಸ್ಥಾನ ರಾಯಲ್ಸ್ Vs ಸನ್ ರೈಸರ್ಸ್ ಹೈದರಾಬಾದ್
Follow us

ಐಪಿಎಲ್ 2021 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪ್ರದರ್ಶನ ತೀರ ಕಳಪೆಯಾಗಿದೆ. ತಂಡವು ಪ್ಲೇಆಫ್‌ ರೇಸ್‌ನಿಂದ ಬಹುತೇಕ ಹೊರಗಿದೆ. ಜೊತೆಗೆ ಕೇನ್ ವಿಲಿಯಮ್ಸನ್ ನಾಯಕತ್ವದ ಈ ತಂಡವು ಪಾಯಿಂಟ್ಸ್ ಟೇಬಲ್​ನ ಕೆಳಭಾಗದಲ್ಲಿದೆ. ತಂಡವು ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದೆ ಮತ್ತು ಎಂಟರಲ್ಲಿ ಸೋತಿದ್ದರೆ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇಂದು ಈ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ. ರಾಜಸ್ಥಾನ ಇನ್ನೂ ಪ್ಲೇಆಫ್‌ ರೇಸ್‌ನಲ್ಲಿದೆ. ಆದಾಗ್ಯೂ, ಅವರ ಜರ್ನಿ ತುಂಬಾ ಕಷ್ಟಕರವಾಗಿದೆ. ರಾಜಸ್ಥಾನದ ತಂಡ ಪ್ರಸ್ತುತ ಆರನೇ ಸ್ಥಾನದಲ್ಲಿದೆ. ಒಂಬತ್ತು ಪಂದ್ಯಗಳಲ್ಲಿ, ನಾಲ್ಕರಲ್ಲಿ ಗೆದ್ದು ಐದರಲ್ಲಿ ಸೋತಿದೆ ಮತ್ತು ಎಂಟು ಅಂಕಗಳನ್ನು ಹೊಂದಿದೆ. ಈಗ ಪ್ರತಿ ಪಂದ್ಯವು ಅವರಿಗೆ ಪ್ಲೇಆಫ್‌ಗೆ ಹೋಗಲು ಬಹಳ ಮುಖ್ಯವಾಗಿದೆ.

ಉಭಯ ತಂಡಗಳ ನಡುವಿನ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಕಾರ್ತಿಕ್ ತ್ಯಾಗಿ ಈ ಪಂದ್ಯವನ್ನು ಆಡುತ್ತಿಲ್ಲ. ಕ್ರಿಸ್ ಮೋರಿಸ್ ಮತ್ತು ಎವಿನ್ ಲೂಯಿಸ್ ತಂಡಕ್ಕೆ ಮರಳಿದ್ದಾರೆ. ತಬ್ರೇಜ್ ಶಮ್ಸಿ ಮತ್ತು ಡೇವಿಡ್ ಮಿಲ್ಲರ್ ಕೂಡ ಹೊರಗೆ ಹೋಗಬೇಕಾಯಿತು. ಅನುಭವಿ ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಅವರಿಗೆ ತ್ಯಾಗಿ ಬದಲಿಗೆ ಅವಕಾಶ ಸಿಕ್ಕಿದೆ.

ವಾರ್ನರ್ ಔಟ್, ರಾಯ್​ಗೆ ಅವಕಾಶ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ, ಇಂಗ್ಲೆಂಡಿನ ಜೇಸನ್ ರಾಯ್ ಕೊನೆಯ -11 ರಲ್ಲಿ ಸ್ಥಾನ ಪಡೆದಿದ್ದಾರೆ. ವಾರ್ನರ್ ಅವರ ಇತ್ತೀಚಿನ ಫಾರ್ಮ್ ಕಳಪೆಯಾಗಿದೆ. ಎರಡನೇ ಹಂತದಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ವಾರ್ನರ್ ಬ್ಯಾಟ್ ಮೌನವಾಗಿದೆ. ಸನ್ ರೈಸರ್ಸ್​ ಪರ ಇದು ರಾಯ್ ಅವರ ಮೊದಲ ಪಂದ್ಯವಾಗಿದೆ. ಈ ಹಿಂದೆ ಅವರು ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಪ್ರಿಯಂ ಗರ್ಗ್ ಅವರಿಗೂ ಅವಕಾಶ ಸಿಕ್ಕಿದೆ. ವಿಲಿಯಮ್ಸನ್ ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್​ಗೆ ಕೋಕ್ ನೀಡಿದ್ದಾರೆ. ಅದೇ ಸಮಯದಲ್ಲಿ, ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯದಿಂದಾಗಿ ಆಡುತ್ತಿಲ್ಲ.

ತಂಡಗಳು ಹೀಗಿವೆ ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯತೇವ್ ಉನದ್ಕಟ್, ಮುಸ್ತಫಿಜುರ್ ರಹಮಾನ್

ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ಕ್ಯಾಪ್ಟನ್), ಜೇಸನ್ ರಾಯ್, ವೃದ್ಧಿಮಾನ್ ಸಹಾ, ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ

ತಾಜಾ ಸುದ್ದಿ

Related Stories

Click on your DTH Provider to Add TV9 Kannada