IPL 2022: ಧೋನಿ ಮುಂದಿದೆ ಹಲವು ದಾಖಲೆಗಳು: ಇದು ಸಾಧ್ಯನಾ?
IPL 2022 MS Dhoni: ಹಲವು ದಾಖಲೆಗಳನ್ನು ನಿರ್ಮಿಸಿರುವ ಧೋನಿ ಐಪಿಎಲ್ನಲ್ಲೂ ಕೆಲ ದಾಖಲೆಗಳನ್ನು ಬರೆಯುವ ವಿದಾಯ ಹೇಳಬಹುದು. ಇದಕ್ಕಾಗಿ ಈ ಬಾರಿಯ 14 ಪಂದ್ಯಗಳು ಧೋನಿ ಅವರ ಮುಂದಿದೆ.
ಮಹೇಂದ್ರ ಸಿಂಗ್ ಧೋನಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರೀಕ್ಷಿತ ಎಂಬಂತೆ ಐಪಿಎಲ್ ಸೀಸನ್ 15 ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಸಿಎಸ್‌ಕೆ ತಂಡದ ಕ್ಯಾಪ್ಟನ್ ಆಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ. ಕೆಲ ಮೂಲಗಳ ಮಾಹಿತಿ ಪ್ರಕಾರ, ಧೋನಿಗೆ ಇದುವೇ ಕೊನೆಯ ಐಪಿಎಲ್. ಹೀಗಾಗಿಯೇ ಅವರು ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಎಂಎಸ್ಡಿ ಇದು ಕೊನೆಯ ಐಪಿಎಲ್ ಆದರೆ, ಹಲವು ದಾಖಲೆಗಳನ್ನು ಬರೆದಿಟ್ಟು ನಿರ್ಗಮಿಸುವ ಅವಕಾಶ ಕೂಡ ಮುಂದಿದೆ. ಏಕೆಂದರೆ ಕ್ರಿಕೆಟ್ ಅಂಗಳದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಧೋನಿ ಐಪಿಎಲ್ನಲ್ಲೂ ಕೆಲ ದಾಖಲೆಗಳನ್ನು ಬರೆಯುವ ವಿದಾಯ ಹೇಳಬಹುದು. ಇದಕ್ಕಾಗಿ ಈ ಬಾರಿಯ 14 ಪಂದ್ಯಗಳು ಧೋನಿ ಅವರ ಮುಂದಿದೆ. ಹಾಗಿದ್ರೆ ಈ ಬಾರಿ ಧೋನಿ ಮುಂದಿರುವ ದಾಖಲೆಗಳು ಯಾವುವು ನೋಡೋಣ…
5000 ರನ್: ಮಹೇಂದ್ರ ಸಿಂಗ್ ಧೋನಿ ಇದುವರೆಗೆ ಐಪಿಎಲ್‌ನಲ್ಲಿ 39.55 ಸರಾಸರಿಯಲ್ಲಿ 4,746 ರನ್ ಗಳಿಸಿದ್ದಾರೆ. ಇದೀಗ ಐಪಿಎಲ್‌ನಲ್ಲಿ 5 ಸಾವಿರ ರನ್ ಪೂರೈಸಲು ಕೇವಲ 254 ರನ್ಗಳ ಅವಶ್ಯಕತೆಯಿದೆ. ಈ ಬಾರಿಯ ಟೂರ್ನಿಯಲ್ಲಿ 254 ರನ್ ಕಲೆಹಾಕಿದರೆ 5000 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
25 ಅರ್ಧಶತಕ: ಧೋನಿ ಐಪಿಎಲ್‌ನಲ್ಲಿ ಇದುವರೆಗೆ 23 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಬಾರಿ 2 ಅರ್ಧಶತಕ ಬಾರಿಸಿದರೆ ಐಪಿಎಲ್‌ನಲ್ಲಿ 25 ಅರ್ಧಶತಕ ಬಾರಿಸಿದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಧೋನಿ ಹೆಸರು ಸೇರ್ಪಡೆಯಾಗಲಿದೆ.
350 ಬೌಂಡರಿ: ಸಿಎಸ್‌ಕೆ ತಂಡದ ಮಾಜಿ ನಾಯಕ ಐಪಿಎಲ್‌ನಲ್ಲಿ ಇದುವರೆಗೆ 325 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಬಾರಿ ಧೋನಿ ಬ್ಯಾಟ್ನಿಂದ 25 ಬೌಂಡರಿಗಳು ಮೂಡಿಬಂದರೆ ಒಟ್ಟು 350 ಬೌಂಡರಿ ಬಾರಿಸಿದ ಆಟಗಾರರ ಪಟ್ಟಿಗೆ ಸೇರಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 14ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
175 ಡಿಸ್ಮಿಸ್: ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆ ನಿಂತು ಇದುವರೆಗೆ 161 ಬಲಿ ಪಡೆದಿದ್ದಾರೆ. ಈ ಬಾರಿ 14 ಬಲಿ ಪಡೆದರೆ ಐಪಿಎಲ್‌ನಲ್ಲಿ 175 (ಸ್ಟಂಪ್-ಕ್ಯಾಚ್) ಬಲಿ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲಿದ್ದಾರೆ.
200 ಪಂದ್ಯ: ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಇದುವರೆಗೆ 220 ಪಂದ್ಯಗಳನ್ನು ಆಡಿದ್ದಾರೆ. ಸಿಎಸ್‌ಕೆ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಪರ ಆಡಿದ್ದ ಧೋನಿ ಒಂದೇ ತಂಡದ ಪರ 200 ಪಂದ್ಯವಾಡಿದ ದಾಖಲೆ ನಿರ್ಮಿಸಲು 10 ಪಂದ್ಯಗಳಲ್ಲಿ ಕಣಕ್ಕಿಳಿಯಬೇಕಿದೆ. ಅದರಂತೆ ಈ ಬಾರಿ ಧೋನಿ 10 ಪಂದ್ಯವಾಡಿದರೆ ಸಿಎಸ್‌ಕೆ ಪರ 200 ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
200 ಸಿಕ್ಸರ್: ಧೋನಿ ಸಿಎಸ್‌ಕೆ ಪರ 189 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 200 ಸಿಕ್ಸ್ಗಳ ಮೈಲಿಗಲ್ಲನ್ನು ತಲುಪಲು ಇನ್ನೂ 11 ಸಿಕ್ಸರ್‌ಗಳ ಅಗತ್ಯವಿದೆ. ಹೀಗಾಗಿ ಈ ಬಾರಿ ಧೋನಿ 200 ಸಿಕ್ಸರ್‌ಗಳ ದಾಖಲೆ ನಿರ್ಮಿಸಬಹುದು.
ಸದ್ಯ 40 ವರ್ಷದ ಹಿರಿಯ ಆಟಗಾರ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿ ಅಂಚಿನಲ್ಲಿ ಯಾವ ದಾಖಲೆ ನಿರ್ಮಿಸಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
ಇದನ್ನೂ ಓದಿ: IPL 2022: ಐಪಿಎಲ್ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ